Advertisement

ಕೃಷಿ ಕ್ಷೇತ್ರದಲ್ಲಿ ಗುರಿ ಮೀರಿದ ಸಾಧನೆಗೆ ಮುನ್ನುಡಿ

12:02 AM Sep 08, 2021 | Team Udayavani |

ಬೆಂಗಳೂರು: ಕೊರೊನಾ ಮಹಾಮಾರಿ ಎಲ್ಲ ರಂಗಗಳಿಗೆ ಹೊಡೆತ ಕೊಟ್ಟಿದ್ದು, ಕೃಷಿ ಕ್ಷೇತ್ರದಲ್ಲಿ ಮಾತ್ರ ನಿರೀಕ್ಷೆಗೂ ಮೀರಿ ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪೂರ್ವ ಮುಂಗಾರು ಹಂಗಾಮಿನಲ್ಲಿ ಈ ವರ್ಷ ಶೇ.1.57ರಷ್ಟು ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ. ಬಹು ತೇಕ ನಗರವಾಸಿಗಳು ಗ್ರಾಮೀಣ ಪ್ರದೇಶಕ್ಕೆ ತೆರಳಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವುದು ಬಿತ್ತನೆ ಪ್ರಮಾಣ ಹೆಚ್ಚಾಗಲು ಕಾರಣ ವಾಗಿದೆ.

Advertisement

2021-22ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ  77.00 ಲಕ್ಷ ಹೆಕ್ಟೇರ್‌ ಕೃಷಿ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದ್ದು, ಆ. 30ರ ವರೆಗೂ 73.43 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಅಂದರೆ ಸರಕಾರದ ಗುರಿ ಶೇ. 95.36 ಸಾಧಿಸಲಾಗಿದೆ. 2020-21ರ ಮುಂಗಾರು ಹಂಗಾಮಿನಲ್ಲಿ  ಈ ಅವಧಿಯಲ್ಲಿ  72.27 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.

2021-22ರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 1.16 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದು, ಶೇ.1.57 ಹೆಚ್ಚಳವಾಗಿದೆ. ಸೆಪ್ಟಂಬರ್‌ ಅಂತ್ಯದವರೆಗೂ ಮುಂಗಾರು ಬಿತ್ತನೆಗೆ ಅವಕಾಶವಿದ್ದು, ಒಂದು ತಿಂಗಳಲ್ಲಿ ನಿರೀಕ್ಷಿತ ಗುರಿ  ತಲುಪುವ ವಿಶ್ವಾಸವನ್ನು ಇಲಾಖೆ ಹೊಂದಿದೆ.

ಗುರಿ ಮೀರಿದ ಜಿಲ್ಲೆಗಳು:

ಮುಂಗಾರು ಹಂಗಾಮಿನಲ್ಲಿ  ಸರಕಾರ ಹೊಂದಿರುವ ಗುರಿ ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬೆಂ. ಗ್ರಾಮಾಂತರ,  ಕೊಡಗು, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಶೇ.100 ಗುರಿ ಸಾಧಿಸ ಲಾಗಿದೆ.  ತುಮಕೂರು, ಮಂಡ್ಯ, ರಾಮನಗರ, ಮೈಸೂರು, ಚಾಮ ರಾಜನಗರ ಜಿಲ್ಲೆಗಳಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.

Advertisement

ಪ್ರವಾಹಕ್ಕೆ ಬೆಳೆ ನಾಶ :  ಈ ವರ್ಷ ಜುಲೈ ತಿಂಗಳಲ್ಲಿ  ಉತ್ತರ ಕರ್ನಾಟಕ ಹಾಗೂ ಮಲೆ ನಾಡು, ಕರಾವಳಿ ಭಾಗದಲ್ಲಿ ಉಂಟಾದಪ್ರವಾಹದಿಂದ ಸುಮಾರು 2,16,116.36 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಆದರೂ. ನಿರೀಕ್ಷಿತ ಆಹಾರ ಉತ್ಪಾದನೆ ಗುರಿ ಮುಟ್ಟುವ ವಿಶ್ವಾಸದಲ್ಲಿ ಕೃಷಿ ಇಲಾಖೆ ಇದೆ.

3.06 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ :

ರಾಜ್ಯದಲ್ಲಿ ಕೃಷಿ ಚಟುವಟಿಕೆಗಳ ದೃಷ್ಟಿಯಿಂದ  ಎಪ್ರಿಲ್‌, ಮೇನಲ್ಲಿ  ಪೂರ್ವ ಮುಂಗಾರು ಮಳೆಯಿಂದಾಗಿ ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು ಮತ್ತು ಚಿತ್ರದುರ್ಗ, ಹಾಸನ  ಜಿÇÉೆಗಳ ಕೆಲವು ಭಾಗಗಳಲ್ಲಿ ಭೂ ಸಿದ್ಧತೆ ಹಾಗೂ ಜೋಳ, ಹೆಸರು, ಉದ್ದು, ಅಲಸಂದೆ, ಎಳ್ಳು, ಸೂರ್ಯಕಾಂತಿ, ಹತ್ತಿ, ತಂಬಾಕು ಬೆಳೆಗಳ ಬಿತ್ತನೆ ಗುರಿ 2.58 ಲಕ್ಷ ಹೆಕ್ಟೇರ್‌ಗೆ ಪ್ರತಿಯಾಗಿ 3.06 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next