Advertisement
ವೇವ್ಸ್ – ಮನರಂಜನೆಯ ಹೊಸ ಅಲೆ ಎಂಬ ಘೋಷಣೆಯಡಿ ಪ್ರಸಾರ ಭಾರತಿ ಈಗ ಒಟಿಟಿ ಕ್ಷೇತ್ರಕ್ಕೆ ಕಾಲಿಟ್ಟಿದೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಚಾಲನೆ ನೀಡಿದರು.
Related Articles
Advertisement
ಫೌಜಿ, 2. 20, ರಾಮಾಯಣ ಸೇರಿದಂತೆ ಹಲವಾರು ವಿಷಯಗಳು ವೇವ್ಸ್ ನಲ್ಲಿ ಲಭ್ಯವಿವೆ. ಇದರೊಂದದಿಗೆ ವೀಡಿಯೋ ಅನ್ ಡಿಮ್ಯಾಂಡ್ ಆಯ್ಕೆಯೂ ಇದೆ. 65 ಟಿವಿ ಚಾನೆಲ್ ಗಳು, ರೇಡಿಯೋ ಸ್ಟೇಷನ್ ಗಳು, ಉಚಿತ ಗೇಮ್ ಗಳು, ಮಲ್ಟಿ ಮೀಡಿಯಾ ಸೇವೆಯೂ ಸೇರಿದಂತೆ ಹಲವು ಸೌಲಭ್ಯಗಳು ವೇವ್ಸ್ ನಲ್ಲಿ ಲಭ್ಯ. ಇದರೊಂದಿಗೆ ಇ ಕಾಮರ್ಸ್ ವೇದಿಕೆಯೂ ವೇವ್ಸ್ ಆಗಲಿದೆ.
ಬೇಡಿಕೆಯ ಮೇಲೆ ವಿಡಿಯೋ:
ವಿಡಿಯೋ ಅನ್ ಡಿಮ್ಯಾಂಡ್ ಸೇವೆ ಉಳಿದ ಎಲ್ಲ ಒಟಿಟಿ ಗಳಿಗಿಂತ ವೇವ್ಸ್ ಅನ್ನು ವಿಭಿನ್ನವಾಗಿಸಬಹುದು. ಪ್ರಸಾರ ಭಾರತಿ ರಾಮಾಯಣ, ಮಹಾಭಾರತದಿಂದ ಹಿಡಿದು ಅಸಂಖ್ಯಾತ ಲಕ್ಷಾಂತರ ಗಂಟೆಗಟ್ಟಲೆ ನೋಡಬಹುದಾದ, ಆಲಿಸಬಹುದಾದ ಅಮೂಲ್ಯ ವಿಡಿಯೋ, ಆಡಿಯೋ ಕಂಟೆಂಟ್ ಗಳ ಸಂಗ್ರಹವನ್ನು ಹೊಂದಿದೆ. ಇವೆಲ್ಲವೂ ವೇವ್ಸ್ ನ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಇದನ್ನು ವೀಡಿಯೊ ಆನ್ ಡಿಮ್ಯಾಂಡ್ ನಡಿ ಒದಗಿಸುವ ಆಲೋಚನೆ ವೇವ್ಸ್ ನದ್ದು.
ವೇವ್ಸ್ ಡೌನ್ ಲೋಡ್ ಗೆ ಪ್ಲೇ ಸ್ಟೋರ್ ಗಳಲ್ಲಿ ಲಭ್ಯವಿದೆ. ಡೌನ್ ಲೋಡ್ ಉಚಿತವಾಗಿರಲಿದ್ದು, ಬಹುತೇಕ ಕಂಟೆಂಟ್ ಗಳು ಉಚಿತವಾಗಿರಲಿದೆ. ಕೆಲವು ವಿಶೇಷ (ಪ್ರೀಮಿಯಂ) ಎನ್ನುವ ಕಂಟೆಂಟ್ ಗಳಿಗ ಮಾತ್ರ ದರ ನಿಗದಿಯಾಗಲಿದೆ.