Advertisement

ಅಕಾಲಿಕ ಮಳೆ ಪರಿಣಾಮ: ತರಕಾರಿ ದರ ಭಾರೀ ಏರಿಕೆ

10:13 AM May 24, 2022 | Team Udayavani |

ಮಹಾನಗರ: ಉತ್ತರ ಕರ್ನಾಟಕ, ಮಲೆನಾಡು, ಬಯಲು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ತರಕಾರಿಗಳು ಬರುತ್ತಿಲ್ಲ. ಈ ಕಾರಣಕ್ಕಾಗಿ ದರಗಳು ದುಪ್ಪಟ್ಟು ಆಗಿವೆ. ಟೊಮೇಟೋ, ಬೀನ್ಸ್‌ ಬೆಲೆ ಕಿಲೋಗೆ ನೂರರ ಗಡಿ ದಾಟಿದೆ.

Advertisement

ಕರಾವಳಿಗೆ ಸಾಮಾನ್ಯವಾಗಿ ಹೊರಜಿಲ್ಲೆಗಳಿಂದ ತರಕಾರಿ ಸರಬರಾಜು ಆಗುತ್ತಿವೆ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಭಾಗದಲ್ಲಿ ಅಕಾಲಿಕವಾಗಿ ಭಾರೀ ಮಳೆಯಾದ ಕಾರಣ ತರಕಾರಿ ಬೆಳೆಗಳಿಗೆ ಹಾನಿಯಾಗಿವೆ. ಇದು ಜಿಲ್ಲೆಗೆ ತರಕಾರಿ ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಟೊಮೇಟೊ, ಬೀನ್ಸ್‌ ಮುಂತಾದ ತರಕಾರಿಗಳು ಬೇಡಿಕೆಯಷ್ಟು ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ರಖಂ ತರಕಾರಿ ವ್ಯಾಪಾರಿಗಳು ಟೊಮೇಟೊಕ್ಕಾಗಿ ಮಹಾರಾಷ್ಟ್ರ ರಾಜ್ಯದತ್ತ ಮುಖ ಮಾಡಿದ್ದಾರೆ. ಮಹಾರಾಷ್ಟ್ರದಲ್ಲೂ ಟೊಮೇಟೊ ಬೆಲೆ ಕೂಡಾ ದುಬಾರಿಯಾಗಿದೆ. ಆದರೆ ಗ್ರಾಹಕರಿಗೆ ಸರಬರಾಜು ಮಾಡಬೇಕಾದ ಹಿನ್ನಲೆಯಲ್ಲಿ ಅಲ್ಲಿಂದ ಖರೀದಿಸಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮಂಗಳೂರಿನ ರಖಂ ತರಕಾರಿ ವ್ಯಾಪಾರಿಗಳು. ಟೊಮೇಟೊ (ಕೆ.ಜಿ.ಗೆ) 100, ಬೀನ್ಸ್‌ 100, ಅಲಸಂಡೆ 60 ರೂ., ಬೆಂಡೆಕಾಯಿ 50 ರೂ. ಕ್ಯಾರೆಟ್‌ 40 ರೂ., ಬದನೆ 50 ರೂ., ಮುಳ್ಳುಸೌತೆ 50 ರೂ., ಸೌತೆಕಾಯಿ 25 ರೂಪಾಯಿಯ ಅಸುಪಾಸಿನಲ್ಲಿದೆ.

ತರಕಾರಿ ಬೆಳೆ ನಷ್ಟ

ಜಿಲ್ಲೆಗೆ ತರಕಾರಿ ಸರಬರಾಜು ಆಗುತ್ತಿರುವ ಪ್ರದೇಶಗಳಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ತರಕಾರಿ ಬೆಳೆ ನಷ್ಟವಾಗಿದ್ದು, ತರಕಾರಿ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ. ಇದರಿಂದಾಗಿ ತರಕಾರಿ ಬೆಳೆಯಲ್ಲೂ ಭಾರೀ ಹೆಚ್ಚಳವಾಗಿದೆ. ಬೇಡಿಕೆಯಷ್ಟು ಟೊಮೇಟೊ ಸಿಗದ ಕಾರಣ ಮಹಾರಾಷ್ಟ್ರದಿಂದ ಟೊಮೇಟೊ ತರಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಮಂಗಳೂರಿನ ರಖಂ ತರಕಾರಿ ವ್ಯಾಪಾರಿ ಎ.ಜೆ. ಶೇಖರ್‌.

Advertisement

Udayavani is now on Telegram. Click here to join our channel and stay updated with the latest news.

Next