Advertisement

NEET ನಲ್ಲಿ ಗುರುವಾಯನಕೆರೆ ಎಕ್ಸೆಲ್‌ ಕಾಲೇಜಿನ ಪ್ರಜ್ವಲ್‌ ಟಾಪರ್

08:08 AM Jun 06, 2024 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ 720 ಅಂಕಗಳ ಪೈಕಿ 710 ಅಂಕ ಪಡೆದು ಸಾಧನೆ‌‌ ಮಾಡಿದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಎಚ್.ಎಂ.ಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೇ ಸ್ವತಃ 10 ಲಕ್ಷ‌ ರೂ.‌‌ ಬಹುಮಾನ ನೀಡುವ ಮೂಲಕ ಸಾಧನೆಗೆ ವಿಶೇಷವಾಗಿ ಬೆನ್ನುತಟ್ಟಿದ್ದಾರೆ.

Advertisement

ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜೂ.5ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಎಚ್.ಎಂ. ತಂದೆ ಮರಿಸ್ವಾಮಿ ಎಚ್.ಎಂ., ತಾಯಿ ಸೌಮ್ಯ ಅವರ ಸಮ್ಮುಖದಲ್ಲಿ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ 10 ಲಕ್ಷ ರೂಪಾಯಿ ಬಹುಮಾನದ ಜತೆಗೆ ಸಮ್ಮಾನಿಸಿ ಗೌರವಿಸಿದ್ದಾರೆ.

ಪ್ರಜ್ವಲ್ ಒಂದು ಪ್ರಶ್ನೆಗೆ ಉತ್ತರಿಸುವಲ್ಲಿ ಕೊಂಚ ಎಡವಿದ‌ ಪರಿಣಾಮ 720 ರಲ್ಲಿ 720 ಅಂಕ ಗಳಿಸುವ ಸಾಧ್ಯತೆಯನ್ನು ಸ್ವಲ್ಪದರಲ್ಲೆ ಕೈಚೆಲ್ಲಿದ್ದಾರೆ. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಸಾಧನೆ‌ ಮಾಡಿದಂತಾಗುತ್ತಿತ್ತು.

ಪ್ರಜ್ವಲ್ ಎಚ್.ಎಂ. ಸಾಧನೆಯನ್ನು ಗುರುತಿಸುವ ಸಲುವಾಗಿ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಕಾಲೇಜು ‌ಆವರಣದಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ತೆರೆದ ವಾಹನದಲ್ಲಿ ಪೋಷಕರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಸಂಘ ಸಂಸ್ಥೆಗಳು ಪ್ರಜ್ವಲ್ ಅವರನ್ನು ಗೌರವಿಸಿದ್ದಾರೆ.

ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲ ಡಾ| ನವೀನ್ ಕುಮಾರ್ ಎಂ., ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ, ಶಾಂತಿರಾಜ್ ಜೈನ್, ಪ್ರಾಧ್ಯಾಪಕರಾದ ಶ್ರೀನಿಧಿ ರಾಜ್, ನಿಶಾ ಪೂಜಾರಿ, ವಿಲ್ಸನ್ ತಳ್ತೊಟ್ಟಿ, ಕೇಶವ್ ರಾವ್, ಡಾ| ಸತ್ಯನಾರಾಯಣ್ ಭಟ್, ಈಶ್ವರ್ ಶರ್ಮಾ, ಜೈಸ ಆಂಟನಿ, ಚಿಗುರು ಪ್ರಕಾಶ್, ಗ್ರಿಷಿನ್ ಡಿಸೋಜ, ಡಾ| ಆಸ್ಟಿನ್ ಡಿಸೋಜ, ಸಾರ್ವಜನಿಕ ಸಂಪರ್ಕಾಽಕಾರಿ ರಿಚರ್ಡ್ ಜೀವನ್ ಮೊರಾಸ್ ಮತ್ತಿತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next