Advertisement

ಮುಸ್ಲಿಂ ಓಲೈಕೆ ರಾಜಕಾರಣವೇ ಭಯೋತ್ಪಾದನೆಗೆ ಮೂಲ ಕಾರಣ: ಪ್ರಮೋದ್‌ ಮುತಾಲಿಕ್‌

08:31 PM Nov 24, 2022 | Team Udayavani |

ಚಾಮರಾಜನಗರ: ಒಂದೆಡೆ ಸರ್ಕಾರದ ನಿರ್ಲಕ್ಷ್ಯ, ಇನ್ನೊಂದೆಡೆ ಕಾಂಗ್ರೆಸ್‌ನವರ ಮುಸ್ಲಿಂ ಓಲೈಕೆ ರಾಜಕಾರಣವೇ ರಾಜ್ಯದಲ್ಲಿ ಭಯೋತ್ಪಾದನೆಗೆ ಮೂಲ ಕಾರಣ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಓಲೈಕೆಯಿಂದ ಭಯೋತ್ಪಾದಕ ಚಟುವಟಿಕೆ ಬೆಳೆದಿದೆ. ಬೇಕಾದರೆ ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ. ದೇಶದ್ರೋಹಿ ಚಟುವಟಿಕೆಗೆ ಮೈಸೂರು ಪ್ರಯೋಗ ಶಾಲೆಯಾಗಿ ಬದಲಾಗಿದೆ, ಪಿಎಫ್ಐ ನಿಷೇಧಕ್ಕೊಳಗಾದರೂ ಪಿಎಫ್ಐ ಮಾನಸಿಕ ಸ್ಥಿತಿಯ ಸಾವಿರಾರು ಮಂದಿ ಇನ್ನೂ ಇದ್ದಾರೆ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ ನಡೆದಿದೆ. ಪೊಲೀಸರು ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಂಪಾ ಷಷ್ಠಿ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡದಿರುವ ನಿರ್ಧಾರ ಸ್ವಾಗತಾರ್ಹ. ಈ ದೇಶದಲ್ಲಿದ್ದುಕೊಂಡು, ಇಲ್ಲಿನ ಸವಲತ್ತು ಪಡೆದುಕೊಂಡು ದೇಶದ್ರೋಹಿ ಚಟುವಟಿಕೆ ನಡೆಸುವ‌ ಕಿಡಿಗೇಡಿಗಳು, ಭಯೋತ್ಪಾದಕರಿಂದ ಈ ನಿರ್ಬಂಧ ಎಂಬುದನ್ನು ಮೌಲ್ವಿಗಳು, ಮುಲ್ಲಾಗಳು ಅರಿಯಬೇಕು, ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ, ಪ್ರವೇಶ ನಿರ್ಬಂಧಿಸಬೇಕು. 100 ಮೀಟರ್‌ ಅಂತರದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂಬ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಪೊಲೀಸ್‌ ಇಲಾಖೆಯ ವೈಫ‌ಲ್ಯದಿಂದಾಗಿ ತಾರೀಕ್‌ ನಂತವರು ಬಾಂಬ್‌ ಹಾಕುತ್ತಿದ್ದಾರೆ. ಮೈಸೂರು ಅಥವಾ ಕರಾವಳಿಯಲ್ಲಿ ಎನ್‌ಐಎ ಘಟಕ ತೆರೆಯಬೇಕು. ಯೋಗಿ ಮಾದರಿ ರೀತಿ ಸರ್ಕಾರ ತರಲು ನಮ್ಮಲ್ಲಿ ತರಲೇಕೆ ಸಾಧ್ಯವಿಲ್ಲ, ಸಿದ್ದರಾಮಯ್ಯ ಹಿಂಪಡೆದ 200ಕ್ಕೂ ಕೇಸ್‌ ಗಳನ್ನು ಸರ್ಕಾರ ಏಕೆ ಇನ್ನೂ ರೀ ಓಪನ್‌ ಮಾಡಿಲ್ಲ, ಚುನಾವಣೆ ಬೆನ್ನೆತ್ತಿ ರಾಜ್ಯದ ಸುರಕ್ಷತೆ ಬಗ್ಗೆ ನಿರ್ಲಕ್ಷ ತೋರಿದ್ದಾರೆ, ತಾರೀಕ್‌ ಲಿಂಕ್‌ ಈಗ ತೀರ್ಥಹಳ್ಳಿಗೆ ಬಂದಿದೆ, ಬಿಜೆಪಿಯವರ ಈ ವರ್ತನೆ ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಹಿಂದುತ್ವಕ್ಕಾಗಿ, ಹಿಂದೂಗಳ ಕಷ್ಟ ಆಲಿಸಲು, ಹಿಂದೂವಿನ ಧ್ವನಿಯನ್ನು ವಿಧಾನಸಭೆಯಲ್ಲಿ ಮೊಳಗಿಸಲು ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ, ನಿರ್ಧಾರ ಅಚಲವಾಗಿದೆ. ಶ್ರೀರಾಮಸೇನೆ ರಾಜಕೀಯ ಪಕ್ಷವಲ್ಲ. ಇದು ಸಂಘಟನೆ. ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುವೆ.  ನನ್ನ ಜೊತೆ  ಇ°ನೂ 24 ಮಂದಿ ಪ್ರಖರ ಹಿಂದುತ್ವವಾದಿಗಳು ಚುನಾವಣೆಗೆ ನಿಲ್ಲಲ್ಲಿದ್ದು, ಡಿಸೆಂಬರ್‌ 2 ಇಲ್ಲವೇ 3 ನೇ ವಾರ ಕ್ಷೇತ್ರ ಘೋಷಿಸುತ್ತೇನೆ ಎಂದು ತಿಳಿಸಿದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next