Advertisement

Bihar ಸಿಎಂ ನಿತೀಶ್ ಕುಮಾರ್ ವಿರುದ್ಧ Prashant Kishor ವಾಗ್ದಾಳಿ

05:41 PM Apr 25, 2023 | Team Udayavani |

ಪಾಟ್ನಾ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟನ್ನು ರೂಪಿಸುವ ಪ್ರಯತ್ನಗಳ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ಮಂಗಳವಾರ ವಾಗ್ದಾಳಿ ನಡೆಸಿದರು.

Advertisement

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 2019 ರಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಉಲ್ಲೇಖಿಸಿ, ಬಿಹಾರ ಸಿಎಂ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಶೋರ್ ಹೇಳಿದರು.

ನಿತೀಶ್ ಕುಮಾರ್ ಅವರು ಕುಂಟು ಸರ್ಕಾರ ಹೊಂದಿದ್ದಾರೆ. ಅವರು ಮೊದಲು ಬಿಹಾರದ ಬಗ್ಗೆ ಚಿಂತಿಸಬೇಕು. ಒಬ್ಬರೇ ಒಬ್ಬ ಸಂಸದನನ್ನು ಹೊಂದಿಲ್ಲದ ಪಕ್ಷವು ದೇಶದ ಪ್ರಧಾನಿ ಯಾರಾಗಬೇಕು ಎಂದು ನಿರ್ಧರಿಸಲು ಹೋಗುತ್ತಿದ್ದಾರೆ. ರಾಜಕಾರಣದಲ್ಲಿ ಸ್ಥಾನವೇ ಇಲ್ಲದ ವ್ಯಕ್ತಿ, ಎಲ್ಲರನ್ನೂ ಒಗ್ಗೂಡಿಸಲು ಹೊರಟಿದ್ದಾರೆ” ಎಂದು ಕಿಶೋರ್ ಹೇಳಿದರು.

ಸೋಮವಾರ, ನಿತೀಶ್ ಕುಮಾರ್, ತೇಜಸ್ವಿ ಯಾದವ್ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕೂಡ ನಿತೀಶ್ ಕುಮಾರ್ ಭೇಟಿ ಮಾಡಿದ್ದರು.

Advertisement


ಭವಿಷ್ಯದ ದೃಷ್ಟಿಯಿಂದ ಎಲ್ಲಾ ವಿರೋಧ ಪಕ್ಷಗಳು ಮಾತುಕತೆ ನಡೆಸುವಂತೆ ಒತ್ತಾಯಿಸಿದ ನಿತೀಶ್ ಕುಮಾರ್, ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇನೆ. ಇತರ ಜನರು ಸಹ ಇರುತ್ತಾರೆ ಮತ್ತು ನಾವು ಕುಳಿತು ನಿರ್ಧರಿಸುತ್ತೇವೆ ಎಂದು ಹೇಳಿದ್ದರು.

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಪ್ರಶಾಂತ್ ಕಿಶೋರ್ “ಬಿಹಾರದ ಭವಿಷ್ಯವನ್ನು ಕೇಸರಿ ಪಕ್ಷವು ನಿತೀಶ್ ಕುಮಾರ್ ಅವರಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿದ್ದಾರೆ. “ಬಿಹಾರದಲ್ಲಿ ಬಿಜೆಪಿ ಹಿಂಬಾಲಕನ ಸ್ಥಾನ ಹೊಂದಿದೆ. ಅದು ಬಿಹಾರದ ಭವಿಷ್ಯವನ್ನು ನಿತೀಶ್‌ಗೆ ಮಾರಾಟ ಮಾಡಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next