Advertisement

ಬೇಂದ್ರೆಯವರ ಕಾವ್ಯ ಸ್ಪರ್ಶದ ಸೃಜನಾತ್ಮಕ ಪ್ರಿ ವೆಡ್ಡಿಂಗ್ ಶೂಟ್ಸ್ ಸಖತ್ ವೈರಲ್ ..!

05:34 PM Mar 31, 2021 | ಶ್ರೀರಾಜ್ ವಕ್ವಾಡಿ |

ನದಿ, ಕೆರೆ, ದೇವಸ್ಥಾನ, ಸಮುದ್ರ, ಜಲಪಾತ ಪ್ರದೇಶಗಳಲ್ಲಿ ಟ್ರೆಂಡಿಂಗ್ ಸಿನೆಮಾ ದೃಶ್ಯಗಳಿಗೆ ಹೋಲುವಂತೆಯೇ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳುವುದು ಈಗೀಗ ಸಾಮಾನ್ಯವಾಗಿ, ಶುಷ್ಕವಾಗಿ ಬಿಟ್ಟಿದೆ. ಕೆಲವು ಪ್ರಿ ವೆಡ್ಡಿಂಗ್ ಶೂಟ್ ಗಳು ಟೀಕೆಗಳಿಗೂ, ಕೇಕೆಗಳಿಗೂ ಕಾರಣವಾಗಿರುವುದು ಗೊತ್ತಿರುವ ವಿಚಾರ.

Advertisement

ಇತ್ತೀಚೆಗಿನ ದಿನಗಳಲ್ಲಿ ಮದುವೆಯ ದಿನಮಾನಗಳನ್ನು ಸದಾ ಹಸಿರಾಗಿಡಲು ಹೊಸ ತಲೆಮಾರಿನ ಜೋಡಿಗಳು ನೂತನ ರೀತಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಗಳನ್ನು ಮಾಡಿಸಿಕೊಳ್ಳುವತ್ತ ಆಸಕ್ತಿಯನ್ನು ಹೊಂದುತ್ತಿದ್ದಾರೆ.

ಓದಿ :   ಐಪಿಎಲ್‌ನಲ್ಲಿ ಹೊಸತನ: ಈ ಬಾರಿಯ ಐಪಿಎಲ್‌ ನಿಯಮಗಳಲ್ಲಿ ಬಿಸಿಸಿಐನಿಂದ ಪ್ರಮುಖ ಬದಲಾವಣೆ

ಮನುಷ್ಯನ ಬದುಕಿನಲ್ಲಿ ‘ಮದುವೆ’ ಎನ್ನುವುದು ಮೂರಕ್ಷರದ ಸಂಸ್ಕಾರ. ದಂಪತಿಗಳ ಬದುಕಿನಲ್ಲಿ ಅಚ್ಚಳಿಯದೆ ಉಳಿಯುವ ಹೆಜ್ಜೆ ಗುರುತು. ತಮ್ಮ ಬಾಂಧವ್ಯದ ಹೊಸ ಹೆಜ್ಜೆಗಳನ್ನು ನೆನಪಿನ ಪುಟಗಳಿಗೆ ಸೇರಿಸಿಡುವ ಸಲುವಾಗಿ ಜೋಡಿಗಳು ಫೋಟೋ ಶೂಟ್ ಗಳಲ್ಲಿ ನಾವಿನ್ಯತೆ, ಸೃಜನಶೀಲತೆಯನ್ನು ಕಾಣಬಯಸುವುದು ಸಹಜ. ಅದು ಅವರ ಭಾವಾಭಿವ್ಯಕ್ತಿಗೂ ಸಾಕ್ಷಿಯಾಗಿ ನಿಲ್ಲುತ್ತದೆ.

ಹೌದು, ಅಂತಹದ್ದೊಂದು ಸೃಜನಾತ್ಮಕ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡು ಇಲ್ಲೊಂದು ಭಾವಿ ಜೋಡಿ ಹಕ್ಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ.

Advertisement

ಕನ್ನಡ ಸಾಹಿತ್ಯ ಲೋಕದ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟು ಸಾಹಿತ್ಯ ಶ್ರೇಷ್ಠರಲ್ಲೋರ್ವರಾದ, ಕನ್ನಡದ ವರಕವಿ, ಕಾವ್ಯ ಅಂದ್ರೆ, ಬೇಂದ್ರೆ ಎನ್ನುವಷ್ಟರ ಮಟ್ಟಿಗೆ ಖ್ಯಾತನಾಮರಾದ ದ.ರಾ. ಬೇಂದ್ರೆಯವರ ಬದುಕು ಬರಹವನ್ನು, ಅವರು ಸಾಗಿಬಂದ ಹೆಜ್ಜೆಗಳ ನುಡಿ ನುಡಿತವನ್ನು ಈ ಜೋಡಿ  ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಗೆ ಬಳಸಿಕೊಂಡಿದ್ದು ಬಾರಿ ಶ್ಲಾಘನೆಯೊಂದಿಗೆ ಈಗ ವೈರಲ್ ಆಗುತ್ತಿದೆ.

ಉತ್ತರ ಕರ್ನಾಟಕದ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಪ್ರಿ ವೆಡ್ಡಿಂಗ್ ಫೋಟೋ  ಶೂಟ್ ಗಳು ಬೇಂದ್ರೆಯವರ ಕೃತಿಗಳ ಒಳ ಸಾರವನ್ನು ಬಿಚ್ಚಿಡುತ್ತವೆ.

ಬರುವ ಏಪ್ರಿಲ್ 23 ರಂದು ಮಿಲನಗೊಳ್ಳುತ್ತಿರುವ ಧಾರವಾಡದ ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿ ಬೇಂದ್ರೆಯವರ ಬದುಕನ್ನು, ಅವರ ಕಾವ್ಯಗಳ ಸಾರವನ್ನು ತಮ್ಮ ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ತೋರಿಸಿದ್ದಾರೆ.

ಓದಿ :   ಬಂದರು ಗುತ್ತಿಗೆ : ಮ್ಯಾನ್ಮಾರ್ ಜೊತೆ ಅದಾನಿ ಗ್ರೂಪ್ ನಿಂದ 30 ಮಿಲಿಯನ್ ಡಾಲರ್ ಒಪ್ಪಂದ

ಚೇತನಾ ಧಾರವಾಡದ ಸಾಧನಕೇರಿಯಲ್ಲಿರುವ ಬೇಂದ್ರೆಯವರ ಮನೆಯ ನೆರೆಯ ನಿವಾಸಿ, ಬೇಂದ್ರೆಯವರ ಬದುಕು ಬರಹಗಳ ಸ್ಪರ್ಶವನ್ನು ಎಳವೆಯಿಂದಲೂ ಕೇಳಿ ತಿಳಿದಿರುವ ಚೇತನಾ, ಬೇಂದ್ರೆಯವರಿಂದ ಪ್ರಭಾವಕ್ಕೊಳಗಾದವರೂ ಕೂಡ ಹೌದು.  ಅವರ ಕುಟುಂಬವು ತಲೆ ತಲೆಮಾರುಗಳಿಂದ ಬೇಂದ್ರೆಯವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವುದು ಕೂಡ ಈ ಹೊಸ ಸೃಜನಶೀಲತೆಗೆ ಕೈದೀವಿಗೆಯ ಬೆಳಕನ್ನು ಹರಿಸಿದೆ.

ಇಲ್ಲಿ ಬಹಳ ವಿಶೇಷವೆಂದರೇ,  ಬೇಂದ್ರೆಯವರು ಬಳಸುತ್ತಿದ್ದ ಸಾಂಪ್ರದಾಯಿಕ ಟೋಪಿ, ಛತ್ರಿ ಮತ್ತು ಗ್ರಾಮೋಫೋನ್‌ ಗಳನ್ನು ಚಿತ್ರೀಕರಣಕ್ಕಾಗಿ ಕುಟುಂಬದಿಂದ ಪಡೆದುಕೊಳ್ಳಲಾಗಿದ್ದು,  ಯುವ ಆರ್ಟ್ ಸ್ಟುಡಿಯೋದ ಸಂಸ್ಥಾಪಕ ಮತ್ತು ಧಾರವಾಡದ ಛಾಯಾಗ್ರಾಹಕ ಹರ್ಷದ್ ಉದಯ್ ಕಾಮತ್ ಅವರ ಕ್ಯಾಮರಾದ ಕಣ್ಗಳು ಸೆರೆ ಹಿಡಿದ ಅನೇಕ ಥೀಮ್ ಆಧಾರಿತ ಫೊಟೋ ಶೂಟ್ ಗಳು ಮದುವೆ ಹೊಸ್ತಿಲಲ್ಲಿ ನಿಂತಿರುಯವ ಹೊಸ ಜೋಡಿಗಳಲ್ಲಿ ಭಾವ ಪುಳಕವನ್ನೆಬ್ಬಿಸುತ್ತಿರುವುದಂತೂ ಸುಳ್ಳಲ್ಲ.

ಬೇಂದ್ರೆ ಅವರ ಪ್ರಸಿದ್ಧ ಕವಿತೆಗಳಾದ “ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು” ಒಳಗೊಂಡಂತೆ ಅನೇಕ ಕಾವ್ಯಗಳ ಸಾರಾಂಶವನ್ನು ಪ್ರತಿಧ್ವನಿಸುವ ಪ್ರಿ ವೆಡ್ಡಿಂಗ್ ಶೂಟ್ ಗಳು ಈಗ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ.

(ಫೋಟೋ ಕೃಪೆ : ಸಾಮಾಜಿಕ ಜಾಲತಾಣ)

ಓದಿ :  ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬರೆದ ಪತ್ರದಲ್ಲೇನಿದೆ?

Advertisement

Udayavani is now on Telegram. Click here to join our channel and stay updated with the latest news.

Next