Advertisement

ಅಗತ್ಯ ಕೆಲಸಗಳಿಗೆ ಮಾತ್ರ ಹೊರ ಬನ್ನಿ, ಬಸ್ ಸೇವೆ ಕಡಿತ: ಕಲಬುರಗಿ ಜಿಲ್ಲಾಧಿಕಾರಿ

10:05 AM Mar 15, 2020 | keerthan |

ಕಲಬುರಗಿ: ಕೊರೊನಾ ಸೋಂಕಿನಿಂದ ವ್ಯಕ್ತಿ ಮೃತಪಟ್ಟ ಕಾರಣ ಹಾಗೂ ಸೋಂಕು ಹರಡುವಿಕೆ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳಿಗಾಗಿ ಮಾತ್ರ ಜನತೆ ಮನೆಯಿಂದ ಹೊರಬೇಕು.‌ ಅನಗತ್ಯವಾದ ಕೆಲಸ ಕಾರ್ಯಗಳನ್ನು ಸ್ಥಗಿತ ಗೊಳಿಸಬೇಕೆಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಶರತ್ ಮನವಿ ಮಾಡಿದರು.

Advertisement

ಕಿರಣಾ ಅಂಗಡಿ, ಮೆಡಿಕಲ್ ಶಾಪ್ ಗಳು ಹಾಗೂ ಇತರ ಅಗತ್ಯ  ‌ವಸ್ತುಗಳ ಅಂಗಡಿಗಳು ತೆರೆದಿರುತ್ತದೆ. ಬಟ್ಟೆ, ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತದೆ. ನಾಗರಿಕರು ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ ತಕ್ಷಣ ವಾಪಸ್ ಮನೆಗೆ ತೆರಳಬೇಕು. ನಾವು ಸೆಕ್ಷನ್ 144ರಡಿ ನಿಷೇಧಾಜ್ಞೆ ಮಾಡುತ್ತಿಲ್ಲ.‌  ನಿರ್ದಾಕ್ಷಿಣ್ಯ ಕ್ರಮ ಜರುತ್ತಿದ್ದೇವೆ ಅಷ್ಟೇ ಎಂದರು.

ಕೆಲ ಸರ್ಕಾರಿ ಸೇವೆಗಳ ಸ್ಥಗಿತ: ಹೆಚ್ಚು ಜನರು ಸೇರದಂತೆ ನೀಡಿಕೊಳ್ಳಲು ಕೆಲ ಸರ್ಕಾರಿ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ‌.‌ ಉಪನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ‌ಕಚೇರಿ ಹಾಗೂ ಕಂದಾಯ ಇಲಾಖೆಯಲ್ಲಿ ಪಹಣಿ, ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ನೀಡುವ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ. ಉಳಿದಂತೆ ಸರ್ಕಾರಿ ಕಚೇರಿಗಳು ನಡೆಯುತ್ತವೆ ಎಂದರು.‌

ತುರ್ತು ಕೆಲಸ ಇದ್ದರೆ ಮಾತ್ರ ಬನ್ನಿ: ಬೇರೆ-ಬೇರೆ ಜಿಲ್ಲೆಗಳಿಂದ ಕಲಬುರಗಿಗೆ ತುರ್ತು ಕೆಲಸ ಇದ್ದರೆ ಮಾತ್ರ ಬರಬೇಕೆಂದು ಜಿಲ್ಲಾಧಿಕಾರಿ ಕೋರಿದರು. ಕಲಬುರಗಿಗೆ ಬೇರೆ ಜಿಲ್ಲೆಯ ಜನರು ಬರುವುದನ್ನು ‌ತಪ್ಪಿಸಲು ಸಾರಿಗೆ ಸಂಸ್ಥೆಯ‌ ಬಸ್ ಗಳ ಸಂಚಾರವನ್ನು ‌ಕಡಿಮೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಮದುವೆಗೆ ಅನುಮತಿ ಅಗತ್ಯ: ಕೊರೊನಾ ಭೀತಿ ಕಡಿಮೆಯಾಗುವರೆಗೆ ಮದುವೆ ಸಮಾರಂಭಕ್ಕೆ ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ‌ಮದುವೆಯಲ್ಲಿ ವಧು-ವರರ ಕುಟುಂಬಗಳು ಮಾತ್ರ ಇರಬೇಕು. ಇದನ್ನು ಖಚಿತ ಪಡಿಸಿದ ನಂತರವೇ ಅನುಮತಿ ನೀಡಲಾಗುತ್ತದೆ ಎಂದರು.

Advertisement

ಕೊರೊನಾ ಶಂಕಿತರು ಅಥವಾ ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ತಾವಾಗಿಯೇ ಸಮಸ್ಯೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಹೀಗಾಗಿ ಬೇರೆಯವರಾದರೂ‌ ಮಾಹಿತಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಲಾಗುವುದು ಎಂದು‌ ಡಿಸಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next