Advertisement

ಪ್ರಗ್ನೆನ್ಸಿ ಫಿಲಾಸಫಿ: ಗರ್ಭಿಣಿ ಏಕೆ ಹಾರರ್‌ ಸಿನಿಮಾ ನೋಡಬಾರದು?

12:05 PM Aug 30, 2017 | |

ಮಳೆಗಾಲದಲ್ಲಿ ಗರ್ಭಿಣಿಯರಿಗೆ ಡೆಂಘೀ, ಮಲೇರಿಯಾದಂಥ ಜ್ವರಗಳು ಬಾಧಿಸಬಾರದು. ಇಂಥ ಸೊಂಕು ಮತ್ತು ಮಾರಕ ರೋಗಗಳಿಂದ ರಕ್ಷಿಸಿಕೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳು ಇಲ್ಲಿವೆ…

Advertisement

1. ಭ್ರೂಣವು ಬೆಳವಣಿಗೆಯ ಹಂತದಲ್ಲಿರುವಾಗ ತಾಯಿಯಿಂದ ಪೌಷ್ಟಿಕತೆಯನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಪೌಷ್ಟಿಕ ಆಹಾರ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು.

2. ಗರ್ಭಾವಸ್ಥೆಯ ಸಮಯದಲ್ಲಿ ಸರಿಯಾದ ಕ್ರಮದಲ್ಲಿ ಔಷಧಗಳನ್ನು ಮತ್ತು ಲಸಿಕೆಗಳನ್ನು ತೆಗೆದುಕೊಳ್ಳಬೇಕು.

3. ಡೆಂಘೀ, ಮಲೇರಿಯಾಗಳು ಸೊಂಕು ರೋಗಗಳಾಗಿರುವುದರಿಂದ ಪೀಡಿತ ಪ್ರದೇಶಗಳ ಕಡೆಗೆ ಹೋಗದಂತೆ ಎಚ್ಚರವಹಿಸಬೇಕು.

4. ಸೋಂಕುಗಳನ್ನು ಹರಡುವ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಮತ್ತು ಬೆಚ್ಚಗಿರಲು ಉದ್ದನೆಯ ಬಟ್ಟೆಗಳನ್ನು ಧರಿಸಬೇಕು.

Advertisement

5. ಸುತ್ತಲಿನ ಪರಿಸರವನ್ನು ಸ್ವತ್ಛವಾಗಿರುವಂತೆ ನೋಡಿಕೊಳ್ಳಿ. ನೀವು ಇರುವ ಕೊಠಡಿಯಲ್ಲಿ ಶುಭ್ರವಾದ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಿ.

6. ಭಾರವಾದ ವಸ್ತುಗಳನ್ನು ಎತ್ತುವ ಮತ್ತು ನಿರಂತರವಾಗಿ ಕೆಲಸದಲ್ಲಿ ತೊಡಗಬೇಡಿ. ಸಮಯೋಜಿತವಾಗಿ ಮನೆಯವರ ನೆರವು ಪಡೆಯಿರಿ.

7. ಭಯ ಹುಟ್ಟಿಸುವ, ಹಾರರ್‌ ಸಿನಿಮಾಗಳನ್ನು ಮತ್ತು ಕ್ರೈಮ್‌ ಪುಸ್ತಕಗಳನ್ನು ಓದಬೇಡಿ. ಇವುಗಳಿಂದ ಮಾನಸಿಕವಾಗಿ ಉದ್ವಿಘ್ನತೆಗಳು ಎದುರಾಗಬಹುದು. ಈ ಉದ್ವಿಘ್ನತೆಗಳು ಮಗುವಿನ ಮೇಲೂ ಪರಿಣಾಮ ಬೀರಬಹುದು.

ಕವಿತಾ ದೊಡವಾಡ

Advertisement

Udayavani is now on Telegram. Click here to join our channel and stay updated with the latest news.

Next