Advertisement

ಪ್ರವೀಣ್‌ ಹತ್ಯೆ ಪ್ರಕರಣ: ಸ್ಥಳೀಯರೇ ಹಂತಕರು: ಸಚಿವ ಆರಗ ಜ್ಞಾನೇಂದ್ರ

12:11 AM Aug 06, 2022 | Team Udayavani |

ಬೆಂಗಳೂರು/ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಅವರ ಕೊಲೆಗಾರರು ಕೇರಳದವರಲ್ಲ. ಆದರೆ ಕೇರಳದೊಂದಿಗೆ ನಂಟು ಹೊಂದಿರುವ ಒಂದು ಸಮುದಾಯಕ್ಕೆ ಸೇರಿದ ಸ್ಥಳೀಯ ಯುವಕರೇ ನಡೆಸಿ ರುವ ಕೃತ್ಯವಿದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ಹಲಾಲ್‌ ಕಟ್‌ ಮತ್ತು ಜಟ್ಕಾ ಕಟ್‌ ವಿವಾದವೇ ಹತ್ಯೆಗೆ ಮೂಲ ಕಾರಣ. ಜತೆಗೆ ಕೆಲವು ದಿನಗಳ ಹಿಂದೆ ನಡೆದಿದ್ದ ಮಸೂದ್‌ ಕೊಲೆಗೆ ಪ್ರತೀಕಾರವಾಗಿಯೂ ಈ ಹತ್ಯೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ಪ್ರಮುಖ ಆರೋಪಿಗಳ ಪೈಕಿ ಓರ್ವ ಸುಳ್ಯದವ ಇನ್ನೋರ್ವ ಬೆಳ್ಳಾರೆ ಮೂಲದವ ಎಂಬ ಮಾಹಿತಿ ಇದೆ. ಹಂತಕರು ತಮ್ಮ ಮೊಬೈಲ್‌ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಮನೆಗೆ ಬೀಗ ಹಾಕಿ ಊರೂರು ಅಲೆಯುತ್ತಿರುವುದು ತಿಳಿದಿದೆ. ಎರಡು ಮೂರು ದಿನಗಳಲ್ಲಿ ಆರೋಪಿಗಳ ಬಂಧನವಾಗಲಿದೆ ಎನ್ನುವ ಸುಳಿವನ್ನು ಸಚಿವರು ನೀಡಿದ್ದಾ ರೆ. ಮತಾಂಧ ಶಕ್ತಿಗಳ ಕೃತ್ಯ ಇದಾಗಿದ್ದು ವಿದೇಶಿ ಶಕ್ತಿಗಳ ಕೈವಾಡದ ಶಂಕೆಯೂ ಇದೆ. ಆರೋಪಿಗಳು ಹೊರ ದೇಶಕ್ಕೆ ತೆರಳುವ ಸಾಧ್ಯತೆ ಇದ್ದು, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚೆರ ವಹಿಸಲಾಗಿದೆ.

ಕೇರಳ ನೋಂದಣಿಯ ಬೈಕನ್ನು ಬಳಸುವ ಮೂಲಕ ಹಂತಕರು ಕೇರಳದವರು ಎನ್ನುವಂತೆ ಬಿಂಬಿಸಿ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸಿದ ಸಾಧ್ಯತೆ ಇದೆ. ಕೃತ್ಯದ ಬಳಿಕ ಆರೋಪಿಗಳು ಕೇರಳಕ್ಕೆ ತೆರಳಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next