Advertisement

ಶೆಟ್ರು ಹೀರೋ ಆದ್ರು; ಕಾಶೀಯಾತ್ರೆ ಹೊರಟ ಪ್ರಮೋದ್‌

04:21 PM Sep 05, 2022 | Team Udayavani |

ನಟ ಪ್ರಮೋದ್‌ ಶೆಟ್ಟಿ ಕಾಶೀಯಾತ್ರೆ ಹೊರಟಿದ್ದಾರೆ. ಅದು ಕೂಡಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರುವುದು ಪ್ರಮೋದ್‌ ಹೊಸ ಚಿತ್ರದ ಬಗ್ಗೆ. ಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಬೇಡಿಕೆಯ ನಟ ಎನಿಸಿಕೊಂಡಿರುವ ಪ್ರಮೋದ್‌ ಈಗ ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿದ್ದಾರೆ. ಅದು “ಕಾಶೀಯಾತ್ರೆ’ ಮೂಲಕ

Advertisement

ಇತ್ತೀಚೆಗೆ ಪ್ರಮೋದ್‌ ಶೆಟ್ಟಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಕಾಶೀಯಾತ್ರೆ ಗೆ ಹೊರಟಿರುವ ಮಧುಮಗನ ವೇಷದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್‌ ಶೆಟ್ಟಿ ಅವರ ವಿಭಿನ್ನ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ.

ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿನಯ್‌ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಕಿರುಚಿತ್ರ ನಿರ್ದೇಶಿಸಿರುವ ವಿನಯ್‌ ಶಾಸ್ತ್ರಿ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಈ ಚಿತ್ರಕ್ಕೆ ವಿಶ್ವಿ‌ ಸಂಗೀತ ನಿರ್ದೇಶನ ಹಾಗೂ ಸುನೀತ್‌ ಹಲಗೇರಿ ಅವರ ಛಾಯಾಗ್ರಹಣವಿದೆ.

ಪ್ರಮೋದ್‌ ಶೆಟ್ಟಿ, ಟಿ.ಎಸ್‌.ನಾಗಾಭರಣ, ಚಿತ್ತರಂಜನ್‌ ಕಶ್ಯಪ್‌, ಸ್ವರ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next