Advertisement

ಬಿಜೆಪಿಯವರು ಓಟಿಗಾಗಿ ಸೆಕ್ಯೂಲರ್ ಆಗಲು ಹೊರಟಿದ್ದಾರೆ: ಪ್ರಮೋದ್ ಮುತಾಲಿಕ್ ವಾಗ್ದಾಳಿ

02:54 PM Oct 09, 2021 | Team Udayavani |

ಚಿಕ್ಕಮಗಳೂರು : ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ.  ಹಿಂದೂಗಳು ನಿಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವುದು ನೆನಪಿರಲಿ, ಹಿಂದೂಗಳಿಗೆ ನ್ಯಾಯ ಒದಗಿಸಿ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದರೆ, ಒಂದು ಓಟ್ ಬೀಳಲ್ಲ. ಬಿಜೆಪಿಯವರು ಓಟಿಗಾಗಿ ಸೆಕ್ಯೂಲರ್ ಆಗಲು ಹೊರಟಿದ್ದಾರೆ. ದೇವಸ್ಥಾನ ಕೆಡವಿದ್ದು, ಗಣೇಶೋತ್ಸವ, ದತ್ತಪೀಠ ವಿಚಾರದಲ್ಲಿ ತೆಗೆದುಕೊಂಡ ಕ್ರಮ ನೋಡಿದರೆ ಹಾಗೆಯೇ ಅನ್ನಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇರೋದೇ ಮುಸ್ಲಿಮರಿಗಾಗಿ.  ನಾಳೆ ಅವರ ಮಕ್ಕಳು, ಮೊಮ್ಮಕ್ಳು ಮುಸ್ಲಿಮರಾಗ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next