Home

ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌

Home Stories
ಡೈನಾಮಿಕ್‌ ಪ್ರಿನ್ಸ್‌ ನಟ ಪ್ರಜ್ವಲ್‌ ದೇವರಾಜ್‌ಗೆ ಇಂದು (ಜು.4) ಜನ್ಮದಿನದ ಸಂಭ್ರಮ. ಪ್ರತಿವರ್ಷ ಪ್ರಜ್ವಲ್‌ ದೇವರಾಜ್‌ ತಮ್ಮ ಜನ್ಮದಿನವನ್ನು ಅಭಿಮಾನಿಗಳು, ಸ್ನೇಹಿತರು ಮತ್ತುಕುಟುಂಬ ವರ್ಗದ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದರು.
Home Stories
ಕೊರೊನಾ ಲಾಕ್‌ಡೌನ್‌ನಿಂದ ಕಳೆದ ವರ್ಷ ತಮ್ಮ ಬರ್ತ್‌ಡೇಯನ್ನು ಪ್ರಜ್ವಲ್‌ ದೇವರಾಜ್‌ ಸರಳವಾಗಿ ಆಚರಿಸಿಕೊಂಡಿದ್ದರು. ಇನ್ನೂ ಈ ವರ್ಷ ಕೂಡ ಕೊರೊನಾ ಎರಡನೇ ಅಲೆಯ ಆತಂಕ ಮುಂದುವರೆದಿರುವುದರಿಂದ, ಈ ಬಾರಿಯೂ ಪ್ರಜ್ವಲ್‌ ತಮ್ಮ ಹುಟ್ಟುಹಬ್ಬದ ಅದ್ಧೂರಿ ಆಚರಣೆಯಿಂದ ದೂರವಿರುವ ನಿರ್ಧಾರಕ್ಕೆ ಬಂದಿದ್ದಾರೆ.
Home Stories
“ಅಭಿಮಾನಿಗಳು ಕೊರೊನಾ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಮೂಲಕ ನನ್ನ ಹುಟ್ಟು ಹಬ್ಬಕ್ಕೆ ಹರಸಿ ಹಾರೈಸಿ ಎಂದುಕೇಳಿಕೊಳ್ಳುತ್ತೇನೆ’ ಎಂದು ಪ್ರಜ್ವಲ್‌ ಅಭಿಮಾನಿಗಳಲ್ಲಿ ಪ್ರಜ್ವಲ್‌ ಮನವಿ ಮಾಡಿದ್ದಾರೆ.
Home Stories
ಪ್ರಜ್ವಲ್‌ ದೇವರಾಜ್‌ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ “ವೀರಂ’ ಚಿತ್ರದ ಫ‌ಸ್ಟ್‌ ಟೀಸರ್‌, ಪ್ರಜ್ವಲ್‌ ಬರ್ತ್‌ಡೇ ಪ್ರಯುಕ್ತ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. “ಶಶಿಧರ್‌ ಸ್ಟುಡಿಯೋಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಶಶಿಧರಕೆ.ಎಂ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ವೀರಂ’ ಚಿತ್ರಕ್ಕೆ ಕುಮಾರ್‌ ರಾಜ್‌ (ಖದರ್‌) ನಿರ್ದೇಶನವಿದೆ. ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ರಚಿತಾ ರಾಮ್‌ ಜೋಡಿಯಾಗಿದ್ದಾರೆ.
Home Stories
ಪ್ರಜ್ವಲ್‌ ದೇವರಾಜ್‌ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸುತ್ತಿರುವ, ಗುರುದತ್‌ ಗಾಣಿಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ “ಮಾಫಿಯಾ’ ಎಂದು ಟೈಟಲ್‌ ಇಡಲಾಗಿದೆ. ಪ್ರಜ್ವಲ್‌ ಬರ್ತ್‌ಡೆ ಪ್ರಯುಕ್ತ ಚಿತ್ರತಂಡ “ಮಾಫಿಯಾ’ ಸಿನಿಮಾ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದೆ.
Home Stories
ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸುತ್ತಿರುವ, ಕೆ. ರಾಮನಾರಾಯಣ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ “ಅಬ್ಬರ’ ಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ” ಸಿ ಆ್ಯಂಡ್‌ ಎಂ ಮೂವೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಬಸವರಾಜ್‌ ಮಂಚಯ್ಯ ನಿರ್ಮಾಣವಿದೆ.
Home Stories
“ರಶ್ಮಿ ಫಿಲಂಸ್‌’ ಬ್ಯಾನರ್‌ನಲ್ಲಿ ಸುಮಂತ್‌ ಕ್ರಾಂತಿ ನಿರ್ಮಾಣದ ಎರಡನೇ ಚಿತ್ರದಲ್ಲಿ ಪ್ರಜ್ವಲ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದುಈ ಚಿತ್ರಕ್ಕೆ “ಪೊಗರು’ ಖ್ಯಾತಿಯ ನಂದಕಿಶೋರ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಪ್ರಜ್ವಲ್‌ ಬರ್ತ್‌ಡೇ ಪ್ರಯುಕ್ತ ಚಿತ್ರತಂಡ ಚಿತ್ರವನ್ನು ಘೋಷಣೆ ಮಾಡಿದ್ದು, ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.