Advertisement

ನಾಡಹಬ್ಬ ದಸರಾ ಉತ್ಸವಕ್ಕೆ ಭರದ ಸಿದ್ಧತೆ 

05:12 PM Aug 01, 2022 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಎಂದೇ ಬಿಂಬಿತ ವಾಗಿರುವ ಗಜ ಪಯಣಕ್ಕೆ ಜಿಲ್ಲಾಡಳಿ ಮತ್ತು ಅರಣ್ಯ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದ್ದು, ಗಜಪಡೆಯನ್ನು ಅರಮನೆಗೆ ಕರೆತರಲು ಅರಣ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದೆ.

Advertisement

ಆ.7 ರಂದು ಗಜಪಯಣ ನಡೆಯಲಿದ್ದು, ಮೊದಲ ತಂಡದಲ್ಲಿ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಮೈಸೂರಿಗ ಆಗಮಿಸಲಿವೆ. ಅಂಬಾರಿ ಆನೆ ಅಭಿಮನ್ಯು ಜತೆ ಅರ್ಜುನ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ ಹಾಗೂ ಹೆಣ್ಣಾನೆಗಳಾದ ಕಾವೇರಿ,ಚೈತ್ರಾ, ಲಕ್ಷ್ಮೀ, ವಿಜಯ ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.

ವಿಶೇಷ ಎಂದರೆ ಸತತ 8 ಬಾರಿ ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದಿರುವ ಅರ್ಜುನ ಆನೆ ಈ ಬಾರಿ ದಸರಾ ಮಹೋತ್ಸವದಲ್ಲಿ ಮತ್ತೆಭಾಗವಹಿಸುವ ನಿರೀಕ್ಷೆ ಇದೆ. ಎರಡನೇ ತಂಡದಲ್ಲಿ 5 ಅಥವಾ 6 ಆನೆಗಳು ಬರಲಿವೆ. ಎರಡನೇ ತಂಡದಲ್ಲಿ ಹೊಸ ಆನೆಗಳಾದ ಗಣೇಶ, ಭೀಮ, ಸುಗ್ರೀವ, ಅಜಯ, ಮಹೇಂದ್ರ ಆನೆಗಳು ಬರುವ ಸಾಧ್ಯತೆ ಇದೆ.

ಆ.10ಕ್ಕೆ ಅರಮನೆ ಪ್ರವೇಶ: ಆ.7 ರಂದು ವೀರನಹೊಸಳ್ಳಿ ಗೆಟ್‌ ಬಳಿ ಗಜ ಪಯಣ ಕಾರ್ಯಕ್ರಮ ನಡೆಯಲಿದೆ. ಆನೆಗಳು ಅಲ್ಲಿಂದ ನೇರವಾಗಿ ಅಶೋಕಪುರಂನಲ್ಲಿನಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿವೆ. ಅಲ್ಲಿಂದ ಆ.10 ರಂದು ಅರಮನೆ ಪ್ರವೇಶಿಸಲಿವೆ.

42 ಶೆಡ್‌ಗಳ ನಿರ್ಮಾಣ: ಆ.10ರಂದು ಅರಮನೆ ಪ್ರವೇಶಿಸಲಿರುವ ಆನೆಗಳಿಗೆ ಮತ್ತು ಮಾವುತ,ಕಾವಾಡಿಗರ ಕುಟುಂಬ ಉಳಿದುಕೊಳ್ಳಲು ಅರಮನೆ ಆವರಣದಲ್ಲಿ ಶೆಡ್‌ ನಿರ್ಮಾಣ ಕಾರ್ಯ ಭರದಿಂದಸಾಗಿದೆ. ಎರಡು ವರ್ಷಗಳ ಬಳಿಕ ಅದ್ಧೂರಿ ದಸರಾ ಉತ್ಸವ ನಡೆಯುತ್ತಿರುವುದರಿಂದ ದಸರಾ ಆನೆಗಳೊಂದಿಗೆ ಮಾವುತ, ಕಾವಾಡಿಗರ ಪರಿವಾರವೇ ಮೈಸೂರಿಗೆಆಗಮಿಸುತ್ತಿದ್ದು, ಅವರು ಉಳಿದುಕೊಳ್ಳುವ ಸಲುವಾಗಿ42 ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

Advertisement

ಈ ಬಾರಿ 14 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳು ತ್ತಿದ್ದು, 28 ಮಂದಿ ಮಾವುತರು ಮತ್ತುಕವಾಡಿಗರು ಮತ್ತು ಅವರ ಕುಟುಂಬ ಹಾಗೂ6 ಮಂದಿ ಹೆಚ್ಚುವರಿ ಮಾವುತರು, ಅಡುಗೆತಯಾರಕರು ಸೇರಿ 150ಕ್ಕೂ ಹೆಚ್ಚು ಮಂದಿ ಆನೆಗಳೊಂದಿಗೆ ಆಗಮಿಸಲಿದ್ದಾರೆ.

ಈಗಾಗಲೇ ಅರಮನೆ ಮಂಡಳಿ ವತಿಯಿಂದ ಆನೆಗಳು ಮತ್ತು ಮಾವುತರು ಉಳಿದುಕೊಳ್ಳುವ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಶೆಡ್‌ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ಆನೆಗಳಿಗೆವಿಶೇಷ ಆಹಾರ ತಯಾರು ಮಾಡುವ ಸ್ಥಳ ಮತ್ತು ಆಹಾರ ದಾಸ್ತನು ಕೊಠಡಿಗೆ ಸುಣ್ಣ ಬಳಿಯಲಾಗಿದೆ.

ಮೊದಲ ತಂಡದ ಆನೆಗಳಿವು :

ಮತ್ತಿಗೋಡು ಶಿಬಿರದಲ್ಲಿರುವ 57 ವರ್ಷದ ಅಂಬಾರಿ ಆನೆ ಅಭಿಮನ್ಯು, 39 ವರ್ಷದ ಗೋಪಾಲಸ್ವಾಮಿ, ಬಳ್ಳೆ ಆನೆ ಶಿಬಿರದ 62 ವರ್ಷದ ಅರ್ಜುನ, ದುಬಾರೆ ಆನೆ ಶಿಬಿರದಲ್ಲಿರುವ 59 ವರ್ಷದ ವಿಕ್ರಮ, 44ವರ್ಷದ ಧನಂಜಯ, 45 ವರ್ಷದ ಕಾವೇರಿ, ರಾಮಪುರ ಶಿಬಿರದಲ್ಲಿರುವ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ ಭಾಗವಹಿಸುವ ಸಾಧ್ಯತೆಗಳಿವೆ.

ಗಜಪಯಣಕ್ಕೆ ಮತ್ತು ಅರಮನೆಅಂಗಳದಲ್ಲಿ ಗಜಪಡೆಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿದಸರಾ ಮಹೋತ್ಸವದಲ್ಲಿ 14 ಆನೆಗಳುಭಾಗಿಯಾಗಲಿವೆ. ಈ ಪೈಕಿ ಮೊದಲತಂಡದಲ್ಲಿ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ9 ಆನೆಗಳು ಆಗಮಿಸಲಿವೆ. ಸೆಪ್ಟೆಂಬರ್‌ಮೊದಲ ವಾರದಲ್ಲಿ ಎರಡನೇ ತಂಡದಲ್ಲಿ 5 ಆನೆಗಳನ್ನು ಕರೆ ತರಲಾಗುತ್ತದೆ. ಡಾ.ವಿ.ಕರಿಕಾಳನ್‌, ಡಿಸಿಎಫ್

ಸತೀಶ್‌ ದೇಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next