Advertisement

ಸೂಕ್ತ ಕ್ರಮಕ್ಕೆ ಪ್ರಮೋದ್‌ ಸೂಚನೆ

03:45 PM Apr 04, 2017 | |

ಉಡುಪಿ: ಜಿಲ್ಲಾಧಿಕಾರಿಯವರ ಮೇಲೆ ನಡೆದ ಹಲ್ಲೆ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಮೋದ್‌ ಮಧ್ವರಾಜ್‌ ಸೂಚನೆ ನೀಡಿಧಿದ್ದಾರೆ. ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪ್ರಚಾರದಲ್ಲಿರುವ ಸಚಿವರು ನೀಡಿದ ಪ್ರತಿಕ್ರಿಯೆ ಇಂತಿದೆ:

Advertisement

“ರವಿವಾರ ರಾತ್ರಿ 12.15ಕ್ಕೆ ತನ್ನ ಮೇಲೆ ಕೊಲೆ ಯತ್ನ ನಡೆಸಲಾಗಿದೆ ಎಂದು ಡಿಸಿಯಿಂದ ಕರೆ ಬಂತು. ಜಿಲ್ಲಾಧಿಕಾರಿಯವರು ದೂರು ದಾಖಲಿಸಿರುವುದಾಗಿ ಬೆಳಗ್ಗೆ 3.30ಕ್ಕೆ ಎಸ್ಪಿಧಿಯವಧಿರಿಂದ ಮಾಹಿತಿ ಬಂತು. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ ಅವರಿಬ್ಬರೇ ಯಾರಿಗೂ ಗೊತ್ತಾಗಬಾರದೆಂದು ಸೂಕ್ತ ಭದ್ರತೆ ಇಲ್ಲದೆ ಸ್ಥಳಕ್ಕೆ ಹೋದರು. ಭಾಸ್ಕರ ಮೊಗವೀರ ಅವರ ಮನೆಯೊಳಗೆ ಹೋಗಿ ಗನ್‌ಮ್ಯಾನ್‌ ಅವರು ಮನೆ ಹೊರಗೆ ಎಳೆದು ತರುವಾಗ ಅವನ ಬೆರಳಿಗೆ ಪೆಟ್ಟಾಯಿತು. ಇದರಿಂದ ಮನೆಯಲ್ಲಿದ್ದ ಮಹಿಳೆಯರು ಕೆರಳಿ ಮಾತಿನ ಚಕಮಕಿ ನಡೆಯಿತು.

“ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ ಇಬ್ಬರೇ ತೋರಿದ ಧೈರ್ಯ ಮೆಚ್ಚತಕ್ಕದ್ದು. ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಸ್ಪಿಯವರಿಗೆ ಸೂಚನೆ ನೀಡಿದ್ದೇನೆ. ಈಗ ಮರಳುಗಾರಿಕೆ ಸಿಆರ್‌ಝಡ್‌ ಮತ್ತು ನಾನ್‌ ಸಿಆರ್‌ಝಡ್‌ ಪ್ರದೇಶದಲ್ಲಿ ಸಕ್ರಮವಾಗಿ ನಡೆಯುತ್ತಿಲ್ಲ. ಹೀಗಾಗಿ ಕೆಲವೆಡೆ ಅಕ್ರಮಧಿವಾಗಿ ನಡೆಯುತ್ತಿದೆ. ನಮ್ಮ ಜಿಲ್ಲೆಯ ಮರಳು ಹೊರಜಿಲ್ಲೆಗಳಿಗೆ ಹೋಗಬಾರದು ಎಂದು ಜಿಲ್ಲಾಧಿಧಿಕಾರಿ, ಸಹಾಯಕ ಕಮಿಷನರ್‌ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದೆ. ನನ್ನದೇ ಆದೇಶದ ಪ್ರಕಾರ ಚೆಕ್‌ಪೋಸ್ಟ್‌ಧಿಗಳನ್ನೂ ನಿರ್ಮಿಸಿದ್ದರು. ಕೆಳಹಂತದ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲದ ಕಾರಣ ಜಿಲ್ಲಾಧಿಕಾರಿ, ಸಹಾಧಿಯಕ ಕಮಿಷನರ್‌ ಸ್ವತಃ ಕಾರ್ಯಾಚರಣೆ ನಡೆಸಿದರು. ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಡಿಸಿ, ಎಸಿ ಧೈರ್ಯ, ಪ್ರಾಮಾಣಿಕತೆ ಶ್ಲಾಘನೀಯವಾದರೂ ಇಂತಹ ಸಂದರ್ಭ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ನನ್ನ ಸಲಹೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next