Advertisement

ಹಲ್ಲೆ ಪ್ರಕರಣ: ಪ್ರಥಮ್‌ಗೆ ನಿರೀಕ್ಷಣಾ ಜಾಮೀನು

07:20 AM Jul 25, 2017 | Team Udayavani |

ಬೆಂಗಳೂರು: ನಟ ಭುವನ್‌ಗೆ ಕಚ್ಚಿ ಹಲ್ಲೆ ಮಾಡಿದ ಆರೋಪ ಪ್ರಕರಣದ ಆರೋಪಿ ಬಿಗ್‌ಬಾಸ್‌ ವಿನ್ನರ್‌ ಪ್ರಥಮ್‌ಗೆ 2ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತನ್ನ ವಿರುದಟಛಿ ಭುವನ್‌ ನೀಡಿದ ದೂರಿನ ಸಂಬಂಧ ತಲಘಟ್ಟಪುರ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್‌ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪ್ರಥಮ್‌ ಸೋಮವಾರ ನಿರೀಕ್ಷಣಾ ಜಾಮೀನು ಅರ್ಜಿಸಲ್ಲಿಸುವುದರೊಂದಿಗೆ, ನ್ಯಾಯಾಲಯಕ್ಕೆ ಶರಣಾದರು.

Advertisement

ಅರ್ಜಿ ವಿಚಾರಣೆ ವೇಳೆ ಪ್ರಥಮ್‌, ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಭುವನ್‌ ಮೇಲೆ ಹಲ್ಲೆ ಮಾಡಿಲ್ಲ, ಕಚ್ಚಿಲ್ಲ.
ದಯಮಾಡಿ ಜಾಮೀನು ನೀಡಬೇಕು ಎಂದು ನ್ಯಾಯಾಧೀಶರ ಬಳಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಾರ್ವಜನಿಕ ಜೀವನದಲ್ಲಿರುವ ನೀವು ಈ ರೀತಿಯ ವರ್ತನೆಯನ್ನು ಬಿಡಬೇಕು. ಮಾದರಿಯಾಗಿರಬೇಕು ಎಂದು ಬುದ್ಧಿವಾದ ಹೇಳಿದರು. ನಂತರ ಷರತ್ತುಗಳನ್ನು ವಿಧಿಸಿ ಪ್ರಥಮ್‌ಗೆ ಜಾಮೀನು ಮಂಜೂರು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next