Advertisement

‘ವೈರಂ’; ಪ್ರಣಾಮ್‌ ಈಗ ಆ್ಯಂಗ್ರಿ ಯಂಗ್‌ಮ್ಯಾನ್‌

04:03 PM Jan 14, 2023 | Team Udayavani |

ಹಿರಿಯ ನಟ ದೇವರಾಜ್‌ ಪುತ್ರ ಪ್ರಣಾಮ್‌ ದೇವರಾಜ್‌ ನಟಿಸಿರುವ “ವೈರಂ’ ಚಿತ್ರದ ಟೀಸರ್‌ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಒಬ್ಬ ಆ್ಯಂಗ್ರಿ ಯಂಗ್‌ಮ್ಯಾನ್‌ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಚಿತ್ರ ವೈರಂ. ನಟ ದೇವರಾಜ್‌, ಚಂದ್ರಕಲಾ ದೇವರಾಜ್‌ ಹಾಗೂ ರಾಗಿಣಿ ಪ್ರಜ್ವಲ್‌ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ದೇವರಾಜ್‌, “ಕನ್ನಡ ಚಿತ್ರರಂಗ ಈಗ ಮತ್ತೆ ಬಿಝಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್‌ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

“ಚಿಕ್ಕ ವಯಸ್ಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ನಾಲ್ಕು ವರ್ಷಗಳ ನಂತರ ಈ ಸ್ಟೇಜ್‌ ಮೇಲೆ ನಿಂತು ಮಾತನಾಡುತ್ತಿದ್ದೇನೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್‌ ಬಾಯ್‌ ಆಗಿದ್ದೆ. ಈ ಸಿನಿಮಾದಲ್ಲಿ ಆ್ಯಕ್ಷನ್‌ ಹೀರೋ ಆಗಿದ್ದೇನೆ. ಸಾಯಿ ಶಿವನ್‌ ಅವರಲ್ಲಿ ತುಂಬಾ ವಿಶ್ವಾಸ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್‌ ಮಾಡಿದ್ದಾರೆ. ಛಾಯಾಗ್ರಾಹಕರ ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್‌ ವಿಲನ್‌ ಇದ್ದಾಗ. ನನಗೆ ಎರಡನೇ ಚಿತ್ರದಲ್ಲೇ ಗರುಡ ರಾಮ್‌ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ಕಿದೆ. ಶಂಕರ್‌ ಅಶ್ವಥ್‌ ಹಾಗೂ ವೀಣಾ ಸುಂದರ್‌ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕವಿರಾಜ್‌, ನಾಗೇಂದ್ರ ಪ್ರಸಾದ್‌, ರಾಮ್‌ ನಾರಾಯಣ್‌ ಹಾಡುಗಳನ್ನು ಬರೆದಿದ್ದಾರೆ’ ತಮ್ಮ ಸಿನಿಮಾ ಬಗ್ಗೆ ಹೇಳಿಕೊಂಡರು ಪ್ರಣಾಮ್‌.

ಚಿತ್ರದ ನಾಯಕಿ ಮೋನಾಲ್‌ ಮಾತನಾಡುತ್ತಾ, “ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್‌ ಸ್ಟೋರಿ ಚಿತ್ರದಲ್ಲಿದೆ’ ಎಂದರು.

ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್‌ ಮೆಸೇಜ್‌ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್‌ ಮಾಡುತ್ತಾರೆಂಬ ನಂಬಿಕೆಯಿದೆ’ ಎನ್ನುವುದು ಖಳನಾಯಕ ಗರುಡಾರಾಮ್ ಮಾತು.

Advertisement

ಉಳಿದಂತೆ ನಿರ್ದೆಶಕ ಸಾಯಿ ಶಿವನ್‌, ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು. ಗೋಪಿನಾಥ್‌ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರ ಸಾಗರ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next