Advertisement

ನೀರಾವರಿ ಯೋಜನೆ ಜಾರಿಗೆ ಆದ್ಯತೆ: ಸಂಸದ

09:44 AM Jun 14, 2019 | Team Udayavani |

ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿ ಮತ್ತು ಅತ್ಯವಸರವಿರುವ ಮೂಲಭೂತ ಸೌಲಭ್ಯಗಳೊಂದಿಗೆ ಬಯಲು ಸೀಮೆಗೆ ಶೀಘ್ರವಾಗಿ ನೀರು ಹರಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೋಲಾರ ಜಿಲ್ಲೆಯ ನೂತನ ಸಂಸದ ಮುನಿಸ್ವಾಮಿ ಹೇಳಿದರು.

Advertisement

ಪಟ್ಟಣದ ಕುವೆಂಪು ವೃತ್ತದ ಸಮೀಪದ ವೆಂಕಟೇಶಗೌಡ ಕಲ್ಯಾಣ ಮಂಟಪದಲ್ಲಿ ನೂತನ ಸಂಸದರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

28 ವರ್ಷ ಸುದೀರ್ಘ‌ವಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿ, ರೈತಪರ ಯೋಜನೆಗಳನ್ನು ಮಾಡದೆ ಜಿಲ್ಲೆಗೆ ಅಪಾರ ನಷ್ಟವನ್ನು ಉಂಟು ಮಾಡಿದ ಮತ್ತು ಎರಡು ಪಕ್ಷಗಳ ಹೊಂದಾಣಿಕೆಯಿಂದ ಗೆಲುವು ಪಡೆಯುತ್ತಿದ್ದ ವ್ಯಕ್ತಿಯನ್ನು ಜನ ಮನೆಗೆ ಕಳುಹಿಸಿ ಆಗಿದೆ.

ನೀರಾವರಿ ಯೋಜನೆಗ ಆದ್ಯತೆ: ಇನ್ನು ಮುಂದಿನ ದಿನಗಳಲ್ಲಿ ರೈತಪರ ಕಾರ್ಯ ಕ್ರಮಗಳನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳುವುದ ರೊಂದಿಗೆ, ಬಯಲು ಸೀಮೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಮೆಚ್ಚುಗೆ: ವಿಧಾನ ಪರಿಷತ್‌ ಶಾಸಕ ವೈ.ಎ.ನಾರಾ ಯಣಸ್ವಾಮಿ ಮಾತನಾಡಿ, 70 ವರ್ಷಗಳ ನಂತರ ಇಂತಹ ವೇದಿಕೆ ಸಿಕ್ಕಿರುವುದು ಸೌಭಾಗ್ಯವೆಂದರೇ ತಪ್ಪಾಗಲಾರದು. 2ನೇ ಭಾರಿಗೆ ಮೋದಿ ಆಯ್ಕೆ ಮಾಡಿ ನೀಡಿರುವ ಜನಾದೇಶವನ್ನು ಇಡೀ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಮೋದಿಯವರ ದಿಟ್ಟ ನಿರ್ಧಾರ, ಅವರ ನೇರ ನುಡಿ ಹಾಗೂ ಕಾರ್ಯಕ್ಷಮತೆಯನ್ನು ನಮ್ಮ ದೇಶದಲ್ಲಿ ಮಾತ್ರವಲ್ಲ, ಗಡಿದಾಟಿ ಹೊರದೇಶಗಳಲ್ಲೂ ಅವರನ್ನು ನಾಯಕ ರೆಂದು ಗುರ್ತಿಸಿದ್ದಾರೆಂದರು.

Advertisement

ಭವಿಷ್ಯ ನಿಜವಾಗುತ್ತಿದೆ: ಕೋಲಾರ ಜಿಲ್ಲೆಯಲ್ಲಿ 1991ರಲ್ಲಿ ಕೇಸರೀಕರಣ ಆಗಬೇಕಿತ್ತು. ರಾಜೀವ್‌ಗಾಂಧಿ ಹತ್ಯೆಯಿಂದ ಸಿಂಪತಿ ಮತಗಳಿಂದ ಗೆದ್ದು ಅಂದೇ ಆಗಬೇಕಿದ್ದ ಕೇಸರೀಕರಣ ಕೋಲಾರವನ್ನು ಇಂದು ಕೇಸರಿಮಯವಾಗಿ ನೋಡುತ್ತಿದ್ದೇವೆ. ಅಂದಿನ ಇಂದಿರಾಗಾಂಧಿ, ವಾಜಪೇಯಿ ಮುಂದಾ ಳತ್ವದಲ್ಲಿ ಬಿಜೆಪಿ ಸೋತಾಗ ಅವರನ್ನು ನೋಡಿ ನಕ್ಕಿದ್ದರು. ಅಂದೇ ವಾಜಪೇಯಿಯವರು ಭವಿಷ್ಯ ವನ್ನು ನುಡಿದಿದ್ದರು. ನೀವು ಹಿಂದಿನ ಖುರ್ಚಿಯಲ್ಲಿ ಕೂಡಲಾಗದ ಸ್ಥಿತಿ ಎದುರಾಗುತ್ತದೆ. ಅಂದು ದೇಶ ನಿಮ್ಮನ್ನು ನೋಡಿ ನಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದರು. ಅದರೊಂದಿಗೆ ‘ಕತ್ತಲು ಹಿಂದೆ ಸರಿದು, ಸೂರ್ಯ ಉದಯಿಸಿ ಬಿಜೆಪಿ ಕಮಲ ಅರಳುತ್ತಿದೆ’. ದೇಶ ವೆಲ್ಲಾ ಕೇಸರಿಮಯವಾಗುತ್ತದೆಂದು ನುಡಿದ್ದ ಭವಿ ಷ್ಯತ್‌ ವಾಣಿ ಇಂದು ನಿಜವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲ್ಲಿ ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಬೇಕಾದ ಕಾರ್ಯತಂತ್ರವನ್ನು ರೂಪಿಸು ವುದರೊಂದಿಗೆ ನಾಲ್ಕು ಶಾಸಕರನ್ನಾದರೂ ಗೆಲ್ಲಿಸು ವಂತಹ ಕೆಲಸ ನಮ್ಮ ಸಂಸದರ ಮೇಲಿದೆ. ಅವರಿಗೆ ನಮ್ಮೆಲ್ಲರ ಸಹಕಾರ ಇರುತ್ತದೆಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟಮುನಿಯಪ್ಪ, ತಾಲೂಕು ಅಧ್ಯಕ್ಷ ವೆಂಕಟೇಗೌಡ, ಮುಖಂಡರಾದ ಜಯರಾಮ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರೇ ಗೌಡ, ಡಾ.ವೇಣುಗೋಪಾಲ್, ಲಕ್ಷ್ಮಣಗೌಡ, ಈ. ಶಿವಣ್ಣ, ವಕೀಲ ನಾಗರಾಜ್‌, ಷೇಕ್‌ಶಫೀವುಲ್ಲಾ, ಪಕ್ಷದ ಮತ್ತು ತಾಲೂಕಿನ ವಿವಿಧ ಘಟಕಗಳ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next