Advertisement

ನಿಫಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ

09:45 PM Jun 11, 2019 | Lakshmi GovindaRaj |

ದೇವನಹಳ್ಳಿ: ಕೇರಳದಲ್ಲಿ ಕಾಣಿಸಿರುವ ನಿಫಾ ವೈರಸ್‌, ರಾಜ್ಯದಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ ಗೌಡ ತಿಳಿಸಿದರು.

Advertisement

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾ ಸಂಕೀರ್ಣದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ನಿಫಾ ವೈರಸ್‌ ಜ್ವರದ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಕೇರಳದಿಂದ ಬರುವ ಪ್ರಯಾಣಿಕರನ್ನು ವೈದ್ಯರ ತಂಡ ಪರಿಶೀಲಿನೆ ನಡೆಸುತ್ತದೆ. ಜ್ವರ, ತಲೆ ನೋವು, ತಲೆ ಸುತ್ತುವಿಕೆ, ದಿಗ್ಬಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವ ಮೂಲಕ ಸಾವು ಸಂಭವಿಸುತ್ತದೆ. ತಪಾಸಣೆ ವೇಳೆ ಈ ಎಲ್ಲವನ್ನು ಪರೀಕ್ಷಿಸಲಾಗುವುದು.

ಹಂದಿಗಳಲ್ಲಿ ಉಸಿರಾಟದ ತೊಂದರೆ ಹಾಗೂ ನರ ದೌರ್ಬಲ್ಯವಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಚಿಕನ್‌ ಗುನ್ಯಾ, ಮಲೇರಿಯಾ, ಡೆಂಘಿ ಜ್ವರದ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ನೇತತ್ವದಲ್ಲಿ ಸಭೆಗಳನ್ನು ಮಾಡಿ, ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಅರಿವು ಮುಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರನ್ನು ವಲಸೆ ಬರುವುದರಿಂದ ರೋಗಗಳು ಕಂಡು ಬರುವುದು. ಅದಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಲಾಗುತ್ತಿದೆ. ಹೋಟೆಲ್‌ಗ‌ಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

Advertisement

ನಿಫಾ ವೈರಸ್‌ ಸಾಂಕ್ರಾಮಿಕವಾಗಿದ್ದು, 1998 ರಲ್ಲಿ ಮಲೇಷ್ಯಾ, ಸಿಂಗಪುರ ದೇಶಗಳಲ್ಲಿ ಮೊದಲ ಬಾರಿ ಕಂಡು ಬಂದಿತ್ತು. ಈ ಜ್ವರ ಬಾವಲಿ , ಹಂದಿ , ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಬಾಧಿಸುತ್ತದೆ. ಮಲೇಷ್ಯಾ, ಸಿಂಗಪುರ, ಭಾರತ ಹಾಗೂ ಬಾಂಗ್ಲಾ ದೇಶಗಳಲ್ಲಿ ಕಾಣಿಸಿಕೊಂಡಿದೆ.

ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಶಿಂದಿ, ನೀರಾಗಳನ್ನು ಕುಡಿಯಬಾರದು. ಹಣ್ಣು ಮತ್ತು ಒಣ ಖರ್ಜೂರ ಸೇವಿಸಬೇಕು. ಸೋಂಕಿತ ರೋಗಿಯು ಕನಿಷ್ಠ 15 ದಿನಗಳು ಮನೆಯಲ್ಲಿ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಪ್ರತ್ಯೇತಿಕವಾಗಿರಬೇಕು.

ನಿಫಾ ವೈರಸ್‌ ರೋಗಿಯ ಬಟ್ಟೆ ಹಾಗೂ ಉಪಯೋಗಿಸಿದ ಇತರೆ ಪದರ್ಥಗಳನ್ನು ಸೋಂಕು ನಿವಾರಣೆ ಮಾಡಬೇಕು. ಬಾವಲಿಗಳ ಪ್ರದೇಶವನ್ನು ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿಯನ್ನು ಅಳವಡಿಸಬೇಕು ಎಂದು ಮಾಹಿತಿ ನೀಡಿದರು.

ಚುಚ್ಚು ಮದ್ದು ನಿಯಂತ್ರಣ ಅಧಿಕಾರಿ ಅಧಿಕಾರಿ ಡಾ. ಮಹೇಶ್‌, ಜಿಲ್ಲಾ ಕುಟುಂಬ ಕಲ್ಯಣ ಪ್ರಭಾರ ಅಧಿಕಾರಿ ಡಾ.ಶ್ರೀನಿವಾಸ್‌, ಜಿಲ್ಲಾ ತಂಬಾಕು ಸಲಹೆಗಾರ್ತಿ ಡಾ.ವಿಧ್ಯಾರಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next