Advertisement

Belagavi: ರಾಣಿ ಚನ್ನಮ್ಮ ವಿ.ವಿ ಮಹತ್ವದ ಶೈಕ್ಷಣಿಕ ಕೇಂದ್ರವಾಗಲಿದೆ: ಪ್ರಹ್ಲಾದ್ ಜೋಶಿ

06:21 PM Feb 20, 2024 | Team Udayavani |

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಮಹತ್ವದ ಶೈಕ್ಷಣಿಕ ಕೇಂದ್ರವಾಗಲಿದ್ದು, ಅದಕ್ಕಾಗಿ ೧೦೦ ಕೋಟಿ ರೂಪಾಯಿಗಳನ್ನು ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಲಾಗಿದೆ.

Advertisement

ಬೆಳಗಾವಿಯಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ಹೇಳಿಕೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಆನ್ ಲೈನ್ ಸಮಾವೇಶದ ಮೂಲಕ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಶತಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು. ಜಮ್ಮುವಿನಿಂದ ನೇರ ಪ್ರಸಾರಗೊಂಡ ಈ ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವೀಕ್ಷಿಸಿ ನಂತರ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ.

ಭಾರತದಲ್ಲಿ ಉನ್ನತ ಶಿಕ್ಷಣವನ್ನು ರಚನಾತ್ಮಕವಾಗಿ ಕಟ್ಟುವುದು ಭಾರತ ಸರ್ಕಾರದ ಆಲೋಚನೆಯಾಗಿದೆ ಎಂದರು.

ಪ್ರಧಾನಿಯವರ ಅಭಿವೃದ್ಧಿ ಸೂತ್ರವಾದ ಇದೇ ಸಮಯ, ಸರಿಯಾದ ಸಮಯ, ಭಾರತದ ಅತ್ಯಮೂಲ್ಯ ಸಮಯದೊಂದಿಗೆ ನಮ್ಮ ಯುವ ಜನತೆಗೆ ಭಾರತದ ಭವಿಷ್ಯದ ಕಲ್ಪನೆಯು ಉತ್ಕೃಷ್ಟತೆಯ ಉತ್ತುಂಗದ ಕನಸನ್ನು ನನಸಾಗಿಸುವುದು ಭಾರತದ ಸರ್ಕಾರದ ಸಂಕಲ್ಪವಾಗಿದೆ ಎಂದರು.

Advertisement

ಇದನ್ನೂ ಓದಿ: Bidar: ಕಾಂಗ್ರೆಸ್ ಸ್ಥಾಪಿಸಿದ ಶಾಲೆಯಲ್ಲೇ ಕಲಿತು ಇಂದು ಮೋದಿ ಪ್ರಧಾನಿಯಾಗಿದ್ದಾರೆ: ಖರ್ಗೆ

Advertisement

Udayavani is now on Telegram. Click here to join our channel and stay updated with the latest news.

Next