ನವದೆಹಲಿ: ವಿಶ್ವದ ಅತೀ ಕುಳ್ಳ ಬಾಡಿ Bodybuilder (ದೇಹದಾರ್ಢ್ಯ ಪಟು) ಪ್ರತೀಕ್ ಮೋಹಿತೆ ಎಂಬವರು 2021ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಗೊಳ್ಳುವ ಮೂಲಕ ಭಾರತಕ್ಕೆ ಹಿರಿಮೆ ತಂದ ಕೀರ್ತಿ ಇವರದ್ದಾಗಿದೆ.
ಇದನ್ನೂ ಓದಿ:ಪುಲ್ವಾಮಾದಲ್ಲಿ ಬಸ್ ಅವಘಡ; ನಾಲ್ವರು ಮೃತ್ಯು, 28 ಮಂದಿ ಆಸ್ಪತ್ರೆಗೆ ದಾಖಲು
ಮೋಹಿತೆ ಮಹಾರಾಷ್ಟ್ರದ ರಾಯಗಢದವರು. ಇವರು ಇನ್ಸ್ ಟಾಗ್ರಾಮ್ ನ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದು, ತಮ್ಮ ಫಿಟ್ ನೆಸ್ ಕುರಿತ ಕಿರು ವಿಡಿಯೋಗಳನ್ನು ಇನ್ಸ್ ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
Related Articles
ಬಾಡಿ ಬಿಲ್ಡರ್ ಆಗಿ ಹೆಸರು ಗಳಿಸಿರುವ ಪ್ರತೀಕ್ ಇತ್ತೀಚೆಗೆ ಕುಟುಂಬ ಸದಸ್ಯರು ಹಾಗೂ ಗೆಳೆಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಗಿನ್ನೆಸ್ ದಾಖಲೆ ಬರೆದ ಪ್ರತೀಕ್ ಮೋಹಿತೆ (28ವರ್ಷ) 3 ಅಡಿ 4 ಇಂಚು ಎತ್ತರವಿದ್ದು, ಪತ್ನಿ ಜಯಾ (22 ವರ್ಷ) 4 ಅಡಿ 2 ಇಂಚು ಎತ್ತರವಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪ್ರತೀಕ್ ಜಯಾ ಅವರನ್ನು ಭೇಟಿಯಾಗಿದ್ದು, ಅಂದಿನಿಂದ ಇಬ್ಬರು ಆಪ್ತರಾಗಿದ್ದರು. ನಾನು ಅವಳನ್ನು ಕಂಡ ಕ್ಷಣವೇ ಆಕೆಯನ್ನು ಇಷ್ಟಪಟ್ಟಿರುವುದಾಗಿ ಪ್ರತೀಕ್ ಡೈಲಿ ಮೇಲ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.