ನವದೆಹಲಿ: ಯು.ಕೆ.ಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ಭೋಪಾಲ ಸಂಸದೆ ಪ್ರಜ್ಞಾ ಠಾಕೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
“ರಾಹುಲ್ ಗಾಂಧಿಯವರನ್ನು ದೇಶದಿಂದಲೇ ಹೊರಹಾಕಬೇಕು. ಚಾಣಕ್ಯನ ಸೂತ್ರದ ಪ್ರಕಾರ ವಿದೇಶಿ ಮಹಿಳೆಗೆ ಜನಿಸಿದ ಮಗ ದೇಶ ಪ್ರೇಮಿಯಾಗಲಾರ ಎನ್ನುವುದನ್ನು ರಾಹುಲ್ ಸಾಬೀತು ಮಾಡಿದ್ದಾರೆ. ದೇಶದ ರಾಜಕೀಯದಲ್ಲಿ ಅವರಿಗೆ ಅವಕಾಶವನ್ನೇ ಕೊಡಬಾರದು’ ಎಂದು ಕಿಡಿಕಾರಿದ್ದಾರೆ.
ಅದಕ್ಕೆ ತಿರುಗೇಟು ನೀಡಿದ ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ.ಮಿಶ್ರಾ “ಮಾಲೇಗಾಂವ್ ಸ್ಫೋಟದ ಆರೋಪಿಯಿಂದ ನಾವು ಕಲಿಯುವ ಅಂಶ ಏನೂ ಇಲ್ಲ’ ಎಂದು ಹೇಳಿದ್ದಾರೆ.