ಮುಂಬೈ: ಗೆಳತಿಯರನ್ನು ತಮಾಷೆ ಮೂಲಕ ಹೆದರಿಸಲು (Prank) ಹೋದ ಮಹಿಳೆಯೊಬ್ಬರು ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದು ಕೊನೆಯುಸಿರೆಳೆದಿರುವ ಘಟನೆ ಮುಂಬೈನ ಡೊಂಬಿವಿಲಿಯ ಗ್ಲೋಬ್ ಸ್ಟೇಟ್ ಕಟ್ಟಡದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಈಕೆಯನ್ನು ನಾಗಿನಾ ದೇವಿ ಮಂಜಿರಾಮ್ ಎಂದು ಗುರುತಿಸಲಾಗಿದೆ. ಹೆದರಿಸಲು ಓಡಿ ಬಂದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಮನಾಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಕಟ್ಟಡದ ಮೂರನೇ ಮಹಡಿಯಲ್ಲಿ ನಗಿನಾ ದೇವಿ ತನ್ನ ಗೆಳತಿಯರಿಗೆ ತಮಾಷೆ ಮಾಡಲು ಮುಂದಾದ ವೇಳೆ ಈ ದುರ್ಘಟನೆ ನಡೆದಿದೆ. ಆಕೆಯ ಮತ್ತೊಬ್ಬ ಗೆಳತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವುದು ವಿಡಿಯೋದಲ್ಲಿದೆ.
ಗುಡಿಯಾದೇವಿ ಎಂದೇ ಈ ಮಹಿಳೆ ಕಟ್ಟಡದಲ್ಲಿ ಜನಪ್ರಿಯರಾಗಿದ್ದರು. ಈಕೆಯ ಆಕಸ್ಮಿಕ ನಿಧನ ಮಕ್ಕಳಿಗೆ ಆಘಾತ ತಂದೊಡ್ಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:H.D.Revanna: ದೇವಸ್ಥಾನದಲ್ಲಿ ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಆಸ್ಪತ್ರೆಗೆ ದಾಖಲು