ಪುಣೆ: ಭ್ರಷ್ಟಾಚಾರ ನಿಗ್ರಹ ಮತ್ತು ಕ್ರೈಂ ಕಂಟ್ರೋಲ್ ಕಮಿಟಿಯ ಸಾಮಾಜಿಕ ರಕ್ಷಣಾಸೆಲ್‌ನ ಮಹಾರಾಷ್ಟ್ರದ ಅಧ್ಯಕ್ಷ
ರನ್ನಾಗಿ ಪುಣೆಯ ಪ್ರಕಾಶ್ ಪೂಜಾರಿ ಬೈಲೂರು ಇವರನ್ನು ಆಯ್ಕೆ ಮಾಡಲಾಗಿದೆ.
ಸೇವ್ ಇಂಡಿಯಾ ಫÅಮ್ ಕರಪ್ಶನ್ ಎನ್ನುವ ಘೋಷಣೆಯೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ರಾಜ್ ಲಾಲ್ ಸಿಂಗ್ ಪಟೇಲ್ ಇವರು ಪ್ರಕಾಶ್ ಪೂಜಾರಿ ಅವರಿಗೆ ನಿಯುಕ್ತಿ ಪತ್ರವನ್ನು ಕಳುಹಿಸಿದ್ದು, ಅದನ್ನು ಭ್ರಷ್ಟಾಚಾರ ನಿಗ್ರಹ ಕರಪ್ಶನ್ ಕ್ರೈಂ ಕಂಟ್ರೋಲ್ ಕಮಿಟಿಯ ಸಾಮಾಜಿಕ ರಕ್ಷಣಾ ಸೆಲ್‌ನ ರಾಷ್ಟ್ರೀಯ ಮಹಿಳಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಅವರು ಪುಣೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಅಧ್ಯಕ್ಷ, ಕತೆಗಾರ ಪಾಂಗಾಳ ವಿಶ್ವನಾಥ್ ಶೆಟ್ಟಿ, ಪುಣೆ ತುಳುಕೂಟದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಕಲ್ಲಾಡಿ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್ ಪೂಜಾರಿ ಅವರು ಮೂಲತಃ ಕಾರ್ಕಳದ ಬೈಲೂರಿನವರಾಗಿದ್ದು, ಪುಣೆಯಲ್ಲಿ ಕಳೆದ 15 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ಕಲಾವಿದರಾಗಿದ್ದು ರಂಗ ಸಂಗಮ ಕಲಾ ತಂಡದ ರೂವಾರಿಯಾಗಿ¨ªಾರೆ. ಪುಣೆ ತುಳುಕೂಟದ ಪಿಂಪ್ರಿ ಚಿಂಚಾÌಡ್ ಪ್ರಾದೇಶಿಕ ಸಮಿತಿಯ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.