Advertisement
ಇಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತೈದು ಲಕ್ಷ ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಕ್ಷೇತ್ರದಲ್ಲಿ ಸ್ವತ್ಛತೆ ಕಾಪಾಡಿ ಕೊಳ್ಳುವುದು ಮತ್ತು ತ್ಯಾಜ್ಯ ವಿಲೇವಾರಿ ಒಂದು ಸಮಸ್ಯೆಯೇ ಆಗಿತ್ತು. ದ್ರವ ತ್ಯಾಜ್ಯ ಘಟಕವನ್ನು ಆರಂಭಿ ಸಿದ ಮುಜರಾಯಿ ದೇಗುಲಗಳಲ್ಲಿಯೇ ಕಟೀಲು ಮೊದಲನೆಯದ್ದು ಆಗಿದ್ದು, ಘನ ತ್ಯಾಜ್ಯ ಸಂಸ್ಕರಣ ಘಟಕದ ಯೋಜನೆ ಪ್ರಗತಿಯಲ್ಲಿದೆ. ಆರ್ಟ್ ಆಫ್ ಲಿವಿಂಗ್‌ನವರು ಬಾಳೆ ಎಲೆಗಳನ್ನು ಗೊಬ್ಬರವಾಗಿಸುವ ವ್ಯವಸ್ಥೆಯನ್ನು ನೀಡಿದ್ದರೂ, ಬಾಳೆ ಎಲೆಗಳು ಹಾಳಾಗು ವುದು, ಹರಿದುಹೋಗುವುದು ನಷ್ಟದ ವಿಚಾರವಾಗಿದ್ದರೆ, ಊಟವಾದ ಮೇಲೆ ಸ್ವತ್ಛತೆ, ವಿಲೇವಾರಿ ಕೂಡ ಶ್ರಮದ ಹಾಗೂ ಸಮಸ್ಯೆಯ ಸಂಗತಿಯಾಗುತ್ತಿತ್ತು.
Related Articles
Advertisement
ತಟ್ಟೆ ತೊಳೆಯಲು ಯಂತ್ರ
ಕೊರೊನಾ ಸಂದರ್ಭ ಹಾಳೆತಟ್ಟೆಗಳನ್ನು ಬಳಸ ಲಾಗುತ್ತಿದ್ದು, ಇದೀಗ ಸ್ಟೀಲ್ ಬಟ್ಟಲುಗಳ ಬಳಕೆ ಆರಂಭವಾಗಿದೆ. ಇವುಗಳನ್ನು ತೊಳೆಯಲು ಸುಮಾರು 16.5 ಲಕ್ಷ ರೂ.ಗಳ ಡಿಶ್ ವಾಶ್ ಯಂತ್ರವನ್ನು ಖರೀದಿಸಲಾಗಿದ್ದು, ಕಾರ್ಯಾರಂಭಿಸಿದೆ. ಎಲೆಯ ಬದಲು ಸ್ಟೀಲ್ ಬಟಲನ್ನು ಉಪಯೋಗಿಸಲಾಗುತ್ತಿದ್ದು, ಬಟ್ಟಲು ಸ್ವತ್ಛಗೊಳಿಸಲು ನೂತನ ಯಂತ್ರವನ್ನು ಅಳಡಿಸಲಾಗಿದೆ. ಊಟಕ್ಕೆ ಬಳಸಿದ ಬಟ್ಟಲನ್ನು ಒಂದು ಪೈಬರ್ ಟ್ರೇಯಲ್ಲಿ ಅಳವಡಿಸಿ ಯಂತ್ರಕ್ಕೆ ಕೊಡಲಾಗುತ್ತದೆ. ಯಂತ್ರದಲ್ಲಿ ಸೋಪು ಆಯಿಲ್ ಮತ್ತು ಬಿಸಿ ನೀರಿನಿಂದ ಸ್ವತ್ಛವಾಗುತ್ತದೆ. ಸ್ವತ್ಛಗೊಂಡು ಹೊರ ಬಂದ ತಟ್ಟೆಗಳನ್ನು ಮತ್ತೆ ಉಪಯೋಗಿಸಲಾಗುತ್ತದೆ.
ಕಳೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಂಗಳೂರು ಹೊರೆಕಾಣಿಕೆ ಸಮಿತಿಯವರು ದೇವಸ್ಥಾನಕ್ಕೆ ಅಗತ್ಯ ಇರುವ ಸುಮಾರು 15 ಸಾವಿರ ಸ್ಟೀಲಿನ ತಟ್ಟೆಗಳನ್ನು ನೀಡಿದ್ದರು. ಅದನ್ನು ಅನ್ನ ಪ್ರಸಾದ ನೀಡಲು ಎಲೆಯ ಬದಲಿಗೆ ಬಳಸಲಾಗುತ್ತಿದೆ. ಭಕ್ತರು ನೀಡಿದ ಬಟ್ಟಲುಗಳು ಸದ್ಬಳ ಕೆ ಯೊಂದಿಗೆ ಸ್ವತ್ಛ ತೆಯ ಸಮಸ್ಯೆಗೂ ಪರಿಹಾರ ಹುಡುಕಿದಂತಾಗಿದೆ. ಬಟ್ಟಲುಗಳನ್ನು ಬಿಸಿನೀರಿನಲ್ಲಿ ತೊಳೆಯಲು ಯಂತ್ರವನ್ನೂ ಬಳಸಲಾಗುತ್ತಿದೆ.-ಅನಂತಪದ್ಮನಾಭ ಆಸ್ರಣ ¡, ಅರ್ಚಕರು, ಶ್ರೀ ಕ್ಷೇತ್ರ ಕಟೀಲು