Advertisement

ಗೆದ್ದಿರುವ ಹೊಸ ಅಭ್ಯರ್ಥಿಗಳಿಗೆ ಬಿಜೆಪಿ ಕಚೇರಿಯಲ್ಲಿ ಪ್ರಾಥಮಿಕ ಪಾಠ

12:31 AM May 16, 2023 | Team Udayavani |

ಉಡುಪಿ: ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಗೆದ್ದಿರುವ ಅಭ್ಯರ್ಥಿಗಳೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಅನೌಪಚಾರಿಕ ಮಾತುಕತೆ ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಹೊಸ ಶಾಸಕರು ಭಾಗವಹಿಸಿದ್ದಾರೆ.

Advertisement

ಉಡುಪಿ ಕ್ಷೇತ್ರದ ಯಶ್‌ಪಾಲ್‌ ಸುವರ್ಣ, ಬೈಂದೂರಿನ ಗುರುರಾಜ ಗಂಟಿಹೊಳೆ, ಕುಂದಾಪುರದ ಕಿರಣ್‌ ಕುಮಾರ್‌ ಕೊಡ್ಗಿ, ಕಾಪುವಿನ ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಸುಳ್ಯದ ಭಾಗೀರಥಿ ಮುರುಳ್ಯ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಪಕ್ಷದ ತಣ್ತೀ ಸಿದ್ಧಾಂತಗಳ ಅನುಸಾರ ವಿಧಾನಸಭೆಯ ಒಳಗೆ ಮತ್ತು ಹೊರಗೆ ಹಾಗೂ ತಮ್ಮ ಕ್ಷೇತ್ರದಲ್ಲಿ ಹೇಗಿರಬೇಕು ಎಂಬುದರ ಪ್ರಾಥಮಿಕ ಪಾಠವನ್ನು ಸಂಘಟನೆಯ ಹಿರಿಯರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಜತಗೆ ಗೆಲುವಿಗೆ ಕಾರಣವಾದ ಕಾರ್ಯಕರ್ತ ಹಾಗೂ ಕ್ಷೇತ್ರದ ಜನತೆಯನ್ನು ಯಾವುದೇ ಸಂದರ್ಭದಲ್ಲಿ ಅವಗಣಿಸದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಪಕ್ಷದ ತಣ್ತೀ ಸಿದ್ಧಾಂತಗಳಲ್ಲಿ ಬದ್ಧತೆ ಇರಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಅಭಿನಂದನ ಸಮಾರಂಭ
ಜಿಲ್ಲೆಯಿಂದ ಗೆದ್ದಿರುವ ಐದು ಅಭ್ಯರ್ಥಿಗಳಿಗೂ ಜಿಲ್ಲಾ ಬಿಜೆಪಿ ವತಿಯಿಂದ ಈ ವಾರದಲ್ಲಿ ಅಭಿ ನಂದನೆ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next