Advertisement

ಲಿಮ್ಕಾ ದಾಖಲೆ ನಿರೀಕ್ಷೆಯಲ್ಲಿ ಪ್ರಧೀಶ್‌ ಭಟ್‌

11:12 PM Jun 22, 2020 | Sriram |

ಬ್ರಹ್ಮಾವರ: ಕನ್ನಾರಿನ ಪ್ರಧೀಶ್‌ ಕೆ. ಭಟ್‌ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ಗಾಗಿ ಕೇವಲ 30 ನಿಮಿಷಗಳಲ್ಲಿ 30 ಚಿತ್ರಗಳನ್ನು ರಚಿಸಿ ದಾಖಲೆಯ ನಿರೀಕ್ಷೆಯಲ್ಲಿದ್ದಾರೆ.

Advertisement

ಲಾಕ್‌ಡೌನ್‌ ಸಂದರ್ಭ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನವರು ಆಕಾಂಕ್ಷಿಗಳಿಗೆ ಹಲವಾರು ಅವಕಾಶಗಳನ್ನು ನೀಡಿದ್ದರು. ಇದನ್ನು ಗಮನಿಸಿದ ಪ್ರಧೀಶ್‌ ವಿಶುವಲ್‌ ಆರ್ಟ್‌ ವಿಭಾಗದಲ್ಲಿ ಎ4 ಅಳತೆಯ ಪೇಪರ್‌ನಲ್ಲಿ ಇಂಕ್‌ ಪೆನ್‌ ಬಳಸಿ ಚಿತ್ರಗಳನ್ನು ಬರೆಯಲು ಮುಂದಾದರು. ಅದರಂತೆ ಶುಕ್ರವಾರ ಕನ್ನಾರಿನಲ್ಲಿರುವ ತನ್ನ ಮನೆಯಲ್ಲಿಯೇ ಚಿತ್ರಗಳನ್ನು ಬಿಡಿಸಿ ಅದನ್ನು ದಾಖಲು ಮಾಡಿದರು.

ಸಾಕ್ಷಿದಾರರಾಗಿ ಕೊಕ್ಕರ್ಣೆ ಪ.ಪೂ. ಕಾಲೇಜಿನ ಉಪನ್ಯಾಸಕ ಪ್ರಕಾಶ್‌ ಶೆಟ್ಟಿ, ಸಾಸ್ತಾವು ಸ.ಹಿ.ಪ್ರಾ. ಶಾಲಾ ಶಿಕ್ಷಕಿ ವನಿತಾ ಶೆಟ್ಟಿ ಮತ್ತು ಸಮಯಪಾಲಕರಾಗಿ ಚೇರ್ಕಾಡಿ ಶಾರದಾ ಪ್ರೌಢಶಾಲೆಯ ದೈ.ಶಿ. ಶಿಕ್ಷಕ ಪ್ರಸನ್ನ ಶೆಟ್ಟಿ ಮತ್ತು ಉಡುಪಿಯ ಮಾಸ್ಟರ್ ಆ್ಯತ್ಲೆಟಿಕ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಉದಯ ಕುಮಾರ್‌ ಶೆಟ್ಟಿ ಪಾಲ್ಗೊಂಡರು.

ಶೀಘ್ರ ಫಲಿತಾಂಶ
ದಾಖಲಿಸಿದ ಫೋಟೋ ಹಾಗೂ 30 ನಿಮಿಷಗಳ ವೀಡಿಯೋ ಚಿತ್ರಣವನ್ನು ಲಿಮ್ಕಾ ಆಫೀಸ್‌ಗೆ ಕಳುಹಿಸಲಾಗುವುದು. ಜೂನ್‌ 30ರಂದು ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಪ್ರಧೀಶ್‌ ಭಟ್‌ ತಿಳಿಸಿದ್ದಾರೆ.ಪ್ರಧೀಶ್‌ ಕೆ. ಚೇರ್ಕಾಡಿ ಅನ್ನಪೂರ್ಣಾ ನರ್ಸರಿಯ ಶ್ಯಾಮ್‌ ಪ್ರಸಾದ್‌ ಭಟ್‌ ಹಾಗೂ ಪ್ರಸನ್ನಾ ಪ್ರಸಾದ್‌ ಭಟ್‌ ದಂಪತಿಯ ಪುತ್ರ.

ಗಣ್ಯರ ಚಿತ್ರ
ಎ4 ಪೇಪರ್‌ನಲ್ಲಿ ಇಂಕ್‌ ಪೆನ್‌ ಬಳಸಿ ಕೇವಲ 30 ನಿಮಿಷಗಳಲ್ಲಿ ಸ್ವಾತಂತ್ರÂ ಹೋರಾಟಗಾರರು, ಜ್ಞಾನಪೀಠ ಪುರಸ್ಕೃತ ವ್ಯಕ್ತಿಗಳು, ಅಬ್ದುಲ್‌ ಕಲಾಂ, ವಿಶ್ವೇಶ್ವರಯ್ಯರಂತಹ ಮಹಾನ್‌ ವ್ಯಕ್ತಿಗಳ ಭಾವಚಿತ್ರಗಳನ್ನು ಚಿತ್ರಿಸಿದ್ದು ಅವರ ವ್ಯಕ್ತಿತ್ವಕ್ಕೆ ಸಲ್ಲಿಸಿದ ಗೌರವವೂ ಆಗಿದೆ.

Advertisement

ದಾಖಲೆ ವೀರರು
ಕಳೆದ ನಾಲ್ಕು ವರ್ಷಗಳ ಹಿಂದೆಯೇ 60 ನಿಮಿಷಗಳಲ್ಲಿ 59 ಚಿತ್ರಗಳನ್ನು ದಾರದಿಂದ ಚಿತ್ರಿಸಿ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌, ಅಸಿಸ್ಟ್‌ ವರ್ಲ್ಡ್ ರೆಕಾರ್ಡ್ಸ್‌, ಯೂನಿಕ್‌ ವಲ್ಡ್‌ ರೆಕಾರ್ಡ್ಸ್‌ ಮಾಡಿದ್ದಾರೆ. ಅಲ್ಲದೆ ಸಹೋದರ ಪ್ರಥ್ವೀಶ್‌ ಜತೆ ಸೇರಿ ರುಬಿಕ್ಸ್‌ ಕ್ಯೂಬ್‌ನಲ್ಲಿ ಗಿನ್ನೆಸ್‌ ದಾಖಲೆಗಳನ್ನು ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next