Advertisement

ರಣಘಟ್ಟ ಯೋಜನೆ ಬಿಜೆಪಿ ಪಕ್ಷದ ಸಾಧನೆ: ಪ್ರೀತಂ ಗೌಡ

03:33 PM Nov 09, 2021 | Team Udayavani |

ಬೇಲೂರು: ಬಿಜೆಪಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಪರಿಶ್ರಮದಿಂದ ತಾಲೂಕಿನ ರಣಘಟ್ಟ ಯೋಜನೆ ರೂಪಿತವಾಗಿದೆ. ಆದರೆ ಬೇಲೂರು ಶಾಸಕರು ಮಾತ್ರ ಈ ಯೋಜನೆ ನನ್ನ ಪರಿಶ್ರಮ ಎಂದು ಹೇಳಿಕೊಳ್ಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಕುರಿತು ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜಿ. ಗೌಡ ಒತ್ತಾಯಿಸಿದರು.

Advertisement

ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಶಾಸಕರಾದ ಕೆ.ಎಸ್‌.ಲಿಂಗೇಶ್‌ರವರ ಸಮಿಶ್ರ ಸರ್ಕಾರ ರಾಜ್ಯದಲ್ಲಿ 14 ತಿಂಗಳಲ್ಲಿ ಬೇಲೂರಿನ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬ ಬಗ್ಗೆ ಮೊದಲು ಉತ್ತರ ನೀಡಬೇಕಿದೆ. ಇನ್ನೂ ಜಿಲ್ಲೆಯ ಸ್ವಯಂ ಘೋಷಿತ ಅಭಿವೃದ್ಧಿ ಹರಿಕಾರ ಎಂದು ಕರೆಸಿಕೊಳ್ಳುವ ರೇವಣ್ಣನವರು ತಮ್ಮ ಸ್ವಕ್ಷೇತ್ರ ಹೊರತುಪಡಿಸಿ ಜಿಲ್ಲೆಗೆ ನೀಡಿದ ಕೊಡುಗೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಅನುಕಂಪ ಸೃಷ್ಟಿಸಲು ಯತ್ನ: ಬೇಲೂರು ಶಾಸಕರು ಪ್ರತಿ ವೇದಿಕೆಯಲ್ಲಿ ರಣಘಟ್ಟ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಕ್ಷೇತ್ರದಲ್ಲಿ ಯಾವ ರಸ್ತೆ ಕಾಮಗಾರಿ ನಡೆದಿಲ್ಲ, ಕೇವಲ ರಣಘಟ್ಟ ಅನುಕಂಪ ಸೃಷ್ಟಿಸಿ ಓಟು ಪಡೆಯಲು ಮುಂದಾ ಗಿರುವ ಬೇಲೂರು ಶಾಸಕರ ಶೂನ್ಯ ಸಾಧನೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರವಾಗಿ ಬೇಲೂರಿನಲ್ಲಿ ಕಮಲ ಅರಳುವುದು ಖಚಿತವೆಂದು ವಿಶ್ವಾಸದ ಮಾತುಗಳನ್ನು ಆಡಿದರು.

ಜೆಡಿಎಸ್‌ಗೆ ಎಚ್ಚರಿಕೆ: ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್‌ ಮಾತನಾಡಿ, ರಣಘಟ್ಟ ಯೋಜನೆಗೆ ಮಠಾಧೀಶರು, ರೈತ ಸಂಘ ಮತ್ತು ಎಲ್ಲರ ಕೊಡುಗೆಯನ್ನು ಇಲ್ಲಿನ ಶಾಸಕರು ತಳ್ಳಿ ಹಾಕಿ. ನಾನೇ ರಣಘಟ್ಟದ ರೂವಾರಿ ಎಂದೇ ಹೇಳಿಕೊಳ್ಳುವ ಬೇಲೂರು ಶಾಸಕರು ಜನರಿಗೆ ಸತ್ಯ ಹೇಳುವ ಪ್ರಯತ್ನ ಮಾಡಬೇಕಿದೆ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಠೇವಣಿಗೆ ಪರಿತಾಪ ಪಡುವ ದಿನಗಳು ಹತ್ತಿರವಿದೆ ಎಂದು ಜೆಡಿಎಸ್‌ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷರು ದಲಿತರು ಹೊಟ್ಟೆಪಾಡಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ದಲಿತರ ವಿರುದ್ಧ ವಾಗ್ಧಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೀತಿ ನಿಜಕ್ಕೂ ಖಂಡನೀಯ ಹಾಗಾದರೆ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಸೇರ್ಪಡೆಯಾದ ಬಗ್ಗೆ ಉತ್ತರಿಸಿ ಎಂದು ಛೇಡಿಸಿದರು.

Advertisement

ವಿಧಾನ ಪರಿಷತ್‌ ಸದಸ್ಯ ಮುನಿರಾಜೇ ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಆನಂದ್‌, ಪ್ರಾಧಿಕಾರದ ಅಧ್ಯಕ್ಷ ಎ.ಸಿ.ಬಸವರಾಜು, ಬಿಜೆಪಿ ಹಿರಿಯ ಮುಖಂಡ ಕೊರಟಗೆರೆ ಪ್ರಕಾಶ್‌, ರೇಣುಕುಮಾರ್‌, ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಈಶ್ವರಪ್ಪ, ಪ್ರಸನ್ನ, ಪುರಸಭಾ ಸದಸ್ಯ ಪ್ರಭಾಕರ್‌, ಬಿ.ಕೆ.ಚಂದ್ರಕಲಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next