Advertisement

Karavali; ಕೋಣಗಳ ಮಧ್ಯೆ ಕುಳಿತ ಪ್ರಜ್ವಲ್; ಹೊಸ ಪೋಸ್ಟರ್ ಬಂತು

01:13 PM Jul 04, 2024 | Team Udayavani |

ಪ್ರಜ್ವಲ್‌ ದೇವರಾಜ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಟನೆಯ “ಕರಾವಳಿ’ ಚಿತ್ರತಂಡ ಹೊಸ ಪೋಸ್ಟರ್‌ವೊಂದನ್ನು ರಿಲೀಸ್‌ ಮಾಡಿ ಶುಭ ಕೋರಿದೆ. ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ ಮತ್ತೂಂದು ಲುಕ್‌ ಗಮನ ಸೆಳೆಯುತ್ತದೆ.

Advertisement

ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್‌ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್‌ನಲ್ಲಿ ಪ್ರಜ್ವಲ್‌ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್‌ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಹೊಸ ಪೋಸ್ಟರ್‌ನಲ್ಲಿ ಪ್ರಜ್ವಲ್‌ ಕೋಣಗಳ ಮಧ್ಯೆ ಒಬ್ಬಂಟಿಯಾಗಿ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ ಕುಳಿತಿರುವ ಪ್ರಜ್ವಲ್‌ ಅವರ ಸಿಂಪಲ್‌ ವ್ಯಕ್ತಿತ್ವದ ಲುಕ್‌ ಆಕರ್ಷಕವಾಗಿದೆ. ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣ ಗೊಂಡಿದೆ. ಈ ಸಿನಿಮಾಗೆ ಗುರುದತ್‌ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲಂಸ್‌ ಹಾಗೂ ವಿಕೆ ಫಿಲಂ ನಿರ್ಮಾಣವಿದೆ.

ಅಸಹಾಕರಿಗೆ ನೆರವಾಗಿ ಎಂದ ನಟ

ಇಂದು ಪ್ರಜ್ವಲ್‌ ದೇವರಾಜ್‌ ಹುಟ್ಟುಹಬ್ಬ. ಆದರೆ, ಈ ಬಾರಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ತಾನು ಮನೆಯಲ್ಲಿ ಇಲ್ಲದಿರುವುದರಿಂದ ಈ ವರ್ಷ ನಿಮ್ಮ ಜೊತೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. “ಪ್ರತಿವರ್ಷ ನೀವು ಹಲವು ಸಾಮಾಜಿಕ ಕಾರ್ಯಗಳ ಮೂಲಕ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ. ಅದರಂತೆ ಈ ವರ್ಷ ನಿಮ್ಮ ಊರಿನ, ನಿಮ್ಮ ಅಕ್ಕ-ಪಕ್ಕದ ಶಾಲಾ ಮಕ್ಕಳಿಗ  ಸಹಾಯ ಮಾಡಿ. ಅನಾಥಾ ಶ್ರಮಗಳಲ್ಲಿ ಬಡವರಿಗೆ ಅಸಹಾಯ ಕರಿಗೆ ಸಹಾಯ ಹಸ್ತವನ್ನು ಚಾಚಿ. ಅವರಿಗೆ ನೆರವಾಗಿ’ ಎಂದಿದ್ದಾರೆ ಪ್ರಜ್ವಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next