Advertisement
“ಶ್ರೀ ಸತ್ಯನಾರಾಯಣ’ ಚಿತ್ರದ ನಂತರ ಹರೀಶ್ ರಾಜ್ ಅವರ ಇನ್ನೊಂದು ಚಿತ್ರ “ಕಿಲಾಡಿ ಪೊಲೀಸ್’ ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅವರ ನಿರ್ಮಾಣ ಮತ್ತು ನಿರ್ದೇಶನದ ಐದನೆಯ ಚಿತ್ರ.
ಈ ಚಿತ್ರವು ತಮಿಳಿನಲ್ಲಿ 2014ರಲ್ಲಿ ತೆರೆಗೆ ಬಂದ “ತಿರುಡನ್ ಪೊಲೀಸ್’ ಎಂಬ ಚಿತ್ರದ ರೀಮೇಕ್. ಈ ಚಿತ್ರದಲ್ಲಿ ಹರೀಶ್ ಪೊಲೀಸ್ ಪೇದೆಯಾಗಿ ಕಾಣಿಸಿಕೊಂಡಿದ್ದು, ತಂದೆ-ಮಗನ ಸಂಬಂಧದ ಸುತ್ತ ಚಿತ್ರ ಸುತ್ತುತ್ತದಂತೆ. “ತಂದೆ-ಮಗನ ಸೆಂಟಿಮೆಂಟ್ ಚಿತ್ರ ಇದು. ಇಲ್ಲಿ ತಂದೆಯಾಗಿ ಶ್ರೀನಿವಾಸಮೂರ್ತಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.ಇನ್ನು ಈ ಚಿತ್ರದ ಟೀಸರ್ ನ್ನು “ತಂದೆಯರ ದಿನಾಚರಣೆಯಂದು ಬಿಡುಗಡೆ ಮಾಡಿದ್ದು, ಎಲ್ಲ ತಂದೆಯರಿಗೂ ಇದನ್ನು ಅರ್ಪಿಸಲಾಗಿದೆ. ಈ ಟೀಸರ್ ನಲ್ಲಿ ಹೇಳುವ ಹಾಗೆ “ತಾಯಿ ನಂತರ ಕಣ್ಣಿಗೆ ಕಾಣೋ ದೇವರು ಅಂದರೆ ಅದು ತಂದೆ. ತನ್ನ ಮಗುವನ್ನ ತಾಯಿಯಷ್ಟೇ ಪ್ರೀತಿ ಮಾಡುತ್ತಾನೆ. ಆದರೆ ಹೇಳಿಕೊಳ್ಳೊಕ್ಕೆ ಬರಲ್ಲ. ಬೆರಳು ಹಿಡಿದು ನಡೆಯೋದು ಕಲಿಸುತ್ತಾನೆ, ತಮಾಷೆ ಮಾಡಿ ನಗಿಸುತ್ತಾನೆ. ತಪ್ಪು ಮಾಡಿದಾಗ ಹೊಡೆದು, ಬಯ್ದು, ಬುದ್ಧಿ ಕಲಿಸುತ್ತಾನೆ. ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಅಂತಾ, ಎಷ್ಟೇ ದುಃಖ ಇದ್ದರೂ ಯಾರ ಹತ್ತಿರನೂ ತೋರಿಸಿಕೊಳ್ಳದೇ, ನಗು – ನಗುತಾ ಖುಷಿಯಾಗಿ ಮಕ್ಕಳನ್ನು ಬೆಳೆಸುತ್ತಾನೆ, ಎಲ್ಲ ತಂದೆಯಂದಿರಿಗೂ ಒಂದು ಆಸೆ ಇರುತ್ತೆ. ನಮ್ಮಪ್ಪನ ಆಸೆ ನಾನು ಪೊಲೀಸ್ ಆಗಬೇಕು ಅಂತಾ’. ಎಂಬ ಸಂದೇಶದ ಜೊತೆಗೆ “ಹ್ಯಾಟ್ಸ್ ಆಫ್ ಟು ಅಲ್ ಫಾಧರ್ಸ್’, ಹ್ಯಾಪಿ ಫಾಧರ್ಸ್ ಡೇ ಎಂಬ ಸಂದೇಶದೊಂದಿಗೆ ತೆರೆ ಬೀಳುತ್ತದೆ.
Related Articles
Advertisement