Advertisement

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

04:24 PM Jan 21, 2022 | Team Udayavani |

ಪ್ರಥಮ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ನಟ ಭಯಂಕರ’ ಚಿತ್ರದ ಮೊದಲ ಪೋಸ್ಟರ್‌ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ.

Advertisement

“ನಟ ಭಯಂಕರ’ ಪೋಸ್ಟರ್‌ ಬಿಡುಗಡೆ ಮಾಡಿರುವ ಬಗ್ಗೆ ಮಾತನಾಡುವ ನಾಯಕ ನಟ ಕಂ ನಿರ್ದೇಶಕ ಪ್ರಥಮ್‌, “ಮುಖ್ಯಮಂತ್ರಿ ಅವರಿಂದಲೇ ನಮ್ಮ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿಸಬೇಕೆಂಬ ಹಂಬವಿತ್ತು. ಅದರಂತೆ ಈಗ ಪೋಸ್ಟರ್‌ ಬಿಡುಗಡೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಈಗಷ್ಟೇ ಕೊರೋನದಿಂದ ಚೇತರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಳಿ ತುಂಬಾ ಜನ ಹೋಗಲು ಅವಕಾಶವಿರಲಿಲ್ಲ. ಸೀಮಿತ ಜನರೊಂದಿಗೆ ಹೋಗಿ ಪೋಸ್ಟರ್‌ ಬಿಡುಗಡೆ ಮಾಡಿದೆವು. ಇನ್ನು ಪೋಸ್ಟರ್‌ ನೋಡಿದ ತಕ್ಷಣ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೋಸ್ಟರ್‌ ತುಂಬಾ ಚೆನ್ನಾಗಿದೆ. ನೀವು ಪ್ರಚಾರ ಮಾಡುವ ರೀತಿಯು ವಿಭಿನ್ನವಾಗಿದೆ’ ಎಂದು ಮನಸಾರೆ ಹಾರೈಸಿದರು ಎನ್ನುತ್ತಾರೆ.

ಇನ್ನು ಶಾಸಕ ಎಂ.ಪಿ ರೇಣುಕಾಚಾರ್ಯ ಚಿತ್ರತಂಡಕ್ಕೆ ಮುಖ್ಯಮಂತ್ರಿಗಳಿಂದ ಪೋಸ್ಟರ್‌ ಬಿಡುಗಡೆ ಮಾಡಿಸುವ ಇಂಥದ್ದೊಂದು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

“ಸದ್ಯ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ಸಿಎಂ ಬಿಝಿ ಯಾಗಿರುವು ದರಿಂದ, ವಾತಾವರಣ ತಿಳಿಯಾದ ಮೇಲೆ ಬಿಡುವು ಮಾಡಿಕೊಂಡು “ನಟ ಭಯಂಕರ’ ಸಿನಿಮಾ ನೋಡ ಬೇಕೆಂದು ಚಿತ್ರತಂಡ ಮನವಿ ಮಾಡಿಕೊಂಡಿದ್ದು, ಚಿತ್ರತಂಡದ ಮನವಿಗೆ ಸಿಎಂ ಸ್ಪಂದಿಸಿದ್ದಾರೆ ಎಂದಿದ್ದಾರೆ ಪ್ರಥಮ್‌.

Advertisement

Udayavani is now on Telegram. Click here to join our channel and stay updated with the latest news.

Next