ಲಕ್ನೋ(ಹಾಪುರ್): ಅವಿವಾಹಿತ ಪುತ್ರಿ ಗರ್ಭಿಣಿಯಾಗಿದ್ದಕ್ಕೆ ಆಕ್ರೋಶಗೊಂಡ ತಾಯಿ ಮತ್ತು ಸಹೋದರ ಬಲವಂತದಿಂದ ಕಾಡಿಗೆ ಕರೆದೊಯ್ದು ಬೆಂಕಿಹಚ್ಚಿರುವ ಘಟನೆ ಉತ್ತರಪ್ರದೇಶದ ಹಾಪುರ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಖ್ಯಾತ ವರ್ಣ ಚಿತ್ರ ಕಲಾವಿದ ಚಂದ್ರನಾಥ ಆಚಾರ್ಯಗೆ ಬಾಲವನ ಪ್ರಶಸ್ತಿ
ಕಾಡಿನಲ್ಲಿ ಮಹಿಳೆ ಕಿರುಚಾಡುತ್ತಿದ್ದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಬಂದಾಗ ಯುವತಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದು, ಅಷ್ಟರಲ್ಲೇ ಆಕೆಯ ದೇಹ ಶೇ.70ರಷ್ಟು ಸುಟ್ಟು ಹೋಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವರದಿ ತಿಳಿಸಿದೆ.
ನಂತರ ಆಕೆಯನ್ನು ಮೀರತ್ ನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವಿವಾಹಿತ (21ವರ್ಷ) ಮಗಳು ಗರ್ಭಿಣಿಯಾದ ವಿಚಾರದ ತಿಳಿದ ತಾಯಿ ಮತ್ತು ಸಹೋದರ, ಮಗುವಿನ ತಂದೆ ಯಾರು ಎಂದು ಪ್ರಶ್ನಿಸಿದ್ದರು. ಆದರೆ ಆಕೆ ಯಾವ ವಿಚಾರವನ್ನು ಬಾಯಿ ಬಿಡದಿದ್ದಾಗ, ಆಕೆಯನ್ನು ಸಮೀಪದ ಕಾಡಿಗೆ ಎಳೆದೊಯ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎಂದು ವರದಿ ತಿಳಿಸಿದೆ.
ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನೂ ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.