Advertisement

‘ಸೈರನ್’ ಚಿತ್ರದಿಂದ ‘ಎಣ್ಣೆ ಹೊಡೆಯೋ ಟೈಮಲ್ಲಿ’ ಹಾಡು ಬಂತು

02:43 PM Jan 27, 2023 | Team Udayavani |

“ಸೈರನ್‌’ ಎಂಬ ಸಿನಿಮಾ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರದ ಮೂಲಕ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಅವರ ಮಗ ಪ್ರವೀರ್‌ ಶೆಟ್ಟಿ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ.

Advertisement

ಇತ್ತೀಚೆಗೆ ಚಿತ್ರದ “ಎಣ್ಣೆ ಹೊಡೆಯೋ ಟೈಮಲ್ಲಿ…’ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆಯಲ್ಲಿ ಲಹರಿ ವೇಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಹಾಜರಿದ್ದು, ಶುಭಕೋರಿದರು. ಈ ಹಾಡನ್ನು ಮಂಗ್ಲಿ ಹಾಡಿದ್ದಾರೆ.

ಈ ಚಿತ್ರವನ್ನು ಮೂಲತಃ ತಮಿಳುನಾಡಿನವರಾದ ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. “”ಸೈರನ್‌’ ಚಿತ್ರದ ಕೆಲಸಗಳು ಈಗಾಗಲೇ ಮುಗಿದಿದ್ದು, ಫೆಬ್ರವರಿ ಮೂರನೇ ವಾರದಲ್ಲಿ ರಿಲೀಸ್‌ ಮಾಡುವ ಪ್ಲ್ರಾನ್‌ ಇದೆ. ಈ ಸಿನಿಮಾವನ್ನು ನಾವು ಕನ್ನಡ ಮತ್ತು ತಮಿಳುನಲ್ಲಿ ಶೂಟ್‌ ಮಾಡಿದ್ದು, ತೆಲಗು ಮತ್ತು ಮಲಯಾಳಂಗೆ ಡಬ್‌ ಮಾಡಿ ರಿಲೀಸ್‌ ಮಾಡುತ್ತಿದ್ದೇವೆ. ನನ್ನ ಮೊದಲ ಚಿತ್ರವನ್ನು “ಡೆಕ್ಕನ್‌ ಕಿಂಗ್‌’ ಬ್ಯಾನರ್‌ಲ್ಲಿ ಬಿಜು ಶಿವಾನಂದ್‌ ಅವರು ನಿರ್ಮಿಸಿದ್ದಾರೆ. ಇದೊಂದು ಇನ್ವೆಸ್ಟಿಕೇಶನ್‌ ಮರ್ಡರ್‌ ಮಿಸ್ಟರಿ ಕಥೆ ಹೊಂದಿದ್ದು, ಇಲ್ಲಿ ನಾಯಕ ಪ್ರವೀರ್‌ ಯಂಗ್‌ ಆ್ಯಂಡ್‌ ಎನರ್ಜಿ ಇರುವ ಇನ್ವೆಸ್ಟಿಕೇಶನ್‌ ಆಫೀಸರ್‌ ಪಾತ್ರ ಮಾಡಿದ್ದಾರೆ’ ಎಂದು ಹೇಳಿದರು.

ನಂತರ ಮಾತನಾಡಿದ ಚಿತ್ರದ ನಾಯಕ ಪ್ರವೀರ್‌ ಶೆಟ್ಟಿ, ನಾನು ಇದರಲ್ಲಿ ಪೊಲೀಸ್‌ ಪಾತ್ರ ಮಾಡಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಬಾಂಬೆಯ ಅನುಪಮ್‌ ಖೇರ್‌ ಟ್ರೈನಿಂಗ್‌ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದೇನೆ. ಈ ಚಿತ್ರದಲ್ಲಿ ಯಂಗ್‌ ಇನ್ವಸ್ಟಿಕೇಷನ್‌ ಆಫೀಸರ್‌ ಪಾತ್ರ ಮಾಡಿದ್ದೇನೆ’ ಎಂದರು.

ಮಲಯಾಳಂ ಮೂಲದ ಲಾಸ್ಯ ಈ ಚಿತ್ರದ ನಾಯಕಿ. ಹೋಟೆಲ್‌ ಉದ್ಯಮ ನಡೆಸುತ್ತಿರುವ ಚಿತ್ರದ ನಿರ್ಮಾಪಕ ಬಿಜು ಶಿವಾನಂದ್‌ ಮಾತನಾಡಿ, “ಈ ಚ ತ್ರವನ್ನು ನಾವು ಗೆಳೆಯರು ಸೇರಿ ಕಷ್ಟಪಟ್ಟು ಮಾಡಿದ್ದೇವೆ. ಈ ಸಿನಿಮಾಗಾಗಿ ಎರಡು ವರ್ಷ ಶ್ರಮ ಹಾಕಲಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಮಗನ ಚಿತ್ರಕ್ಕೆ ಶುಭ ಹಾರೈಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next