Advertisement

 ಶ್ರೀನಿವಾಸ ಮಂಗಲ ಮಹೋತ್ಸವದ ಪೂರ್ವಭಾವಿ ಸಭೆ

03:21 PM Nov 07, 2017 | Team Udayavani |

ಬೊಯಿಸರ್‌: ವಿರಾರ್‌ ಸಾಯಿಧಾಮ ಮಂದಿರ ಟ್ರಸ್ಟ್‌ ವತಿಯಿಂದ ನ. 11ರಂದು ನಲಸೋಪರ ಪಶ್ಚಿಮದಲ್ಲಿ ನಡೆಯಲಿರುವ ಐದನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವದ ಸಮಾಲೋಚನ ಸಭೆಯು ಪಾಲ^ರ್‌ ಜಿಲ್ಲಾ ಭಕ್ತಾದಿಗಳ ವತಿಯಿಂದ ಬೊಯಿಸರ್‌ ಪಶ್ಚಿಮದ ಹೊಟೇಲ್‌ ಸರೋವರ ಸಭಾಗೃಹದಲ್ಲಿ ಜರಗಿತು.

Advertisement

ಕಳೆದ ಸಾಲಿನಲ್ಲಿ ಬೊಯಿಸರ್‌ನಲ್ಲಿ ಜರಗಿದ 4ನೇಮಂಗಲ ಮಹೋತ್ಸವದ ಅಧ್ಯಕ್ಷ ಸ್ಥಳೀಯರಾದ ಡಾ| ನಂದಕುಮಾರ್‌ ವರ್ತಕ್‌, ಸ್ಥಳೀಯ ಉದ್ಯಮಿ ಅವಿನಾಶ್‌ ಚುರಿ, ಪಾಲ^ರ್‌ ತಾಲೂಕು ಹೊಟೇಲ್‌ ಓನರ್ ಅಸೋಸಿಯೇಶನ್‌ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ, ಉದ್ಯಮಿ ರಘುರಾಮ ರೈ ಹಾಗೂ ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಐದನೇ ವರ್ಷದ ಉತ್ಸವದ ಮುಂದಾಳತ್ವ ವಹಿಸಿರುವ ನಗರದ ಉದ್ಯಮಿ, ಸೌತ್‌ ಇಂಡಿಯನ್‌ ಫೆಡರೇಶನ್‌ ಇದರ ಅಧ್ಯಕ್ಷ ವಿರಾರ್‌ ಶಂಕರ್‌ ಬಿ. ಶೆಟ್ಟಿ ಅವರು ಮಾತನಾಡಿ, ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಸಿರುವ ಸಾಯಿಧಾಮ್‌ ಟ್ರಸ್ಟ್‌ ಇನ್ನಿತರರು ನಿಮಿತ್ತ ಮಾತ್ರವಿದ್ದು, ಈ ಉತ್ಸವವು ಪಶ್ಚಿಮ ರೈಲ್ವೇಯ ಉದ್ದಗಲಕ್ಕೂ ನೆಲೆಸಿರುವ ಭಕ್ತಾದಿಗಳೆಲ್ಲರೂ ಸೇರಿ ಆಯೋಜಿಸುವ ಸೇವಾ ಕಾರ್ಯಕ್ರಮವಾಗಿದೆ. ವೆಂಕಟೇಶ್ವರನ ಭಕ್ತರಲ್ಲಿ ಜಾತಿ, ಭಾಷೆಯ ಭೇದವಿಲ್ಲ. ಇಲ್ಲಿ ನೆಲೆಸಿರುವ ಸ್ಥಳೀಯರೆಲ್ಲರೂ ಆಸ್ಥೆಯಿಂದ ಭಾಗವಹಿಸಿ, ಉತ್ಸವದ ಯಶಸ್ಸಿಗೆ ಸಹಕರಿಸಬೇಕು. ಕಳೆದ ಸಾಲಿನಲ್ಲಿ ಉತ್ಸವವು ಬೊಯಿಸರ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. 

ಪಾಲ^ರ್‌ ಜಿಲ್ಲೆಯ ಇತಿಹಾಸದಲ್ಲಿಯೇ ಜರಗಿದ ಅಪೂರ್ವ ಉತ್ಸವ ಇದಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಜನಸಾಗರವೇ ಹರಿದು ಬಂದಿತ್ತು. ಶೋಭಾಯಾತ್ರೆಯ ಮುಂದಾಳತ್ವ ವಹಿಸಿದ್ದ ಮಹಿಳಾ ಸ್ವಯಂ ಸೇವಕಿಯರ ಕಾರ್ಯ ಅಭಿನಂದನೀಯವಾಗಿತ್ತು. ಮುಂದಾಳತ್ವ ವಹಿಸಿದ್ದ 
ಉಷಾ ರಘುರಾಮ ರೈ ಅವರ ಸೇವೆ ಅಪಾರವಾಗಿತ್ತು. ಈ 
ವರ್ಷದ ಉತ್ಸವದಲ್ಲಿ ವಿಶೇಷ ತುಲಾಭಾರ ಸೇವೆಯು ಆಕರ್ಷಣೆಯಾಗಲಿದೆ ಎಂದು ನುಡಿದರು.

ಉತ್ಸವದಲ್ಲಿ  ಪಾಲ್ಗೊಳ್ಳುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆಯ ಬಗ್ಗೆ ಮಹಿಳಾ ಪ್ರತಿನಿಧಿಗಳು ಹಲವು ಸೂಚನೆಗಳನ್ನು 
ನೀಡಿದರು. ನ. 11ರಂದು ನಡೆಯಲಿರುವ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಪಾಲ^ರ್‌ನಿಂದ 
ಮೈನ್‌ರೋಡ್‌ ಐಸಿಐಸಿಐ ಬ್ಯಾಂಕ್‌ ಬಳಿ, ಬೊಯಿಸರ್‌ನಿಂದ ಹೊಟೇಲ್‌ ಪಂಚಮಿ ಸಮೀಪದಿಂದ ಮಧ್ಯಾಹ್ನ 12ಕ್ಕೆ
ಬಸ್‌ ಸೌಕರ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಪಾಲ^ರ್‌ನಿಂದ ತಾರಾನಾಥ ಅಡಪ (9921240015), ಸತೀಶ್‌ ಶೆಟ್ಟಿ (9960124655), ವಿಶಾಲಾ ರವೀಂದ್ರ ಶೆಟ್ಟಿ (9423354777), ಅವಿನಾಶ್‌ ಚುರಿ (9923106517), ಶಕುಂತಳಾ ವಿಟuಲ್‌ ಶೆಟ್ಟಿ (7875851288) ಮತ್ತು ಕೆ. ಭುಜಂಗ ಶೆಟ್ಟಿ (9890620330) ಇವರನ್ನು ಸಂಪರ್ಕಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next