Advertisement

ಪ್ರವಾಹ ಪೀಡಿತರ ಸ್ಥಳಾಂತರಕ್ಕೆ ಸಿದ್ಧತೆ: ಮಹೇಶ್‌

08:32 AM Aug 11, 2020 | Suhan S |

ಕೊಳ್ಳೇಗಾಲ: ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಎದುರಾದರೆ, ಎಲ್ಲಾ ಪ್ರವಾಹ ಪೀಡಿತರನ್ನು ತಾಲೂಕಿನ ತಿಮ್ಮರಾಜೀಪುರ ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸ್ಥಳಾಂತರ ಮಾಡಿ, ಮೂಲ ಸೌಕರ್ಯ ಕಲ್ಪಿಸಲಾಗುವುದು. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ಸೋಮವಾರ ತಾಲೂಕಿನ ಕಾವೇರಿ ನದಿ ತೀರದ ಗ್ರಾಮಗಳಾದ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹರಳೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಭಾನುವಾರ 1.25 ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗಿತ್ತು. ಇದರಿಂದ ಕಾವೇರಿ ನದಿ ತೀರದ ಗ್ರಾಮದ ರೈತರ ಜಮೀನುಗಳು ಜಲಾವೃತಗೊಂಡಿತ್ತು. ಸೋಮವಾರ ಕೆಆರ್‌ಎಸ್‌ ನಿಂದ 30 ಸಾವಿರ ಕ್ಯೂಸೆಕ್‌, ಕಬಿನಿಯಿಂದ 16 ಸಾವಿರ ಕ್ಯೂಸೆಕ್‌ ನೀರು ಸೇರಿದಂತೆ ಒಟ್ಟು 46 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದೆ. ಗ್ರಾಮಸ್ಥರು ಪ್ರವಾಹದ ಭೀತಿಗೆ ಒಳಗಾಗಬಾರದು ಎಂದರು.

ಮಳೆ ಕಡಿಮೆ: ಕೊಡಗಿನಲ್ಲಿ ಮಳೆ ಕಡಿಮೆಯಾಗಿದೆ. ಇದರಿಂದ ಪ್ರವಾಹ ಹೆಚ್ಚಾಗುವುದಿಲ್ಲ. ನೀರು ಸಂಪೂರ್ಣ ಇಳಿಮುಖವಾಗಿರುವುದರಿಂದ ಗ್ರಾಮಸ್ಥರು ಭಯಪಡಬಾರದು. ರೈತರ ನೆರವಿಗಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರ ಬೆಳೆ ಹಾನಿ ಅಂದಾಜು ಪಟ್ಟಿ ತಯಾರಿಸಬೇಕು. ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಪರಿಹಾರ ನೀಡುವುದಾಗಿ ಹೇಳಿದರು.

ತಹಶೀಲ್ದಾರ್‌ ಕೆ.ಕುನಾಲ್‌, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ಅಶೋಕ್‌, ಪಟ್ಟಣ ಠಾಣೆಯ ರಾಜೇಂದ್ರ, ಪಿಡಿಒಗಳಾದ ರಾಮೇಗೌಡ, ರಾಜೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next