ಕುಷ್ಟಗಿ: ಇಲ್ಲಿನ ಶ್ರೀ ಭಾಗ್ಯದ ಆಂಜನೇಯ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳಿಗೆ ಮುಸ್ಲಿಂ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ಪ್ರಸಾದ ಸೇವೆ ಮಾಡಿರುವುದು ಗಮನಾರ್ಹ ಎನಿಸಿದೆ.
ಪುರಸಭೆ ಸದಸ್ಯರೂ ಆಗಿರುವ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಅವರು, ಅಂಜನಾದ್ರಿಗೆ ತೆರಳುವ ಹನುಮಮಾಲಾ ಭಕ್ತಾಧಿಗಳಿಗೆ ಕಳೆದ ಭಾನುವಾರ ರಾತ್ರಿ ಸಿಹಿ ಪಾಯಸ, ಅನ್ನ, ಸಾಂಬಾರ ಪ್ರಸಾದಕ್ಕೆ ವ್ಯವಸ್ಥೆ ಮಾಡಿದ್ದರು.
ನಂತರ ಮಾಲಾದಾರಿಗಳಿಗೆ ಪ್ರಸಾದ ಬಡಿಸಿ, ಅವರೊಟ್ಟಿಗೆ ಪ್ರಸಾದ ಸೇವಿಸಿದರು. ಹನುಮನಾಳ ಮಾಲಾಧಾರಿಗಳಿಗೆ ಸ್ವಯಂ ಪ್ರೇರೆಣೆಯಿಂದ ಪ್ರಸಾದ ಸೇವೆ ಮಾಡಿದ್ದೇನೆ. ನಮ್ಮ ರಂಜಾನ್ ಹಬ್ಬದ ಸಂದರ್ಭ ಹಿಂದೂಗಳು ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟ ಆಯೋಜಿಸಿ ಸೌಹಾರ್ದತೆ ಮೆರೆಯುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಹನುಮ ಮಾಲದಾರಿಗಳಿಗೆ ಈ ಅಳಿಲು ಸೇವೆ ಮಾಡಿರುವುದು ಸಂತಸವಾಗಿದೆ ಎಂದರು.