Advertisement

ಸದ್ಯದಲ್ಲೇ ಪ್ರಜ್ವಲ್‌ಗೆ ಪುರುಷತ್ವ ಪರೀಕ್ಷೆ ಸಾಧ್ಯತೆ

11:45 PM May 31, 2024 | Team Udayavani |

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ನನ್ನು ಸದ್ಯದಲ್ಲೇ ಪುರುಷತ್ವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ.

Advertisement

ಅಶ್ಲೀಲ ವೀಡಿಯೋದಲ್ಲಿರುವುದು ನಾನಲ್ಲ, ಅತ್ಯಾಚಾರ ಎಸಗಿಲ್ಲ ಮುಂತಾಗಿ ಅಫಿದವಿತ್‌ ಸಲ್ಲಿಸಿದರೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಸನದ ಪ್ರಜ್ವಲ್‌ ನಿವಾಸದಿಂದ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಸಂಸದರು ಬಳಸುತ್ತಿದ್ದ ಹಾಸಿಗೆ, ಹೊದಿಕೆ ಇತ್ಯಾದಿ ವಸ್ತುಗಳಲ್ಲಿದ್ದ ಡಿಎನ್‌ಎಗೂ ಪ್ರಜ್ವಲ್‌ ಡಿಎನ್‌ಎಗೂ ಹೋಲಿಕೆ ಮಾಡಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆಗಳಿವೆ.

ಅತ್ಯಾಚಾರ ಪ್ರಕರಣದಲ್ಲಿ ಈ ಹಿಂದೆ ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ ಸಹಿತ ಕೆಲವು ಆರೋಪಿಗಳಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಲೈಂಗಿಕ ಸಾಮರ್ಥ್ಯ ಸಾಬೀತುಪಡಿಸಲು ಈ ಪರೀಕ್ಷೆ ನಡೆಸಲಾಗುತ್ತದೆ.

ಏನೂ ಗೊತ್ತಿಲ್ಲ: ಹಾರಿಕೆ ಉತ್ತರ ಕೊಟ್ಟ ಪ್ರಜ್ವಲ್‌
ಬೆಂಗಳೂರು: ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿ ಗಳು ಪ್ರಜ್ವಲ್‌ಗೆ ಪ್ರಶ್ನೆ ಕೇಳಿದ್ದರೂ, ಎಲ್ಲದಕ್ಕೂ ಗೊತ್ತಿಲ್ಲ ಇತ್ಯಾದಿ ಹಾರಿಕೆಯ ಉತ್ತರ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಸಂತ್ರಸ್ತೆಯ ಫೋಟೋವನ್ನು ತೋರಿಸಿದಾಗಲೂ ಇವರು ಯಾರೆಂಬುದು ಗೊತ್ತಿಲ್ಲ. ಮನೆಯಲ್ಲಿ ಹಲವರು ಕೆಲಸಕ್ಕಿದ್ದರು ಎಂದಿದ್ದಾರೆ.

ರಾತ್ರಿಯೂ ವಿಚಾರಣೆ ಸಾಧ್ಯವಾಗಿಲ್ಲ
ಗುರುವಾರ ತಡರಾತ್ರಿ ಎಸ್‌ಐಟಿ ಕಚೇರಿಯಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕಲು ಎಸ್‌ಐಟಿ ಮುಂದಾಗಿತ್ತು. ಆಗ, ನನಗೆ ವಿಮಾನದಲ್ಲಿ ಪ್ರಯಾಣಿಸಿ ಸುಸ್ತಾಗಿದೆ. ಉತ್ತರಿಸಲು ಆಗುತ್ತಿಲ್ಲ ಎಂದು ಹೇಳಿ ಪ್ರಜ್ವಲ್‌ ವಿಶ್ರಾಂತಿಗೆ ಜಾರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next