Advertisement
ನಗರದ ಜವೇನಹಳ್ಳಿ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ದೇಶದಲ್ಲಿ ಬ್ಯಾನ್ ಮಾಡಲಾಗಿರುವ ಪಿಎಫ್ಐ ಮತ್ತು ಎಸ್ ಡಿಪಿಐ ಒಂದೇ ಅಲ್ಲ, ಆರ್‌ಎಸ್‌ಎಸ್, ಭಜರಂಗದಳ ಒಂದೆ ಅಲ್ಲ ಅನೇಕ ಸಂಘಟನೆಗಳಿವೆ. ಬ್ಯಾನ್ ಮಾಡುವುದಾದರೇ ಎಲ್ಲ ಒಟ್ಟಿಗೆ ಬ್ಯಾನ್ ಮಾಡಲಿ. ಒಂದೆರ ಡು ಸಂಘಟನೆ ಬ್ಯಾನ್ ಮಾಡುತ್ತೀನಿ ಎನ್ನುವುದು, ಇನ್ನೆರಡು ಬ್ಯಾನ್ ಮಾಡುವುದಿಲ್ಲ ಎನ್ನುವುದು ಸಮಾ ಜದಲ್ಲಿ ಮತ್ತೂಮ್ಮೆ ಗೊಂದಲ ಸೃಷ್ಟಿಸಿ ನೀವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ ಎಂದು ಸರಕಾರದ ವಿರುದ್ಧ ಹರಿಹಾಯ್ದರು.
Related Articles
Advertisement
ಇದೆಲ್ಲಾ ಯಾವುದು ಶಾಶ್ವತವಲ್ಲ. ಇದೆಲ್ಲಾ ಮಾಡುತ್ತಾ ಹೋದ್ರೆ ನಾವೆ ಸಮಾಜದಲ್ಲಿ ಒಡಕನ್ನು ತಂದಂತಾಗುತ್ತದೆ. ಈಗಾಗಲೇ ಸಮಾಜದಲ್ಲಿ ತುಂಬ ಒಡಕು ಉಂಟಾಗಿದೆ. ನಾವು ಯಾವತ್ತು ಸಮಾಜವನ್ನು ಒಗ್ಗೂಡಿಸಿಕೊಂಡು ಎಲ್ಲಾ ಸಮಾಜವನ್ನು ಒಟ್ಟಿಗೆ ದೇಶ ಮತ್ತು ರಾಜ್ಯವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಈತರ ನಿರ್ಧಾರಕ್ಕೆ ಕಡಿವಾಣ ಹಾಕಿ ಪರಿಶೀಲನೆ ಮಾಡಿ ಕೇಂದ್ರಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಈ ವಿಚಾರದ ಬಗ್ಗೆ ಆಯಾ ಮುಖ್ಯಮಂತ್ರಿಗಳು ಅರ್ಜಿ ಬರೆದು ಕೇಂದ್ರ ಸರಕಾರಕ್ಕೆ ಮನ ಮಾಡಲಿ. ನಾನು ಕೂಡ ಸೆಷೆನ್ಸ್ ಇದ್ದ ವೇಳೆ ಚರ್ಚೆ ಮಾಡಲಾಗುವುದು ಎಂದರು. ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಪಿಎಫ್ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ಕೈವಾಡ ಇದೆ ಎನ್ನುವ ಆರೋಪಗಳು ಕೇಳಿ ಬಂದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂಸದರು, ಇದನ್ನು ಪೊಲೀಸ್ ಹೇಳುತ್ತಿದ್ದಾರೊ, ಇತರರು ಹೇಳುತ್ತಿದ್ದರೊ ಅದಕ್ಕೆಲ್ಲ ದಾಖಲಾತಿಗಳು ಅವಶ್ಯಕ. ಗೃಹ ಸಚಿವರೂ ಕೂಡ ದಾಖಲಾತಿ ಸಮೇತ ಕೊಡಲಿ. ಚುನಾವಣೆಗೊಸ್ಕರ ಜನಾಂಗ ಒಡೆಯುವುದಕ್ಕಾಗಲಿ ಮತ್ತು ರಾಜ್ಯ ಒಡೆಯುವುದಕ್ಕಾಗಲಿ ದಯವಿಟ್ಟು ಮಾಡಬೇಡಿ. ವಿಶ್ವಾಸದಿಂದ ಜನ ಬದುಕು ನಡೆಸುತ್ತಿದ್ದು, ಇದರಲ್ಲಿ ನೀವೇ ವೇಷ ಹಾಕಿ ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಇಬ್ಬರಿಗೂ ಮನವಿ ಮಾಡುತ್ತೇನೆ. ಇದೆ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮುಖಂಡರಾದ ಗಿರೀಶ್ ಚನ್ನàರಪ್ಪ, ಮಹೇಶ್, ಇತರರು ಉಪಸ್ಥಿತರಿದ್ದರು.
ಕಮಿಷನ್ ಸರ್ಕಾರ ನನ್ನ ಆರೋಪವಲ್ಲ : ನಾನಾಗಲಿ, ಕುಮಾರಣ್ಣ ಆಗಲಿ, ರೇವಣ್ಣ ಆಗಲಿ 40 ಪರ್ಸೆಂಟ್ ಸರಕಾರ ಎಂದು ಹೇಳಲು ಹೋಗಲಿಲ್ಲ. ಸಿಎಂ ಸಭೆ ಕರೆದ ವೇಳೆ ಗುತ್ತಿಗೆದಾರ ಅಸೋಸಿಯೇಷನ್ ಇಡೀ ರಾಜ್ಯಕ್ಕೆ 40ಪರ್ಸೆಂಟ್ ಸರಕಾರವೆಂದು ತಿಳಿಸಿದ್ದಾರೆ. ನಾನು ಹೇಳಿಲ್ಲ. ವಿಪಕ್ಷ ನಾಯಕ ಸಿದ್ದರಾಮಣ್ಣ ಹೇಳಿಲ್ಲ. ಈಗ ಇಡೀ ಗ್ರಾಮೀಣ ಮಟ್ಟಕ್ಕೆ 40 ಪರ್ಸೆಂಟ್ ಸರಕಾರ ಎಂದು ಗೊತ್ತಾಗಿದೆ. ಇಂತಹ ಆರೋಪಗಳನ್ನು ಅಧಿಕಾರಿಗಳು ಹಣ ಪಡೆದು ಸರಕಾರದ ಮೇಲೆ ದೂರುತ್ತಿರಬೇಕು. ಇಲ್ಲ ಸರಕಾರವು ಹಣ ಪಡೆದು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿರಬೇಕು ಎಂದು ಗಂಬೀರವಾಗಿ ದೂರಿ ದರು. ಅಧಿಕಾರಿಗಳು ಸರಿಯಾಗಿರಬೇಕು ಎಂದರೇ ಸರಕಾರ ಅವರನ್ನು ಹದ್ಬಸ್ತಿನಲ್ಲಿ ಇಟ್ಟುಕೊಳ್ಳ ಬೇಕು ಎಂದು ಹೇಳಿದರು.