Advertisement

ಪ್ರಸಾದ್‌ರಾಜ್‌ ಕಾಂಚನ್‌ ಕ್ಷೇತ್ರದ ಎಲ್ಲಾ ಮನೆಗೆ ತಲುಪಿಸಿದ ತೃಪ್ತಿ: ಉಡುಪಿ ಕಾಂಗ್ರೆಸ್‌

04:51 PM May 09, 2023 | Team Udayavani |

ಉಡುಪಿ: ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಪ್ರಸಾದ್‌ರಾಜ್‌ ಕಾಂಚನ್‌ ಅವರ ಹೆಸರು ಘೋಷಣೆ ಆದ ತಕ್ಷಣವೇ ಉಳಿದ ಎಲ್ಲ ಆಕಾಂಕ್ಷಿಗಳು ಒಮ್ಮತದಿಂದ, ಸಹಸ್ರಾರು ಕಾರ್ಯಕರ್ತರು ಸುಡುವ ಬಿಸಿಲನ್ನು ಲೆಕ್ಕಿಸದೆ ಅಭ್ಯರ್ಥಿ ಪ್ರಸಾದ್‌ ಪರ ಶಕ್ತಿ ಮೀರಿ ಪ್ರಚಾರ ಕಾರ್ಯವನ್ನು ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು ಹೇಳಿದರು.

Advertisement

ರಾಜ್ಯ ಹಾಗೂ ಕೇಂದ್ರದ ಆಡಳಿತ ವಿರೋಧಿ ಅಲೆ ಎಲ್ಲ ಕಡೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಉಡುಪಿಯ ಅಭ್ಯರ್ಥಿಯ ಸಜ್ಜನಿಕೆ, ಸರಳತೆ ಬಗ್ಗೆಯೂ ಜನರ ಒಲವು ವ್ಯಕ್ತವಾಗುತ್ತಿತ್ತು. ಹಾಗಾಗಿ ಕಾಂಗ್ರೆಸ್‌ ಈ ಬಾರಿ ರಾಜ್ಯದಲ್ಲೂ ಉಡುಪಿಯಲ್ಲೂ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮನೆ ಮಾಡಿದೆ ಎಂದು ಹೇಳಿದರು.

ಕಾರ್ಯಕರ್ತರ ಶಕ್ತಿ ಮೀರಿದ ಶ್ರಮ
ಬ್ಲಾಕ್‌ ಅಧ್ಯಕ್ಷರು ಆಲ್ಲದೆ ಪ್ರಖ್ಯಾತ್‌ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಅಮೃತ್‌ ಶೆಣೈ, ದಿವಾಕರ ಕುಂದರ್‌, ನರಸಿಂಹಮೂರ್ತಿ, ಅಣ್ಣಯ್ಯ ಸೇರಿಗಾರ್‌, ಭಾಸ್ಕರ ರಾವ್‌ ಕಿದಿಯೂರು, ಮಹಾಬಲ ಕುಂದರ್‌, ಕುಶಲ ಶೆಟ್ಟಿ, ಮಹಮ್ಮದ್‌ ಶೀಶ್‌, ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ವೆರೋನಿಕಾ ಕರ್ನೆಲಿಯೊ, ಡಾ| ಸುನೀತಾ ಶೆಟ್ಟಿ, ದಿನೇಶ್‌ ಪುತ್ರನ್‌, ಹರೀಶ್‌ ಕಿಣಿ, ರೋಶನಿ, ಸುರೇಶ್‌ ಶೆಟ್ಟಿ ಬನ್ನಂಜೆ, ಕೀರ್ತಿ ಶೆಟ್ಟಿ, ಭಾಸ್ಕರ ಸೇರಿಗಾರ್‌, ಜನಾರ್ದನ ಶೆಣೈ ಅಂಬಲಪಾಡಿ, ವಿಜಯ ಹೆಗ್ಡೆ, ಸುಕೇಶ್‌ ಕುಂದರ್‌, ನಾಸೀರ್‌, ಹಮ್ಮದ್‌, ಶಶಿರಾಜ್‌ ಕುಂದರ್‌, ಜಯಾನಂದ್‌, ಸಂಧ್ಯಾ ವಡಭಾಂಡೇಶ್ವರ, ಶರತ್‌ ಶೆಟ್ಟಿ, ಲಕ್ಷ್ಮಣ ಅಂಬಲಪಾಡಿ, ಕೇಶವ ಕೋಟ್ಯಾನ್‌, ಮೀನಾಕ್ಷಿ ಮಾಧವ ಬನ್ನಂಜೆ, ಮಹಮ್ಮದ್‌ ಒಳಕಾಡು, ಶ್ರೀನಿವಾಸ ಹೆಬ್ಟಾರ್‌, ಲತಾ ಸೇರಿಗಾರ್‌, ಹಬೀಬ್‌ ಅಲಿ, ಹರೀಶ್‌ ಶೆಟ್ಟಿ, ಚಂದ್ರಮೋಹನ್‌, ಸುರೇಂದ್ರ ಆಚಾರ್ಯ, ಉದಯ್‌ ಆಚಾರ್ಯ, ಅಶೋಕ್‌ ಶೆಟ್ಟಿ ಮೈರ್ಮಾಡಿ, ಸುಧಾಕರ ಶೆಟ್ಟಿ ಮೈರ್ಮಾಡಿ, ಗೋಪಿ ನಾಯಕ್‌, ಗೀತಾ ವಾಗ್ಲೆ, ಜ್ಯೋತಿಹೆಬ್ಬಾರ್‌, ಸಾಯಿರಾಜ್‌, ಪ್ರಶಾಂತ್‌ ಪೂಜಾರಿ, ಐರಿನ್‌ ಅಂದ್ರಾದೆ, ಮಲ್ಲಿಕಾ ಪೂಜಾರಿ, ಗುರುಗಳಾದ ವಿಲಿಯಮ್‌ ಮಾರ್ಟಿಸ್‌, ನವೀನ್‌ ಬಂಗೇರ, ಅಲ್ತಾಫ್‌ ಅಹಮ್ಮದ್‌, ನವೀನ್‌ ಶೆಟ್ಟಿ, ಸದಾಶಿವ ಕಟ್ಟೆಗುಡ್ಡೆ, ಮಹೇಶ್‌ ಮೊಯ್ಲಿ ಬ್ರಹ್ಮಾವರ, ಮಿಥುನ್‌ ಅಮೀನ್‌, ಪ್ರಕಾಶ್‌ ಅಂದ್ರಾದೆ, ಲೆಸ್ಲಿ ಕರ್ನೆಲಿಯೋ, ಮಾಲತಿ ಕಾಡಬೆಟ್ಟು, ರವಿರಾಜ್‌, ಗಣೇಶ್‌ ನೆರ್ಗಿ, ಮಮತಾ ಶೆಟ್ಟಿ, ಜಯಶ್ರೀ ಶೇಟ್‌, ಸುದೇಶ್‌ ಶೇಟ್‌, ಯಾದವ ಆಚಾರ್ಯ, ಪ್ರಭಾಕರ ನಾಯಕ್‌, ಆರ್‌. ಕೆ. ರಮೇಶ್‌ ಪೂಜಾರಿ, ಭರತ್‌ ಮಣಿಪಾಲ, ಹರ್ಮಿಸ್‌ ನೊರೊನ್ಹಾ, ಪ್ರವೀಣ್‌ ಕೊಡವೂರು ಸೇರಿದಂತೆ ನೂರಾರು ಮುಖಂಡರು ಕ್ಷೇತ್ರದಾದ್ಯಂತ ಶಕ್ತಿ ಮೀರಿ ಪ್ರಚಾರ ಮಾಡುವುದರಲ್ಲಿ ಸಹಕಾರ ಹಾಗೂ ಪ್ರೋತ್ಸಾಹ ನೀಡಿದ್ದಲ್ಲದೆ ವಿವಿಧ ರೀತಿಯಲ್ಲಿ ಪ್ರಚಾರ ಮಾಡಿದ್ದು ಗೆಲುವಿನ ಭರವಸೆಯನ್ನು ಜಾಸ್ತಿ ಮಾಡಿದೆ ಎಂದು ಅಭ್ಯರ್ಥಿ ಪ್ರಸಾದ್‌ರಾಜ್‌ ಕಾಂಚನ್‌ ತಿಳಿಸಿದರು.

ಮತದಾರರ ಮನಸ್ಸು ಕಾಂಗ್ರೆಸ್‌ ಪರ ವಾಲಿದೆ, ನಮ್ಮ ಕರ್ತವ್ಯ ಪಾಲನೆ ಮಾಡಿದ್ದೇವೆ, ಪ್ರಸಾದ್‌ರಾಜ್‌ ಕಾಂಚನ್‌ ಗೆಲುವು ಉಡುಪಿಯ ಅಭಿವೃದ್ಧಿಯ ವಿಚಾರದಲ್ಲಿ ಹೊಸ ಅಧ್ಯಾಯ ಪ್ರಾರಂಭ ಮಾಡಲಿದೆ.
ರಮೇಶ್‌ ಕಾಂಚನ್‌, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಉಡುಪಿಗೆ ಪ್ರಸಾದ್‌ರಾಜ್‌ ಕಾಂಚನ್‌ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಇದು ಜನರ ತೀರ್ಮಾನ, ಕ್ಷೇತ್ರದಾದ್ಯಂತ ಜನರ ನಾಡಿ ಮಿಡಿತ ಈ ಬಾರಿ ಕಾಂಗ್ರೆಸ್‌ ಪರ ಇದೆ.
ದಿನಕರ ಹೇರೂರು,ಅಧ್ಯಕ್ಷರು ,ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌

Advertisement

ಡಬಲ್‌ ಇಂಜಿನ್‌ ಸರಕಾರ ಕೇವಲ ಜನರನ್ನು ಶೋಷಣೆ ಮಾಡಿದೆ, ಭ್ರಷ್ಟಾಚಾರ ಮಿತಿ ಮೀರಿದೆ, ಕುಡಿಯುವ ನೀರು ಸರಿಯಾಗಿ ಉಡುಪಿಯವರಿಗೆ ಸಿಗುತ್ತಿಲ್ಲ, ಒಳಚರಂಡಿ ಬೀದಿ ದೀಪ ಇಲ್ಲ, ಇಷ್ಟೆಲ್ಲಾ ಹಿಂಸೆ ಅನುಭವಿಸಿದ ಜನ ಬಿಜೆಪಿಗೆ ಮತ ಹಾಕುವುದು ಅಸಾಧ್ಯ.
ಅಮೃತ್‌ ಶೆಣೈ, ಕೆಪಿಸಿಸಿ ಮಾಧ್ಯಮ ಹಾಗೂ ಸಂವನ ವಿಭಾಗದ ಪ್ರಧಾನ ಕಾರ್ಯದರ್ಶಿ

ಉಡುಪಿಯ ಜನರಿಗೆ ಪ್ರಸಾದ್‌ರಾಜ್‌ ಕಾಂಚನ್‌ ಅವರು ಹೊಸ ಭರವಸೆ ಆಗಿ ಮೂಡಿ ಬಂದಿದ್ದಾರೆ, ಎಲ್ಲಾ ಸಮುದಾಯದವರನ್ನು ಸಮಾನವಾಗಿ ಗೌರವಿಸುವ ಸದ್ಗುಣವನ್ನು ನಾನು ಅವರಲ್ಲಿ ಕಂಡಿದ್ದೇನೆ.
ಪ್ರಖ್ಯಾತ್‌ ಶೆಟ್ಟಿ , ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ

ಜಾತ್ಯತೀತ ಹಾಗೂ ಸಂವಿಧಾನ ಪರ ಇರುವ ಕಾಂಗ್ರೆಸ್‌ ಅನ್ನು ಇನ್ನು ಮುಂದೆ ಅಪಪ್ರಚಾರದಲ್ಲಿ ಸೋಲಿಸಲು ಸಾಧ್ಯವಿಲ್ಲ, ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂಬುದು ಜನರಿಗೆ ಅರಿವಾಗಿದೆ.
ಮಹಮ್ಮದ್‌ ಶೀಶ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಮುಖಂಡ

ಕಾಂಗ್ರೆಸ್‌ ನೀಡಿದ ಗ್ಯಾರಂಟಿ ಯೋಜನೆ ನೇರವಾಗಿ ಜನರ ಜೀವನವನ್ನು ಸುಧಾರಣೆ ಮಾಡುತ್ತದೆ. ಇದನ್ನು ಕಾರ್ಯಕರ್ತರು ಮತದಾರರಿಗೆ ಮನವರಿಗೆ ಮಾಡಿದ್ದಾರೆ.
ದಿವಾಕರ ಕುಂದರ್‌, ಜಿ. ಪಂ. ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next