Advertisement

ಕಾರ್ಯಕರ್ತರಿಗೆ ಚುನಾವಣಾ ಪೂರ್ವ ತರಬೇತಿ: ಬಾವಾ

11:42 AM Dec 18, 2017 | Team Udayavani |

ಸುರತ್ಕಲ್‌ : ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಪ್ರತೀಬ್ಲಾಕ್‌, ಬೂತ್‌, ವಾರ್ಡ್‌ ಮಟ್ಟದ ಪದಾಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲು ಕೆಪಿಸಿಸಿ ಸೂಚಿಸಿದೆ ಎಂದು ಶಾಸಕ ಮೊಯಿದಿನ್‌ ಬಾವಾ ಹೇಳಿದರು. ಹೊನ್ನಕಟ್ಟೆಯಲ್ಲಿ ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ನ ಬೂತ್‌, ವಾರ್ಡ್‌, ಬ್ಲಾಕ್‌ ಮಟ್ಟದ ಪದಾ ಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಪಕ್ಷದ ಬಲವರ್ಧವನೆಗೆ ಕಾರ್ಯಕರ್ತರಿಗೆ ತರಬೇತಿ ಅಗತ್ಯ. ತಲಾ ಮೂರು ಕಾರ್ಯಕರ್ತರನ್ನು ಈ ತರಬೇತಿ ಆಯ್ಕೆ ಮಾಡಿ ಮತದಾರರೊಂದಿಗೆ ಸಂವಹನ, ಮತದಾರರ ಪಟ್ಟಿಗೆ ಸೇರ್ಪಡೆ ಮತ್ತಿತರ ವಿಚಾರಗಳ ಕುರಿತು ತರಬೇತಿ ನೀಡಲಾಗುವುದು ಎಂದರು.

ಕಾಂಗ್ರೆಸ್‌ ಮತ್ತಷ್ಟು ಬಲಶಾಲಿ
ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಪಟ್ಟವನ್ನು ರಾಹುಲ್‌ ಗಾಂಧಿ ಅಲಂಕರಿಸಿದ್ದು ಪಕ್ಷ ಮತ್ತಷ್ಟು ಬಲಶಾಲಿಯಾಗಿ ಹೊರಹೊಮ್ಮಲಿದೆ. ಯುವ ನಾಯಕ ದೇಶದ ಯುವ ಶಕ್ತಿಯನ್ನು ಪ್ರತಿನಿಧಿಸುತ್ತಿದ್ದು, ಆಡಳಿತ ವ್ಯವಸ್ಥೆಯಲ್ಲಿಯೂ ಮಹತ್ತರ ಬದಲಾವಣೆಗಳಾಗುವುದರಲ್ಲಿ ಸಂದೇಹವಿಲ್ಲ ಎಂದರು. ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಹಿಳಾ ಘಟಕದ ಅಧ್ಯಕ್ಷೆ ಶಕುಂತಳಾ ಕಾಮತ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಬ್ಲಾಕ್‌ ಉಸ್ತುವಾರಿಗಳಾದ ಹರ್ಷರಾಜ್‌, ಉಮ್ಮರ್‌ ಫಾರೂಕ್‌, ಬ್ಲಾಕ್‌ ಪದಾಧಿಕಾರಿಗಳಾದ ಮಂಗಳೂರು ಬಾವಾ, ಆನಂದ ಅಮೀನ್‌, ರಾಮ ಚಂದ್ರ, ಮಲ್ಲಿಕಾರ್ಜುನ್‌, ಜಿಲ್ಲಾ ಕಾರ್ಯದರ್ಶಿಗಳಾದ ಪುರುಷೋತ್ತಮ್‌ ಚಿತ್ರಾಪುರ, ಅಬ್ದುಲ್‌ ಸತ್ತಾರ್‌, ಸ್ಟಾನ್ಲಿ, ರಾಘವೇಂದ್ರ ರಾವ್‌, ಹಿಲ್ಡಾ ಆಳ್ವ, ಕಾರ್ಪೊರೇಟರ್‌ಗಳು, ವಿವಿಧ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮನವಿ
ಪಕ್ಷದ ವಿವಿಧ ಚಟುವಟಿಕೆ, ಅಭಿವೃದ್ಧಿ ಕಾಮಗಾರಿ ಸಂದರ್ಭ ಪಕ್ಷದ ಕಾರ್ಯಕರ್ತರಿಗೆ, ಸ್ಥಳೀಯ ಬೂತ್‌, ವಾರ್ಡ್ ಮಟ್ಟದ ಪದಾಧಿಕಾರಿಗಳಿಗೆ ಮಾಹಿತಿ ಸಿಗುತ್ತಿಲ್ಲ ಇದನ್ನು ಸರಿಪಡಿಸಬೇಕು ಎಂದು ಕಾರ್ಯದರ್ಶಿ ಹುಸೈನ್‌ ಕಾಟಿಪಳ್ಳ ಮನವಿ ಮಾಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next