Advertisement

ಪ್ರಹ್ಲಾದಚಾರ್ಯ ವ್ಯಾಸರಾಜ ಮಠದ 41ನೇ ಪೀಠಾಧಿಪತಿ

03:45 AM Jul 03, 2017 | |

ತಿ.ನರಸೀಪುರ: ಸೋಸಲೆ ವ್ಯಾಸರಾಜ ಮಠದ 41ನೇ ಪೀಠಾಧಿಪತಿಯಾಗಿ ವಿದ್ವಾಂಸ ಡಿ. ಪ್ರಹ್ಲಾದಚಾರ್ಯರ ಪೀಠಾರೋಹಣ ಕಾರ್ಯಕ್ರಮ ಭಾನುವಾರ ನೆರವೇರಿತು. 

Advertisement

ಪಟ್ಟಣದ ಹಳೇ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿರುವ ವ್ಯಾಸರಾಜ ಮಠದ ಆವರಣದಲ್ಲಿ ವಿಜೃಂಭಣೆಯಿಂದ ನಡೆದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಅವರು ಸನ್ಯಾಸ ದೀಕ್ಷೆಯ ನಂತರ ಮಠಾಧೀಶರಾಗಿ ಅಧಿಕಾರ ಸ್ವೀಕರಿಸಿದರು. 

ಕಳೆದ ಕೆಲ ವರ್ಷಗಳಿಂದ ವಿವಾದಕ್ಕೊಳಗಾಗಿದ್ದ ವ್ಯಾಸರಾಜ (ಸೋಸಲೆ)ಮಠದ ನಿರ್ಗಮಿತ ವಿದ್ಯಾಮನೋಹರ ತೀರ್ಥಸ್ವಾಮೀಜಿ ಅವರ ಮೇಲೆ ಅನೇಕ ಆರೋಪಗಳಿದ್ದ ಹಿನ್ನೆಲೆಯಲ್ಲಿ ಅವರ ಬದಲಾವಣೆಗೆ ಭಕ್ತರು ಒತ್ತಡ ತಂದಿದ್ದರು. ಸರ್ಕಾರ ಮಠವನ್ನು ತನ್ನ ವಶಕ್ಕೆ ಪಡೆದುಕೊಂಡು 2012ರಲ್ಲಿ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಜೈರಾಜ್‌ ಅವರನ್ನು ನೇಮಕ ಮಾಡಿತ್ತು. ಬಳಿಕ ಅನೇಕ ಸಭೆ ನಡೆಸಿ ಮಠದ ಆರ್ಥಿಕ ವ್ಯವಹಾರಗಳ ಬಗ್ಗೆ ನಿರಂತರ ಮಾಹಿತಿ ಪಡೆದು ನಂತರ ಮಠವನ್ನು ಒಂದು ಹಂತಕ್ಕೆ ತರಲು ಪ್ರಯತ್ನಿಸಿದ ಫ‌ಲವಾಗಿ, ವಿದ್ಯಾಮನೋಹರ ತೀರ್ಥ ಸ್ವಾಮೀಜಿಯವರು ಪೀಠ ತ್ಯಾಗ ಮಾಡಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಭಾನುವಾರ ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕಕ್ಕೆ ಚಾಲನೆ ಸಿಕ್ಕಿತು. ರಾಜ್ಯ, ಹೊರರಾಜ್ಯಗಳ ಸಹಸ್ರಾರು ಭಕ್ತರು  ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next