Advertisement

Kankanady ಮಸೀದಿ ಹೊರಗಡೆ ಪ್ರಾರ್ಥನೆ ವಿಚಾರ; ಸುಮೊಟೊ ಬೇಕಿರಲಿಲ್ಲ : ರೈ

11:18 PM May 31, 2024 | Team Udayavani |

ಮಂಗಳೂರು: ದೇವರು ಒಬ್ಬರೇ. ಕಂಕನಾಡಿ ಮಸೀದಿ ಹೊರಗೆ ನಮಾಜ್‌ ಮಾಡಿದ್ದು ಅನಗತ್ಯ ವಿಷಯ. ಆ ಸಣ್ಣ ವಿಷಯಕ್ಕೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಧರ್ಮಗಳ ಕಾರ್ಯಕ್ರಮಗಳು ಕೆಲವೊಮ್ಮೆ ರಸ್ತೆಯಲ್ಲಿ ನಡೆಯುತ್ತವೆ. ಅದನ್ನು ತಪ್ಪು ಎನ್ನಲಾಗದು. ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ, ಕೃತ್ಯ ನಡೆದಾಗಲೂ ಸುಮೊಟೊ ಪ್ರಕರಣ ಆಗಿಲ್ಲ. ಪ್ರಾರ್ಥನೆಯ ವೀಡಿಯೋ ಮಾಡಿ ಸೌಹಾರ್ದಕ್ಕೆ ಧಕ್ಕೆ ತರುವ ಕಾರ್ಯ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಯುವಕರ ಸಮಸ್ಯೆ ಅರ್ಥ ಮಾಡಿಕೊಂಡು ಅವರಿಗೆ ಸ್ಪಂದಿಸುವ ಕಾರ್ಯ ಕಾಂಗ್ರೆಸ್‌ ಸರಕಾರದಿಂದ ಆಗಲಿದೆ. ಹಳೆ ಪಿಂಚಣಿ ಜಾರಿ ಮಾಡುವ ಭರವಸೆಯನ್ನು ಈಡೇರಿಸಲಾಗುವುದು. ಸರಕಾರಿ ಶಾಲೆಗಳ ಸಮಸ್ಯೆ, ಶಿಕ್ಷಕರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಳು ಪಕ್ಷದಿಂದ ಸ್ಪಧಿ ìಸಿದ್ದಾರೆ. ಅವರಿಗೆ ಕ್ಷೇತ್ರದ ಮತದಾರರು ಬೆಂಬಲ ನೀಡಲಿದ್ದಾರೆ ಎಂದರು.

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಮಾತನಾಡಿ, ಜಿಲ್ಲೆಯ ಸೌಹಾರ್ದ ಕದಡುವ ಕಾನೂನುಬಾಹಿರ ಕೆಲಸ ಆದಾಗ ಸುಮೊಟೊ ಪ್ರಕರಣ ದಾಖಲಿಸುವುದು ಸಹಜ. ಆದರೆ ಈ ರೀತಿಯ ಸಣ್ಣ ವಿಷಯದಲ್ಲಿ ಸಂಬಂಧಪಟ್ಟವರನ್ನು ಕರೆಸಿ ಬುದ್ಧಿವಾದ ಹೇಳುವ ಕೆಲಸ ಮಾಡಬೇಕಿತ್ತು ಎಂದರು. ಮುಖಂಡರಾದ ಅಶ್ರಫ್‌ ಕೆ., ಅಪ್ಪಿ, ಇಬ್ರಾಹಿಂ ಕೋಡಿಜಾಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next