Advertisement

ಪುರಾಣ ಕಥೆಗಳ ವಾಚನ-ಪ್ರವಚನ

06:54 PM Oct 03, 2019 | mahesh |

ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಆಷಾಢ-ಶ್ರಾವಣ ಮಾಸದಲ್ಲಿ ಪ್ರತಿವರ್ಷ ಎರಡು ತಿಂಗಳ ಕಾಲ ಪ್ರತಿ ಸಂಜೆ ವೇದ-ವಿದ್ವಾಂಸರಿಂದ ಪುರಾಣ ಕಥೆಗಳ ವಾಚನ-ಪ್ರವಚನ ಜ್ಞಾನಸತ್ರ 47 ವರ್ಷಗಳಿಂದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ. ಈ ವರ್ಷ 64 ದಿನಗಳ ಪುರಾಣ ವಾಚನ ಪ್ರವಚನ ನಡೆಯಿತು. ಶ್ರೀ ಲಲಿತೋಪಾಖ್ಯಾನ, ಕುಮಾರವ್ಯಾಸ ಭಾರತ, ಕರ್ನಾಟಕ ಭಾರತ ಕಥಾಮಂಜರಿ (ನಹುಷ ಪ್ರಶ್ನೆ), ಶ್ರೀಮದ್ಮಗವದ್ಗೀತೆಯ ಕರ್ಮಯೋಗ-ಜ್ಞಾನಯೋಗ-ಭಕ್ತಿಯೋಗ ವಿಶ್ವರೂಪ, ನಳಚರಿತ್ರೆ, ರಾಮಾಯಣ ದರ್ಶನಂ, ಹನುಮದ್ವಿಲಾಸ, ಸೀತಾಪರಿತ್ಯಾಗ ಮತ್ತು ಪುನರ್ಮಿಲನ, ಸೋಮೇಶ್ವರ ಶತಕ, ಶಿಶುನಾಳ ಶರೀಫ್ ತತ್ವ ಪದಗಳು, ಶಂಕರ ಸಂಹಿತೆ ಇತ್ಯಾದಿ ಕಥಾಭಾಗಗಳನ್ನು ವಿದ್ವಾಂಸರು ವಾಚಿಸಿ ಪ್ರವಚನಕಾರರು ಜ್ಞಾನ ಸಂಪತ್ತನ್ನು ಉಣಬಣಿಸಿದರು.

Advertisement

ಪುರಾಣ ಕಥಾಭಾಗವನ್ನು ಹಿರಿಯ ವಿದ್ವಾಂಸರಾದ ಗಣಪತಿ ಪದ್ಯಾಣ, ಮನೋರಮ ತೋಳ್ಪಾಡಿತ್ತಾಯ, ಕಾರ್ತಿಕ್‌ ತಾಮ್ರ್ ಣ್‌ಕರ್‌, ಗುರುಪ್ರಸಾದ್‌, ಎ.ಡಿ. ಸುರೇಶ್‌, ಮಹೇಶ್‌ ಕನ್ಯಾಡಿ, ರಾಮಪ್ರಸಾದ್‌, ಶ್ರೇಯಸ್‌ ಪಾಳಂದೆ, ಸುರೇಶ ಮಾರ್ಪಳ್ಳಿ, ಅನನ್ಯಾ ಬೋಳಂತಿ ಮೊಗರು, ಸುವರ್ಣ ಕುಮಾರಿ, ದಿವಾಕರ ಆಚಾರ್‌, ವೆಂಕಟ್ರಮಣ ರಾವ್‌, ವಸಂತಿ ಕುಳಮರ್ವ, ಶ್ರೀ ವಿದ್ಯಾ ಐತಾಳ್‌, ಜಯರಾಮ್‌ ಕುದ್ರೆಂತಾಯ, ಗಿರಿಜಾದಾಸ್‌ ಮತ್ತು ವಿಷ್ಣುಪ್ರಸಾದ್‌ ಕಲ್ಲೂರಾಯ ಸುಶ್ರಾವ್ಯ ಕಂಠಸಿರಿಯಲ್ಲಿ ರಾಗಬದ್ದವಾಗಿ ಹಾಡಿದರೆ, ಅಶೋಕ ಭಟ್‌, ಸುರೇಶ್‌ ಕುದ್ರೆಂತಾಯ, ಸುನಿಲ್‌ ಪಂಡಿತ್‌, ಈಶ್ವರ ಪ್ರಸಾದ್‌, ಹರಿದಾಸ ಗಾಂಭೀರ, ಡಾ| ರಾಜಶೇಖರ್‌, ಸುಜಲಾ, ವೆಂಕಪ್ಪ ಸುವರ್ಣ, ಡಾ| ದಿವಾ ಕೊಕ್ಕಡ, ಮೋಹನ ಕಲ್ಲೂರಾಯ, ಶ್ರೀನಿವಾಸ ರಾವ್‌, ಕೇಶವ ಗೌಡ, ಬೆಳಾಲ್‌ ಲಕ್ಷ್ಮಣ ಗೌಡ, ಗಣಪತಿ ಭಟ್‌ ಕುಳಮರ್ವ, ಸೇರಾಜೆ ಸೀತಾರಾಮ ಭಟ್‌, ಡಾ| ಪ್ರಸನ್ನ ಕುಮಾರ್‌, ರಾಜಾರಾಮ ಶರ್ಮ, ಡಾ| ಇ. ಮಹಾಬಲ ಭಟ್‌, ಡಾ| ಶ್ರೀಧರ ಭಟ್‌, ಡಾ| ಶುೃತಕೀರ್ತಿರಾಜ್‌, ಡಾ| ಬಿ.ಪಿ. ಸಂಪತ್‌ಕುಮಾರ್‌, ಡಾ| ಶುಭಾದಾಸ್‌ ಮರವಂತೆ, ಡಾ| ಸತೀಶ ನಾಯ್ಕ, ಡಾ| ಅಜಿತ ಪ್ರಸಾದ್‌, ಮುನಿರಾಜ ರೆಂಜಾಳ, ಕೃಷ್ಣ ನೂರಿತ್ತಾಯ ಮತ್ತು ವೆಂಕಟೇಶ ಶಾಸ್ತ್ರಿ ಕಥಾಭಾಗವನ್ನು ಮುನ್ನಡೆಸಿ ಪ್ರವಚನ ನಡೆಸಿಕೊಟ್ಟರು.

- ಸಾಂತೂರು ಶ್ರೀನಿವಾಸ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next