ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಶುಕ್ರವಾರ ಬೆಳಗ್ಗೆ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಪುರುಷರ ಹೈಜಂಪ್ ನಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಹೈಜಂಪ್ ಟಿ64 ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರವೀಣ್ ಕುಮಾರ್ ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾರಾಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ 18 ವರ್ಷದ ಪ್ರವೀಣ್ ಕುಮಾರ್ 2.07 ಮೀಟರ್ ಎತ್ತರ ಜಿಗಿದು ಏಶ್ಯನ್ ದಾಖಲೆ ಬರೆದರು.
ಇದನ್ನೂ ಓದಿ:ನವೋಮಿ ಒಸಾಕಾಗೆ ವಾಕ್ ಓವರ್
ಚಿನ್ನ ಗೆದ್ದ ಬ್ರಿಟನ್ ನ ಕ್ರೀಡಾಪಟು ಜೊನಾಥನ್ ಬ್ರೂಮ್ ಎಡ್ವರ್ಡ್ಸ್ 2.10 ಮೀಟರ್ ಎತ್ತರ ಜಿಗಿದರು. ರಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ಪೊಲಾಂಡ್ ನ ಮಸಿಜ್ ಲೆಪಿಯಾಟೊ 2.04 ಮೀಟರ ಜಿಗಿದು ಮೂರನೇ ಸ್ಥಾನ ಪಡೆದರು.
Related Articles
ಪ್ರವೀಣ್ ಕುಮಾರ್ ಬೆಳ್ಳಿ ಸಾಧನೆಯೊಂದಿಗೆ ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ 11 ಪದಕ ಸಾಧನೆ ಮಾಡಿತು. ಭಾರತ ಇದುವರೆಗೆ ಎರಡು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಸದ್ಯ ಪದಕ ಪಟ್ಟಿಯಲ್ಲಿ 36ನೇ ಸಾಧನೆಯಲ್ಲಿದೆ.