ಧೃತಿ ಪೊ›ಡಕ್ಷನ್ಸ್ ನಿರ್ಮಾಣದಲ್ಲಿ ಸ್ನೇಹಿತರುಜೊತೆಗೂಡಿ ನಿರ್ಮಿಸಿರುವ ಪ್ರೇಮಂ ಚಿರಂ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ಹಾಗೂ ದಾಂಡೇಲಿ ರಸ್ತೆಯಲ್ಲಿ ನಡೆದು ಶೇಕಡ ಶೇ80 ಭಾಗ ಚಿತ್ರೀಕರಣ ಪೂರ್ಣಗೊಂಡಿದೆ.
ಹಾಡುಗಳ ಚಿತ್ರೀಕರಣ ಬಾಕಿ ಇರುವ ಚಿತ್ರಕ್ಕೆ ಸಂಗೀತ ರೋಹನ್ ದೇಸಾಯಿ ಛಾಯಾಗ್ರಹಣವಿದೆ. ಇದುವರೆಗೂ 40 ದಿನಗಳಕಾಲ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ.
ಐದು ವಿಭಿನ್ನ ಪ್ರೇಮಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ನೀನಾಸಂ ಠಾಕೂರ್, ಪ್ರೀತಿ ಚೇಷ್ಠ ,ಸಂಗಮೇಶ್, ಸೌಮ್ಯ, ಸೂರ್ಯ, ಪಿಂಕಿ ಕೌರ್,ಪ್ರಶಾಂತ್, ಮಧುಶ್ರೀ,ಅನಿಲ್, ರತ್ನಶ್ರೀ, ದೇವರಾಜ್ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ : ಜಾಂಟಿ ಸನ್ ಆಫ್ ಜಯರಾಜ್ : ಅಂಡರ್‌ವರ್ಲ್ಡ್ ಸುತ್ತ ಮತ್ತೂಂದು ಚಿತ್ರ
5 ಅಡಿ 7 ಅಂಗುಲ 50 ನೇ ದಿನದ ಸಂಭ್ರಮ :
ಕೋವಿಡ್ ಲಾಕ್‌ಡೌನ್ ಬಳಿಕ ಮತ್ತೆ ತೆರೆಕಂಡ “5 ಅಡಿ 7 ಅಂಗುಲ’ ಚಿತ್ರ ಈಗ ಸದ್ದಿಲ್ಲದೆ 50 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದೆ. ಮೊದಲು ಇದೇ ಮಾರ್ಚ್ 13 ರಂದು ತೆರೆಕಂಡ ಈ ಚಿತ್ರ ಕೇವಲ ಮೂರು ಪ್ರದರ್ಶನ ಕಂಡು ನಂತರ ಕೋವಿಡ್ ಲಾಕ್‌ಡೌನ್ ನಿಂದ ಸ್ಥಗಿತಗೊಂಡಿತ್ತು. ಬಳಿಕ ಅಕ್ಟೋಬರ್16 ರಂದು ಮತ್ತೆ ಮರು ಬಿಡುಗಡೆಯಾಗಿತ್ತು. ಚಿತ್ರ 50 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಸರಳವಾಗಿ ಸಂಭ್ರಮಾಚರಣೆ ಮಾಡಿತು.
ನಿರ್ದೇಶಕ ನಿತ್ಯಾನಂದ ನಂದಲಿಕೆ ಪ್ರಭು ಅವರ “5 ಅಡಿ 7 ಅಂಗುಲ’ ಸಿನಿಮಾಕ್ಕೆ ನಟಿ ಸುಧಾರಾಣಿ, ನಟ ವಿಜೇತ ನಟ ಸಂಚಾರಿ ವಿಜಯ್ ಮುಖ್ಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸ್ಮರಣಿಕೆ ವಿತರಣೆ ಮಾಡಿದರು. ಈ ವೇಳೆ “5 ಅಡಿ 7 ಅಂಗುಲ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ನಿತ್ಯಾನಂದ ನಂದಲಿಕೆ ಪ್ರಭು ಮತ್ತು ಚಿತ್ರತಂಡದ ಸದಸ್ಯರು ಹಾಜರಿದ್ದರು.
ಹೊಸಬರ ದಾರಿಗೆ ಧ್ರುವ ಸಾಥ್ : ಹೊಸಬರ ದಾರಿಗೆ ಧ್ರುವ ಸಾಥ್ “ದಾರಿ ಯಾವುದಯ್ನಾ ವೈಕುಂಠಕ್ಕೆ’ ಚಿತ್ರ ತೆರೆಗೆ ಬರಲು ಸಿದ್ದವಿದೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ಈ ಚಿತ್ರದ ಫಸ್ಟ್ ಲುಕ್‌ಇತ್ತೀಚೆಗೆ ಬಿಡುಗಡೆಯಾಗಿದ್ದು, ನಟ ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಈ ಹಿಂದೆ “ಕೃಷ್ಣಗಾರ್ಮೆಂಟ್ಸ್’ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರದನಿರ್ದೇಶಕರು.ವರ್ಧನ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅನುಷಾ. “ತಿಥಿ’ ಚಿತ್ರದ ಖ್ಯಾತಿ ಪೂಜ, ಬಲ ರಾಜವಾಡಿ,ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್ ಮೂರ್ತಿ, ಸಂಗೀತ, ಸಿದ್ಧಾರ್ಥ,ಪ್ರಣಯ್ ಮೂರ್ತಿ, ಸ್ಪಂದನಾ ಪ್ರಸಾದ್, ದಯಾನಂದ್, ಸುಚಿತ್, ಮೈಸೂರು ಬಸವರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.