ಬೆಂಗಳೂರು: ಬಹಭಾಷಾ ನಟ ಪ್ರಕಾಶ್ ರೈ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
2018 ರ ಅಂತ್ಯಕ್ಕೆ ಟ್ವೀಟ್ ಮಾಡಿರುವ ನಟ ರೈ ಅವರು 2019ರ ನೂತನ ವರ್ಷಕ್ಕೆ ಶುಭಕೋರಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ಆರಂಭ..ಹೆಚ್ಚು ಜವಾಬ್‌ಧಾರಿಗಳು…ನಿಮ್ಮ ಬೆಂಬಲದೊಂದಿಗೆ ಮುಂಬರುವ ಲೋಕಸಭಾ ಚುನಾವಣೆಗೆ ನಾನು ಪಕ್ಷೇತರನಾಗಿ ಸ್ಫರ್ಧಿಸಲಿದ್ದೇನೆ. ಕ್ಷೇತ್ರದ ವಿವರಗಳನ್ನು ಶೀಘ್ರ ತಿಳಿಸುತ್ತೇನೆ.ಅಬ್ ಕೀ ಬಾರ್ ಜನತಾ ಕೀ ಸರ್ಕಾರ್, ಜಸ್ಟ್ ಆಸ್ಕಿಂಗ್ ಇನ್ ಪಾರ್ಲಿಮೆಂಟ್ ಟೂ ಎಂದು ಟ್ವೀಟ್ ಮಾಡಿದ್ದಾರೆ.
Related Articles
ಸದಾ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಟೀಕಿಸುತ್ತಾ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರುವ ಜನಪ್ರಿಯ ನಟ, ಪ್ರಗತಿಪರ ಚಿಂತಕ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಮೂಡಿದೆ.