Advertisement

ಪಿಎಂವಿವಿವೈ; ಪ್ರಧಾನ ಮಂತ್ರಿ ವ್ಯಯ ವಂದನ ಯೋಜನೆ

10:15 AM Jan 25, 2020 | mahesh |

ಪ್ರಧಾನ ಮಂತ್ರಿ ವಯ ವಂದನ ಯೋಜನೆಯ (ಪಿಎಂವಿವಿವೈ) ಮೂಲಕ ನಾವು ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದಾಗಿದೆ. ವಯಸ್ಸಾದ ಸಮಯದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಲು 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಪಿಎಂವಿವಿವೈ ಯೋಜನೆಯನ್ನು ಲೈಫ್ ಇನ್ಸುರೆನ್ಸ್‌ ಕಾರ್ಪೋರೇಶನ್‌ ಆಫ್ ಇಂಡಿಯಾ (ಎಲ್‌ಐಸಿ) ಮೂಲಕ ಜಾರಿಗೊಳಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್‌ 31 ಕಡೆಯ ದಿನವಾಗಿದೆ.

Advertisement

ರೂ. 10 ಸಾವಿರ
ಈ ಯೋಜನೆಯಂತೆ ತಿಂಗಳಿಗೆ ಹಿರಿಯ ನಾಗರಿಕರಿಗೆ 10 ಸಾವಿರ ರೂ. ದೊರೆಯಲಿದೆ. ಈ ಹಿಂದೆ ಇದ್ದ ಹೂಡಿಕೆ ಮಿತಿಯನ್ನು 7.5 ರೂ.ನಿಂದ 15 ಲಕ್ಷ ರೂ.ಗೆ ಏರಿಸಲಾಗಿದೆ.

ಮಾರ್ಚ್‌ 31 ಕಡೆಯ ದಿನ
2017ರಲ್ಲಿ ಜಾರಿಗೆ ಬಂದ ಈ ಯೋಜನೆಯ ಚಂದಾದಾರಿಕೆಯ ಅವಧಿಯನ್ನು ಹೆಚ್ಚಿಸಲಾಗಿತ್ತು. ಈ ಹಿಂದೆ ಪಿಎಂವಿವಿವೈಗೆ ಮೇ 14, 2017ರಿಂದ, ಮೇ 3, 2018ರ ವರೆಗಿನ ಸಮಯ ನಿಗದಿಪಡಿಸಲಾಗಿತ್ತು. ಬಳಿಕ ಅದನ್ನು 2020ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ.

ಶೇ. 8 ಬಡ್ಡಿದರ
ಈ ಯೋಜನೆಯಡಿ ಶೇ. 8ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರು ಮಾಸಿಕ 10,000 ರೂ. ವರೆಗೂ ಪಿಂಚಣಿ ಪಡೆಯಬಹುದಾಗಿದೆ. ವಾರ್ಷಿಕ, ಅರ್ಧ ವಾರ್ಷಿಕ, ತ್ತೈಮಾಸಿಕ, ಅಥವಾ ಮಾಸಿಕ ಆಧಾರದ ಮೇಲೆ ಪಿಂಚಣಿ ಆಯ್ಕೆ ಮಾಡುವ ಮೂಲಕ ವಾರ್ಷಿಕವಾಗಿ ಶೇ. 8ರಷ್ಟು ಬಡ್ಡಿದರ ನೀಡಲಿದೆ.

ಎಲ್ಲಿ ಖರೀದಿ
ಪಿಎಂವಿವಿವೈ ಅನ್ನು ಆನ್‌ಲೈನ್‌/ ಆಫ್ಲೈನ್‌ ಮತ್ತು ಮತ್ತು ಲೈಫ್ ಇನ್ಸುರೆನ್ಸ್‌ ಕಾರ್ಪೊರೇಷನ್‌ (ಎಲ್‌ಐಸಿ) ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು.

Advertisement

10 ವರ್ಷಗಳ ಪಾಲಿಸಿ
10 ವರ್ಷಗಳ ಪಾಲಿಸಿ ಅವಧಿಯ ಕೊನೆಯಲ್ಲಿ, ಪಿಂಚಣಿದಾರರು ಅಂತಿಮ ಪಿಂಚಣಿ ಕಂತುಗಳೊಂದಿಗೆ ಖರೀದಿ ದರವನ್ನು (ಪಿಂಚಣಿಗಾಗಿ ಹೂಡಿಕೆ ಮಾಡಲಾದ ಹಣ) ಹಿಂಪಡೆಯಲಿದ್ದಾರೆ. 10 ವರ್ಷಗಳ ಪಾಲಿಸಿಯ ಅವಧಿಯಲ್ಲಿ ಪಿಂಚಣಿದಾರ ಮರಣ ಹೊಂದಿದರೆ ಅವರ ಫ‌ಲಾನುಭವಿಗೆ ಆ ಮೊತ್ತವನ್ನು ಪಾವತಿಸಲಾಗುತ್ತದೆ.

ಯಾರು ಅರ್ಹರು
ಪಿಎಂವಿವಿವೈ ಹಿರಿಯ ನಾಗರಿಕರು (60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಈ ಸ್ಕೀಮ್‌ ಎಲ್‌ಐಸಿ ಮುಖಾಂತರ ಖರೀದಿಸಿ ಸೌಲಭ್ಯಗಳನ್ನು ನಿಮ್ಮದಾಗಿಸಬಹುದು.

ಅವಧಿ
10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಮಾಸಿಕ, ತ್ತೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.

ಸಾಲ ಸೌಲಭ್ಯವೂ ಇದೆ
ನೀವು ಒಟ್ಟು ಹೂಡಿಕೆ ಮಾಡಿದ ಮೊತ್ತದ ಶೇ. 75ರಷ್ಟು ಸಾಲವನ್ನು 3 ವರ್ಷ ಅವಧಿ ಮೇಲ್ಪಟ್ಟಲ್ಲಿ ನೀವು ಪಡೆಯಬಹುದು. ಉದಾ: ನೀವು 15 ಲಕ್ಷ ರೂ.ನ ಯೋಜನೆಗೆ ಚಂದಾದಾರರಾಗಿದ್ದರೆ ನೀವು 11.25 ಲಕ್ಷ ಸಾಲ ಪಡೆಯಬಹುದಾಗಿದೆ.

ಕನಿಷ್ಠ ಪಿಂಚಣಿ
1 ಸಾವಿರ / ತಿಂಗಳಿಗೆ
3 ಸಾವಿರ / 3 ತಿಂಗಳಿಗೆ
6 ಸಾವಿರ / 6 ತಿಂಗಳಿಗೆ
12 ಸಾವಿರ / ವಾರ್ಷಿಕ

ಗರಿಷ್ಠ ಪಿಂಚಣೆ
10 ಸಾವಿರ / ತಿಂಗಳಿಗೆ
30 ಸಾವಿರ / 3 ತಿಂಗಳಿಗೆ
60 ಸಾವಿರ / 6 ತಿಗಳಿಗೆ
1.20 ಲಕ್ಷ / 1 ವರ್ಷಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next