Advertisement
ಈಗಾಗಲೇ ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಇದು ಮೂರನೇಯದ್ದಾಗಿದೆ. ಬಳ್ಳಾರಿಯಲ್ಲೂ ಒಂದು ಪ್ರಯೋಗಾಲಯ ಆರಂಭಕ್ಕೆ ಸಿದ್ಧತೆಗಳು ನಡೆದಿದ್ದು, ಈ ವಲಯಕ್ಕೆ ಮೊದಲ ಕೊಡುಗೆಯಾಗಿದೆ.ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಂಗ್ರಹಿಸಿದ ಸಾಕ್ಷ್ಯದ ವೈಜ್ಞಾನಿಕ ವಿಶ್ಲೇಷಣೆಯ ವರದಿ ಪಡೆಯಲು ಪ್ರಯೋಗಾಲಯದ ಅಗತ್ಯತೆ ಹೆಚ್ಚು.
ಆಯ್ದಕೊಂಡಿದೆ. ಒಂದರಿಂದ ಎರಡು ತಿಂಗಳಲ್ಲಿ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ. ಪ್ರಯೋಗಾಲಯಕ್ಕಾಗಿ ಸಾರಿಗೆ ಸಂಸ್ಥೆಯ ಕಟ್ಟಡ ಗುರುತಿಸಿರುವುದು ಸಂಸ್ಥೆಗೆ ಪರ್ಯಾಯ ಆದಾಯ ದೊರಕಿದಂತಾಗಿದೆ. ಒತ್ತಡ ತಗ್ಗಿಸುವ ಉಪಕ್ರಮ: ಈಗಾಗಲೇ ಬೆಂಗಳೂರಿನಲ್ಲಿ ಸುಸಜ್ಜಿತ ವಿಧಿ ವಿಜ್ಞಾನ ಪ್ರಯೋಗಾಲಯವಿದೆ. ಆದರೆ ರಾಜ್ಯದ ಎಲ್ಲಾ ಕಡೆಗಳಿಂದಲೂ ಪ್ರಮುಖ ಪ್ರಕರಣಗಳ ವೈಜ್ಞಾನಿಕ ವಿಶ್ಲೇಷಣೆಗಾಗಿ ಇಲ್ಲಿಗೆ ಬರುತ್ತಿರುವ ಕಾರಣ ಒತ್ತಡ ಹೆಚ್ಚಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಮಟ್ಟದ ಪ್ರಯೋಗಾಲಯವನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿಯೇ ಈ ಭಾಗದ ಪ್ರಯೋಗಾಲಯದಲ್ಲಿರುವ ವಿಭಾಗಗಳನ್ನು ಹೊರತುಪಡಿಸಿ ಹಾಗೂ ಬೆಂಗಳೂರಿನ
ಪ್ರಯೋಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೈಜ್ಞಾನಿಕ ವಿಶ್ಲೇಷಣೆಗೆ ಬರುತ್ತಿರುವ ಪ್ರಕರಣಗಳನ್ನು ಗುರುತಿಸಿ ಆಯ್ದ ಪ್ರಮುಖ ವಿಭಾಗಗಳನ್ನು ಇಲ್ಲಿ ಆರಂಭಿಸಲಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಸೇರಿದಂತೆ ಇತರೆ ಕೆಲ ಜಿಲ್ಲೆಗಳಿಂದಲೂ ವೈಜ್ಞಾನಿಕ ವಿಶ್ಲೇಷಣೆಗೆ ಪ್ರಕರಣಗಳು ಇಲ್ಲಿಗೆ ಬರಲಿವೆ.
Related Articles
ಉತ್ತರ ಕರ್ನಾಟಕ ಭಾಗದಲ್ಲಿ ಎರಡು ಹಾಗೂ ಹತ್ತಿರದ ದಾವಣಗೆರೆಯಲ್ಲೂ ಒಂದು ವಿಧಿ ವಿಜ್ಞಾನ ಪ್ರಯೋಗಾಲಯವಿದೆ. ಇವುಗಳೊಂದಿಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಯೋಗಾಲಯವಿದ್ದು, ಮಂಗಳೂರು, ಮೈಸೂರಿನಲ್ಲಿ ಪ್ರಾದೇಶಿಕ ಪ್ರಯೋಗಾಲಯಗಳಿವೆ. ಆದರೆ ಹುಬ್ಬಳ್ಳಿಯಲ್ಲಿ ಆರಂಭವಾಗಲಿರುವ ಪ್ರಯೋಗಾಲಯದಲ್ಲಿ ಬೆಂಗಳೂರು ಹೊರತುಪಡಿಸಿ ಇತರೆ ಪ್ರಯೋಗಾಲಯದಲ್ಲಿ ಇರದಿರುವ ವಿಭಾಗಗಳನ್ನು ಆರಂಭಿಸಲಾಗುತ್ತಿದೆ. ಪ್ರಮುಖವಾಗಿ
ಡಿಎನ್‌ಎ, ಕಂಪ್ಯೂಟರ್ ಫೂರೆನ್ಸಿಕ್, ಮೊಬೈಲ್ ಫೂರೆನ್ಸಿಕ್, ಆಡಿಯೋ-ವಿಡಿಯೋ ಹಾಗೂ ಫಿಸಿಕ್ಸ್ ಐದು ವಿಭಾಗಗಳು ಆರಂಭವಾಗಲಿವೆ. ಸದ್ಯಕ್ಕೆ ಅಧಿಕಾರಿ ಸೇರಿದಂತೆ 8 ಸಿಬ್ಬಂದಿ ನಿಯೋಜಿಸಲಾಗಿದೆ.
Advertisement
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರೆ ವಿಭಾಗಗಳು ಇಲ್ಲಿ ಆರಂಭವಾಗಲಿವೆ. ಪೊಲೀಸ್ ಇಲಾಖೆಯ ಎಲ್ಲಾ ವಲಯಗಳಲ್ಲಿ ಒಂದೊಂದು ಪ್ರಯೋಗಾಲಯವಿದ್ದರೆ ಬೆಳಗಾವಿ ಪಶ್ಚಿಮ ವಲಯದಲ್ಲಿ ಎರಡು ವಿಧಿ ವಿಜ್ಞಾನ ಪ್ರಯೋಗಾಲಯಗಳು ಆಗಲಿದೆ.
ಜಿಲ್ಲೆಗೊಂದು ಲ್ಯಾಬ್ ಸ್ಥಾಪನೆ ಗುರಿವಿಧಿ ವಿಜ್ಞಾನ ಪ್ರಯೋಗಾಲಯಗಳ ಕೊರತೆಯಿಂದಾಗಿ ನ್ಯಾಯನ ವಿಳಂಬ ಆಗುತ್ತಿರುವ ಕುರಿತು ಹೈಕೋರ್ಟ್ ಈ ಹಿಂದೆ ಸರಕಾರಕ್ಕೆ ಛಾಟಿ ಬೀಸಿತ್ತು. ರಾಜ್ಯದಲ್ಲಿ ಕೇವಲ ಆರು ಪ್ರಯೋಗಾಲಯಗಳ್ದಿ, ಅವುಗಳ ಪೈಕಿ ಕೆಲ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಅಂಶವನ್ನು ಹೈಕೋರ್ಟ್ ಗಮನಿಸಿ ಸರಕಾರಕ್ಕೆ ನೋಟಿಸ್ ಕೂಡ ಜಾರಿ ಮಾಡಿತ್ತು. ಇದಕ್ಕೆ ಪೂರಕವಾಗಿ ಸರಕಾರ ಅಗತ್ಯಕ್ಕೆ ತಕ್ಕಂತೆ ಪ್ರಯೋಗಾಲಯ
ಆರಂಭಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೊಂದು ಆಯ್ದ ವಿಭಾಗಗಳನ್ನು ಹೊಂದಿದ ಪ್ರಯೋಗಾಲಯ ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.