Advertisement

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

06:51 PM May 08, 2024 | Team Udayavani |

ಬೆಂಗಳೂರು: ʼಕೆಜಿಎಫ್‌ʼ ಸರಣಿಯ ಬಳಿಕ ಪ್ರಶಾಂತ್‌ ನೀಲ್‌ ʼಸಲಾರ್‌ʼ ಮಾಡಿ ಮತ್ತೊಮ್ಮೆ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿದ್ದಾರೆ. ʼಕೆಜಿಎಫ್‌ʼ ಗುಂಗಿನಲ್ಲಿದ್ದ ಪ್ರೇಕ್ಷಕರು ʼಸಲಾರ್‌ʼ ನೋಡಿ ಫಿದಾ ಆಗಿದ್ದಾರೆ.

Advertisement

ಯಶ್‌ ವೃತ್ತಿ ಬದುಕಿಗೆ ತಿರುವು ಕೊಟ್ಟ ʼಕೆಜಿಎಫ್‌ʼ ಸರಣಿಯ ಮೂರನೇ ಭಾಗ ಬರುತ್ತಿರುವುದು ಗೊತ್ತೇ ಇದೆ. ಆದರೆ ʼಕೆಜಿಎಫ್‌ -3ʼ ಬಗ್ಗೆ ಬಿಗ್‌ ಅಪ್ಡೇಟ್‌ ಹೊರಬಿದ್ದಿರಲಿಲ್ಲ. ಇದೀಗ ನಿರ್ದೇಶಕರ ಪ್ರಶಾಂತ್‌ ನೀಲ್‌ ಅವರೇ ʼಕೆಜಿಎಫ್‌ -3ʼ ಬಗ್ಗೆ ಮಾತನಾಡುವ ಮೂಲಕ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ನಾವೀಗ ʼಸಲಾರ್-2ʼ  ಚಿತ್ರೀಕರಣಕ್ಕೆ ಸಿದ್ದವಾಗಿದ್ದೇವೆ. ಆದರೆ ʼಕೆಜಿಎಫ್‌ʼ ಹಾಗೂ ʼಸಲಾರ್‌ -1ʼ ಬಳಿಕ ನನಗೆ ಸ್ವಲ್ಪ ಬ್ರೇಕ್‌ ಬೇಕಿದೆ” ಎಂದಿದ್ದಾರೆ.

ʼಕೆಜಿಎಫ್‌ -3 ಆಗುತ್ತದೆ. ಅದರ ಸ್ಕ್ರಿಪ್ಟ್‌ ಕೂಡ ಆಗಿದೆ. ಒಂದು ವೇಳೆ ಅದರ ಸ್ಕ್ರಿಪ್ಟ್​ ಬರೆದಿರಲಿಲ್ಲ ಎಂದಿದ್ದರೆ. ನಾವು ಅದನ್ನು ಪಾರ್ಟ್‌ -2 ನಲ್ಲಿ ʼಕೆಜಿಎಫ್‌ -3ʼ ಬರುತ್ತೆ ಎನ್ನುವುದನ್ನು ತೋರಿಸುತ್ತಿರಲಿಲ್ಲ. ಕೊನೆಯಲ್ಲಿ ಎಲ್ಲರಿಗೂ ನಾವು ʼಕೆಜಿಎಫ್‌ -3  ಮಾಡುತ್ತೇವೆ ಎನ್ನುವುದು ತಿಳಿದಿತ್ತು. ಯಶ್‌ ಹಾಗೂ ವಿಜಯ ಕಿರಗಂದೂರು ಬೇರೆ ಬೇರೆ ಪ್ರಾಜೆಕ್ಟ್‌ ನಲ್ಲಿ ಬ್ಯುಸಿಯಾಗಿದ್ದಾರೆ.  ನಮ್ಮ ಎಲ್ಲಾ ಶೆಡ್ಯೂಲ್‌ ಗಳು ಮುಗಿದ ಬಳಿಕವಷ್ಟೇ ʼಕೆಜಿಎಫ್‌ -3ʼ ಪ್ರಾಜೆಕ್ಟ್‌ ಆರಂಭಿಸಲು ಸಾಧ್ಯವೆಂದು” ನೀಲ್‌ ಹೇಳಿದ್ದಾರೆ.

ಸದ್ಯ ಯಶ್‌ ಗೀತು ಮೋಹನ್‌ ದಾಸ್‌ ಅವರ ʼಟಾಕ್ಸಿಕ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ (2025 ರ ಏ.10 ರಂದು) ತೆರೆ ಕಾಣಲಿದೆ. ಇತ್ತ ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಹಾಗೂ ಆದಾದ ಬಳಿಕ ಜೂ.ಎನ್‌ ಟಿಆರ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next