Advertisement
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಭಾಗಿತ್ವದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡ ಅರಿವು ಮತ್ತು ಅನಾಹುತ ತಡೆಗಟ್ಟುವಿಕೆಯ ಪ್ರಾತ್ಯಕ್ಷಿಕೆ ಪ್ರದರ್ಶನ ಹಮ್ಮಿಕೊಂಡ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಅಗ್ನಿ ಅವಘಡಗಳ ಬಗ್ಗೆ ಮಾತನಾಡಿದ ಅವರು, 2010ರಲ್ಲಿ ಬೆಂಕಿ ಅವಘಡವೊಂದು ರಾಜಧಾನಿ ಕಾರ್ಟನ್ ಪ್ರದೇಶದಲ್ಲಿ ನಡೆದು, ಒಂಬತ್ತು ಜನರ ಸಜೀವ ದಹನ ಹೊಂದಿದ್ದು, ಮುಂದೆ ಇಂತಹ ಕಹಿ ಘಟನೆ ನಡೆಯಬಾರದೆಂದು ಸರ್ಕಾರ ಅಗ್ನಿ ಅವಘಡ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಮಾಹಿತಿಗೆ ತರಬೇಕೆನ್ನುವ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಗ್ನಿಅನಾಹುತವಾಗದಂತೆ ಪ್ರತಿಮನೆಗಳಲ್ಲಿಯೂ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು, ಗ್ಯಾಸ್ ಸಿಲೆಂಡರ್ ಬಳಸುವಾಗ ವಿದ್ಯುತ್ ಸಂಪರ್ಕದ ಕಾಳಜಿ, ಕಟ್ಟಿಗೆ ಒಲೆ ಬಳಸುವಾಗ ಎಚ್ಚರಿಕೆ ಅಗತ್ಯವೆಂದರು.
Advertisement
ಅಗ್ನಿ ಅವಘಡ ತಪ್ಪಿಸಲು ಮುನ್ನೆಚ್ಚರಿಕೆ ಅಗತ್ಯ: ಸಂಧ್ಯಾನಕರ್
03:30 PM Feb 26, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.